ಸಾಕಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳ ಹಿಂಬದಿ ಕವರ್‌ನಲ್ಲಿ ಹಣ, ಎಟಿಎಂ ಕಾರ್ಡ್ ಸೇರಿದಂತೆ ಇತರೆ ವಸ್ತುಗಳನ್ನು ಇಟ್ಟುಕೊಳ್ಳುವ ಹವ್ಯಾಸ ಹೊಂದಿರುತ್ತಾರೆ.
ಆದರೆ ಈ ಹವ್ಯಾಸ ಕೆಲವೊಮ್ಮೆ ಅಪಾಯ ತಂದೊಡ್ಡಬಹುದು. ಹೌದು ಹೀಗೆ ಹಣ ಅಥವಾ ಇತರೆ ವಸ್ತುಗಳನ್ನು ಕವರ್‌ನಲ್ಲಿ ಇಟ್ಟಾಗ ಒತ್ತಡದಿಂದ ಫೋನ್ ಬಿಸಿಯಾಗುತ್ತದೆ. ಅಷ್ಟೇ ಅಲ್ಲದೆ ಕೆಲ ಸಂದರ್ಭಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಪೋನ್ ಕವರ್‌ನಲ್ಲಿ ಹಣ ಇಡುವುದನ್ನು ತಪ್ಪಿಸಿ. ನಿಮ್ಮ ಪ್ರೀತಿ ಪಾತ್ರರಿಗೂ ಈ ರೀತಿ ಮಾಡದಂತೆ ಸಲಹೆ ನೀಡಿ.