ಸೌದಿ ಅರೇಬಿಯಾ / ನವದೆಹಲಿ: ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ಸಂಸ್ಥೆಯ FZ1073 ವಿಮಾನದಲ್ಲಿ ಆಗಸದಲ್ಲೇ ಭೀಕರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಿಮಾನದ ಸಹ-ಪೈಲಟ್ (ಕೋ-ಪೈಲಟ್) ದಿಢೀರನೆ ಮುಖ್ಯ ಪೈಲಟ್ ಆಗಿದ್ದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ.
ಆದರೆ, ತೀವ್ರವಾಗಿ ಗಾಯಗೊಂಡರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ಲಾಕ್ ತೆರೆದು ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಜಾಗರೂಕರಾದ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರ ಸಹ-ಪೈಲಟ್‌ನನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಸಂಭವಿಸಿದ ತಕ್ಷಣ ವಿಮಾನವು ತುರ್ತು ಸಂಕೇತಗಳಾದ ‘Squawk Code 7700’ (ಸಾಮಾನ್ಯ ತುರ್ತು ಪರಿಸ್ಥಿತಿ) ಹಾಗೂ ‘Squawk Code 7500’ (ವಿಮಾನ ಹೈಜಾಕ್ ಅಥವಾ ಅಕ್ರಮ ಪ್ರವೇಶ) ರವಾನಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕ್ಯಾಪ್ಟನ್ ಸ್ಮಿತ್, ವಿಮಾನವನ್ನು ಸೌದಿ ಅರೇಬಿಯಾದ ತಬುಕ್ (Tabuk) ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಪ್ರಸ್ತುತ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ತಬುಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ದೇಶಾದ್ಯಂತ ಪ್ರಶಂಸೆಯ ಹೊಳೆ:
ಕ್ಯಾಪ್ಟನ್ ಸ್ಮಿತ್ ಅವರ ಈ ಸಮಯಪ್ರಜ್ಞೆ ಮತ್ತು ವೀರಾವೇಶದ ಪ್ರಸಂಗಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಹಿಂದೆ ಅವರು ಸೇವೆ ಸಲ್ಲಿಸಿದ್ದ ಸ್ಪೈಸ್‌ಜೆಟ್ (SpiceJet) ಸಂಸ್ಥೆ ತೀವ್ರ ಸಂತಸ ವ್ಯಕ್ತಪಡಿಸಿದ್ದು, ಅವರ ಶೌರ್ಯಕ್ಕೆ ಸಾಟಿಯಿಲ್ಲ ಎಂದು ಪ್ರಶಂಸಿಸಿವೆ.
- Captain Smit Machchhar
- cockpit attack flydubai
- flydubai incident live updates
- FZ1073 emergency landing
- Indian pilot flydubai
- Israel Tel Aviv flight
- President Droupadi Murmu
- SpiceJet hero pilot
- squawk code 7500
- Tabuk Saudi Arabia
- ಕನ್ನಡ ನ್ಯೂಸ್.
- ಕ್ಯಾಪ್ಟನ್ ಸ್ಮಿತ್ ಮಚ್ಚಾರ್
- ದುಬೈ ಇಸ್ರೇಲ್ ಫ್ಲೈಟ್
- ಪೈಲಟ್ ಮೇಲಿನ ದಾಳಿ
- ಫ್ಲೈದುಬೈ ವಿಮಾನ ಘಟನೆ
- ಭಾರತೀಯ ಪೈಲಟ್
- ಸೌದಿ ಅರೇಬಿಯಾ ತುರ್ತು ಲ್ಯಾಂಡಿಂಗ್
- ಸ್ಕ್ವಾಕ್ ಕೋಡ್ 7500
- ಸ್ಪೈಸ್‌ಜೆಟ್ ಪೈಲಟ್





Leave a comment