Home ದಾವಣಗೆರೆ INDIA ಒಕ್ಕೂಟದ ಸಭೆಗೆ ಸೋನಿಯಾ ಗಾಂಧಿ ಸರ್ಪ್ರೈಸ್ ಎಂಟ್ರಿ: ಕುರ್ಚಿ ಹೊಂದಿಸಲು ನಾಯಕರ ಪರದಾಟ!
ದಾವಣಗೆರೆನವದೆಹಲಿಬೆಂಗಳೂರು

INDIA ಒಕ್ಕೂಟದ ಸಭೆಗೆ ಸೋನಿಯಾ ಗಾಂಧಿ ಸರ್ಪ್ರೈಸ್ ಎಂಟ್ರಿ: ಕುರ್ಚಿ ಹೊಂದಿಸಲು ನಾಯಕರ ಪರದಾಟ!

Share
ಸೋನಿಯಾ ಗಾಂಧಿ
Share

ಹೊಸದೆಹಲಿ: ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ‘INDIA’ ಒಕ್ಕೂಟದ ಮಹತ್ವದ ಸಭೆಯಲ್ಲಿ ಸ್ವಾರಸ್ಯಕರ ಸನ್ನಿವೇಶವೊಂದು ನಡೆದಿದೆ. ಸಭೆಯ ಮಾಧ್ಯಮ ಗೋಷ್ಠಿ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅನಿರೀಕ್ಷಿತವಾಗಿ ಆಗಮಿಸಿದ್ದು, ನಾಯಕರ ಆಸನದ ವ್ಯವಸ್ಥೆಯಲ್ಲಿ ತೀವ್ರ ಗೊಂದಲ ಹಾಗೂ ಪರದಾಟ ಉಂಟಾಯಿತು.

ಮುಂಚಿತವಾಗಿ ನಿಗದಿಯಾಗಿದ್ದ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಅಥವಾ ಆಸನದ ನೇಮ್‌ಪ್ಲೇಟ್ ಇರಲಿಲ್ಲ. ಆದರೆ, ಅವರು ಸಭೆಗೆ ದಿಢೀರ್ ಎಂಟ್ರಿ ನೀಡುತ್ತಿದ್ದಂತೆ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಆಸನಕ್ಕಾಗಿ ಹುಡುಕಾಟ ನಡೆಸಿದರು. ಆರಂಭದಲ್ಲಿ ರಾಹುಲ್ ಗಾಂಧಿ ಅವರ ಆಸನದಲ್ಲಿ ಕುಳಿತುಕೊಳ್ಳುವಂತೆ ಸೋನಿಯಾ ಅವರಿಗೆ ಮನವಿ ಮಾಡಲಾಯಿತಾದರೂ, ಅವರು ತೇಜಸ್ವಿ ಯಾದವ್ ಅವರ ಆಸನದಲ್ಲಿ ಕುಳಿತರು.

ಬೆನ್ನಲ್ಲೇ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರಿಗೆ ತಮ್ಮ ಪಕ್ಕದಲ್ಲೇ ಸೂಕ್ತ ಆಸನ ಕಲ್ಪಿಸುವಂತೆ ಮನವಿ ಮಾಡಿದರು. ಅಂತಿಮವಾಗಿ ಖರ್ಗೆ ಅವರ ಒಂದು ಬದಿಯಲ್ಲಿ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಸುಪ್ರಿಯಾ ಸುಳೆ ಹಾಗೂ ಸಂಸದ ಹರೇಂದ್ರ ಮಲಿಕ್ ಕುಳಿತರೆ; ಇನ್ನೊಂದು ಬದಿಯಲ್ಲಿ ರಾಹುಲ್ ಗಾಂಧಿ, ಉಮರ್ ಅಬ್ದುಲ್ಲಾ, ಎಂ.ಎ. ಬೇಬಿ, ದೀಪಂಕರ್ ಭಟ್ಟಾಚಾರ್ಯ, ತೇಜಸ್ವಿ ಯಾದವ್ ಮತ್ತು ಕಪಿಲ್ ಸಿಬಲ್ ಆಸನ ಅಲಂಕರಿಸಿದರು.

ಸಿಇಸಿ ರಾಜೀನಾಮೆಗೆ ಪಟ್ಟು:

ಈ ಮಹತ್ವದ ಸಭೆಯಲ್ಲಿ ‘INDIA’ ಒಕ್ಕೂಟದ ನಾಯಕರು ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒಕ್ಕೊರಲಿನಿಂದ ಆಗ್ರಹಿಸಿದರು. ಅಲ್ಲದೆ, ಸಂಸತ್ತಿನಲ್ಲಿ ಸಿಇಸಿ ವಿರುದ್ಧ ದೋಷಾರೋಪಣೆ (Impeachment) ನಿರ್ಣಯ ತರಲು ನಿರ್ಧರಿಸಿದ್ದು, ಒಕ್ಕೂಟದಿಂದ ಹೊರಬಂದಿದ್ದ ಡಿಎಂಕೆ (DMK) ಕೂಡ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದೆ.

Share
Related Articles