SUDDIKSHANA KANNADA NEWS/ DAVANAGERE/DATE:23_09_2025
ಸಿರಿಗೆರೆ: ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 34 ನೇ ಶ್ರದ್ಧಾಂಜಲಿ ಸಮಾರಂಭ ನಡೆಯಿತು.
READ ALSO THIS STORY: ತುಂಗಭದ್ರ ನದಿಯಲ್ಲಿ ಬಿದ್ದಿದ್ದ ವೃದ್ಧೆ: 112 ಪೊಲೀಸರು ಎಂಟ್ರಿ ಬಳಿಕ ಮುಂದೇನಾಯ್ತು?
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪಾಲ್ಗೊಂಡು ಮಾತನಾಡಿ ‘ಜಗದ ಒಳಿತಿಗಾಗಿ ಜನಿಸಿ ಸಾಧನೆಯಿಂದ ಸಾರ್ಥಕ್ಯದೆಡೆಗೆ ಸಾಗಿ ಬಸವತತ್ವವನ್ನು ಪ್ರತಿಪಾದಿಸಿದ ಶ್ರೇಷ್ಠ ಸಂತ ಶಿವಕುಮಾರ ಶ್ರೀಗಳಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು’ ಎಂದು ತಿಳಿಸಿದರು.
ಬಸವಾದಿ ಶರಣರ ಸಾಮಾಜಿಕ ಕ್ರಾಂತಿಯ ಹಾದಿಯಲ್ಲಿಯೇ ಸಿರಿಗೆರೆಯಲ್ಲಿ ವಿಶ್ವಬಂಧು ಗೌರವ ಪಡೆದ ಮರುಳ ಸಿದ್ಧರಂತಹ ಪುಣ್ಯ ಪುರುಷರು ಬೆಳಗಿದ ಜ್ಯೋತಿ ಇಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮೂಲಕ ಪ್ರಜ್ವಲಿಸಿ ಲಕ್ಷಾಂತರ ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ಬದುಕಿನ ಮಾರ್ಗ ತೋರಿಸಿಕೊಡುತ್ತಿದೆ. ಸ್ವತಃ ಮಹಾನ್ ವಿದ್ವತ್ ಸಾಧನೆ ಮಾಡಿರುವ ಪೂಜ್ಯ ಶ್ರೀಗಳು ಸಮ ಸಮಾಜವನ್ನು ಕಟ್ಟಲು ತ್ರಿವಿಧ ದಾಸೋಹದ ಕ್ರಾಂತಿಯ ಜೊತೆಗೆ ಕೈಗೊಂಡಿರುವ ಜಲ ಕ್ರಾಂತಿಯಂತಹ ಮಹತ್ ಕಾರ್ಯಗಳನ್ನು ಸ್ಮರಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗದಗದ ಪರಮಪೂಜ್ಯ ಶ್ರೀ ಅಭಿನವ ಶಿವಾನಂದ ಶ್ರೀಗಳು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್. ಬಸವರಾಜಪ್ಪ, ಸೇರಿದಂತೆ ಹರಗುರುಚರಮೂರ್ತಿಗಳು, ಸಮಾಜದ ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.