ಬಾಲಿವುಡ್: ಹಿರಿಯ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನಿತಾ ಅಹುಜಾ ನಡುವಿನ ಬಹಿರಂಗ ಗಲಾಟೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಮಾಜಿ ನಟಿ ಸೋಮಿ ಅಲಿ ಗೋವಿಂದಾ ಪರವಾಗಿ ಧ್ವನಿ ಎತ್ತಿದ್ದಾರೆ. ಸಹ-ನಟಿ ಕೋಮಲ್ ಜೊತೆಗಿನ ಅಕ್ರಮ ಸಂಬಂಧದ ಆರೋಪ ಹಾಗೂ ವಯಸ್ಸಿನ ಕುರಿತು ಸುನಿತಾ ಮಾಡಿದ ಟೀಕೆಗಳನ್ನು ಸೋಮಿ ಅಲಿ ತಳ್ಳಿಹಾಕಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಳೆಯ ಫೋಟೋಗಳನ್ನು ಹಂಚಿಕೊಂಡ ಸೋಮಿ, “ಗೋವಿಂದಾ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಮತ್ತು ವಿನಮ್ರ ನಟರಲ್ಲಿ ಒಬ್ಬರು. ಕಿರಿಯ ನಟಿಯರೊಂದಿಗೆ ಅಭಿನಯಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಭೆಗೆ ವಯಸ್ಸಿನ ಮಿತಿ ಇರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಪ್ರಚಾರದ ವೇಳೆ ಸುನಿತಾ ಅವರು ಗೋವಿಂದಾ ಅವರನ್ನು ಕೋಮಲ್ ಅವರ ‘ಶುಗರ್ ಡ್ಯಾಡಿ’ ಎಂದು ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೋವಿಂದಾ, ತಮ್ಮ ಕೆಲಸಕ್ಕೆ ಅಡ್ಡಿಪಡಿಸದಂತೆ ಮತ್ತು ಗೆರೆ ದಾಟದಂತೆ ಪತ್ನಿಗೆ ಎಚ್ಚರಿಕೆ ನೀಡಿದ್ದರು. ಇದೀಗ ಸೋಮಿ ಅಲಿ ಬೆಂಬಲದೊಂದಿಗೆ ಈ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿದೆ.
Leave a comment