ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ಸಿಲಿಕಾನ್ ಸಿಟಿ; ಪೊಲೀಸ್ ಇಲಾಖೆಯ ತಯಾರಿ ಹೇಗಿದೆ?

On: December 31, 2024 9:18 AM
Follow Us:
---Advertisement---

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್,ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ ನೀಡಲಾಗಿದೆ. ಆದ್ರೆ ರಾತ್ರಿ 1ರಿಂದ 2 ಗಂಟೆಯೊಳಗೆ ನ್ಯೂ ಇಯರ್​ ಸೆಲೆಬ್ರೇಷನ್​ ಮುಗಿಸಬೇಕು. ರಾತ್ರಿ 9 ಗಂಟೆ ನಂತರ ನಗರದ ಪ್ರಮುಖ ಫ್ಲೈಓವರ್​ಗಳು​ ಬಂದ್ ಆಗಲಿವೆ. ಸಂಜೆ 7 ಗಂಟೆ ಬಳಿಕ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ವಾಹನ ಸಂಚಾರ ಬಂದ್ ಆಗಲಿದ್ದು. ಲೌಡ್ ಸ್ಪೀಕರ್, ಪಟಾಕಿ ಸಿಡಿಸೋಕೆ ನಿರ್ಬಂಧ ಹೇರಲಾಗಿದೆ. ಡ್ರಿಂಕ್ ಆಂಡ್ ಡ್ರೈವ್, ವೀಲಿಂಗ್ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿದ್ರೆ ಮುಲಾಜಿಲ್ಲದೆ ಇಲ್ದೆ ಕ್ರಮ ಕೈಗೊಳ್ಳಲಾಗುವುದು. ಸೆಲೆಬ್ರೇಷನ್ಸ್​​ಗೆ ಬರೋ ಜನರ ಮೇಲೆ ನಿಗಾ ಇಡೋದಕ್ಕೆ ದೊಡ್ಡ ದೊಡ್ಡ ಸ್ಕ್ರೀನ್​ಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನು ನ್ಯೂಇಯರ್​ ಸೆಲೆಬ್ರೇಷನ್​ಗೆ ಬರುವವರಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ಮತ್ತು ಬಿಎಂಸಿಟಿ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಿದೆ. ಮೆಟ್ರೋ ರೈಲುಗಳು ಜನವರಿ 1ರ ನಡುಕಿನ ಜಾವ 2 ಗಂಟೆಗೆವರೆಗೆ ಸಂಚಾರ ನಡೆಸಲಿದೆ. ಇನ್ನು ಎಂಜಿ ರೋಡ್​ನಿಂದ ನಗರದ ಒಟ್ಟು 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್​ಗಳು ರಾತ್ರಿ 11 ಗಂಟೆಯಿಂದ ನಸುಕಿನ ಜಾವ 2 ಗಂಟೆಯವರೆಗೆ ಸಂಚರಿಸಲಿವೆ. ಜೊತೆಗೆ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್​ಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ.
ಹೊಸವರ್ಷವನ್ನ ಭರಮಾಡಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ನ್ಯೂ ಇಯರ್‌ನ ಅದ್ಧೂರಿಯಾಗಿ ಆಚರಿಸಲು ರಾಜಧಾನಿ ರೆಡಿಯಾಗಿದೆ. ಆದ್ರೆ, ಸೆಲಬ್ರೇಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜನರು ಎಚ್ಚರಿಕೆ ವಹಿಸಿದರೆ ಇನ್ನೂ ಒಳಿತು.

Join WhatsApp

Join Now

Join Telegram

Join Now

Leave a Comment