ಏಕಕಾಲಕ್ಕೆ ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆ ಅಯೋಜಿಸುವುದು ದೇಶದ ಸಂವಿಧಾನಕ್ಕೆ ಮತ್ತು ಒಕ್ಕೂಟಕ್ಕೆ ವಿರುದ್ಧವಾದುದು ಎಂದು ಪ್ರಿಯಾಂಕ ಗಾಂಧಿ ಟೀಕಿಸಿದ್ದಾರೆ.
ಏಕಕಾಲಕ್ಕೆ ಚುನಾವಣೆ ಆಯೋಜಿಸುವ ಎರಡು ಮಸೂದೆಯನ್ನು ಮಂಡಿಸಿದ ಸಂದರ್ಭದಲ್ಲಿ ಕಾವೇರಿದ ಚರ್ಚೆಯಲ್ಲಿ ಅವರು ಮಾತನಾಡಿದರು.
ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಸಾಮಾನ್ಯ ಮಸೂದೆಯು ಒಕ್ಕೂಟ ರಚನೆಗೆ ವಿರುದ್ಧವಾದದ್ದು.ಎಂದು ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದರು.ಮತ ವಿಭಜನೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಾಗ ಮಸೂದೆ ಮಂಡಿಸಲಾಯಿತು