ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿದ್ದರಾಮಯ್ಯರಿಗೆ ಅದೃಷ್ಟ ತಂದುಕೊಟ್ಟ ದಾವಣಗೆರೆ ನೆಲ: ಸಿಎಂ ಆಗುವ ಮುನ್ಸೂಚನೆ ಕೊಟ್ಟಿದ್ದೇ ಸಿದ್ದರಾಮೋತ್ಸವ

On: May 18, 2023 11:34 AM
Follow Us:
---Advertisement---

SUDDIKSHANA KANNADA NEWS| DAVANAGERE

ದಾವಣಗೆರೆ(DAVANAGERE): ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ರಾಜಕಾರಣದ ಇತಿಹಾಸದಲ್ಲಿ ಎಲ್ಲಾ ಪಕ್ಷಗಳಿಗೂ ಅದೃಷ್ಟದ ನೆಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ನಂಬಿರುವುದು ಹಳೆಯ ವಿಚಾರ. ಆದ್ರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಹೈಕಮಾಂಡ್ ಸಹ ಘೋಷಿಸಿದೆ. ಆದ್ರೆ, ನಿಜಕ್ಕೂ ಈ ಬಾರಿ ಸಿಎಂ ಗಾದಿಗೇರಲು ಸಿದ್ದರಾಮಯ್ಯರಿಗೆ ಕಾರಣವಾಗಿದ್ದೇ ಸಿದ್ದರಾಮೋತ್ಸವ.

ರಾಜ್ಯದ ಇತಿಹಾಸದಲ್ಲಿ ನಾಯಕನೊಬ್ಬನ ಹುಟ್ಟುಹಬ್ಬ ಆಚರಣೆಗೆ ಸಿಕ್ಕ ಸ್ಪಂದನೆ, ಸೇರಿದ ಜನಸ್ತೋಮ ಇದಕ್ಕೆ ಸಾಕ್ಷಿ. ಮಾಜಿ ಸಿಎಂ ಬಂಗಾರಪ್ಪ ಅವರು ಕೆಸಿಪಿ ಪಕ್ಷ ಕಟ್ಟಿದ್ದಾಗ ಸೇರಿದ್ದ ಜನಸ್ತೋಮ ಕಂಡು ಹೌಹಾರಿದ್ದ ಜನರು ಸಿದ್ದರಾಮೋತ್ಸವದ ಯಶಸ್ಸು ಅಷ್ಟೇ ಇತಿಹಾಸ ಸೃಷ್ಟಿಸಿತ್ತು. ದಾವಣಗೆರೆಯಲ್ಲಿ ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ನಡೆಯಿತು. ಈ ಮಹೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಜನಸಾಗರ ಕಂಡು ಸ್ವತಃ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅಚ್ಚರಿಪಟ್ಟಿದ್ದರು.

ಕಾಂಗ್ರೆಸ್ ಗೆ ನವಚೈತನ್ಯ ತಂದುಕೊಟ್ಟಿದ್ದೇ ಸಿದ್ದರಾಮೋತ್ಸವ ಎಂದರೆ ತಪ್ಪಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೂ ವಿರೋಧ ಪಕ್ಷದ ನಾಯಕನ ಹುಟ್ಟುಹಬ್ಬಕ್ಕೆ ಜನರು ಸೇರಿದ್ದ ಪರಿ ಅಧಿಕಾರದಲ್ಲಿದ್ದ ನಾಯಕರ ಹುಬ್ಬೇರುವಂತೆ ಮಾಡಿತ್ತು. ಹತ್ತಕ್ಕೂ ಹೆಚ್ಚು ಕಿಲೋಮೀಟರ್ ವರೆಗೆ ಜನವೋ ಜನ. ರಾಹುಲ್ ಗಾಂಧಿ, ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ನಾಯಕರು ಸಮಾವೇಶ ಸ್ಥಳಕ್ಕೆ ಬರಲು ಹರಸಾಹಸವೇ ಪಡಬೇಕಾಯಿತು. ಸಿದ್ದರಾಮಯ್ಯರು ಕಾರಿನಲ್ಲಿ ಕುಳಿತು ವೇದಿಕೆಯತ್ತ ಸಾಗುವವರೆಗೆ ಜನರು ಎರಡೂ ಬದಿಯಲ್ಲಿ ನಿಂತು ಹರ್ಷೋದ್ಘಾರ ಮುಗಿಲು ಮುಟ್ಟುವಂತೆ ಕೂಗು ಹಾಕಿದರು.

ವೇದಿಕೆಯಲ್ಲಿ ಮಾತನಾಡಿದ್ದ ಪ್ರತಿಯೊಬ್ಬ ರಾಜ್ಯ ಕಾಂಗ್ರೆಸ್ ನಾಯಕರು ನಾವು ಇಷ್ಟೊಂದು ಜನರನ್ನು ನೋಡಿರಲಿಲ್ಲ, ಕಂಡಿರಲಿಲ್ಲ. ವೇದಿಕೆಗೆ ಬರಲು ಇಷ್ಟೊಂದು ಕಷ್ಟ ಪಟ್ಟಿರಲಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯರ ಜನಪ್ರಿಯತೆ, ಶಕ್ತಿ, ವಿರಾಟ್ ರೂಪ ಅನಾವರಣಗೊಂಡಿದ್ದು ದಾವಣಗೆರೆ ನೆಲದಲ್ಲಿ ಎಂಬುದು ವಿಶೇಷ.

ರಾಹುಲ್ ಗಾಂಧಿ ಭಾಷಣ ಮಾಡುವಾಗ ನಾನು ಯಾವಾಗಲೂ ಯಾರ ಹುಟ್ಟುಹಬ್ಬಕ್ಕೆ ಹೋಗಲ್ಲ. ಸಿದ್ದರಾಮಯ್ಯರ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಆ ಕಾರಣಕ್ಕೆ ಬಂದಿದ್ದೇನೆ. ಇಷ್ಟೊಂದು ಸಂಖ್ಯೆಯಲ್ಲಿಸೇರಿರುವ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದರು. ಮಾತ್ರವಲ್ಲ, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ನಡುವಿನ ಕಂದಕ ಸರಿಮಾಡುವ ಪ್ರಯತ್ನ ಮಾಡಿದ್ದರು. ಇಬ್ಬರು ತಬ್ಬಿಕೊಂಡು ಒಗ್ಗಟ್ಟಿನ ಸಂದೇಶ ರಾಜ್ಯದ ಕಾಂಗ್ರೆಸ್ ಗೆ ರವಾನಿಸಿದ್ದರು.

ಇನ್ನು ಡಿ. ಕೆ. ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಜನರು ಅಷ್ಟೇನೂ ಕೂಗು ಹಾಕಲಿಲ್ಲ. ಯಾವಾಗ ಸಿದ್ದರಾಮಯ್ಯರ ಹೆಸರು ಹೇಳಿದರೋ ಆಗ ಮುಗಿಲು ಮುಟ್ಟುವಂತೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯರ ಅಭಿಮಾನಿಗಳು ಹುಚ್ಚೆದ್ದು ಕುಣಿದರು, ಘೋಷಣೆ ಹಾಕಿದರು. ಸಿದ್ದರಾಮಯ್ಯರ ಪರ ಜೈಕಾರಕ್ಕೆ ವೇದಿಕೆಯಲ್ಲಿದ್ದ ನಾಯಕರೆಲ್ಲರೂ ಬೆರಗಾಗಿದ್ದರು. ಆಗ ರಾಹುಲ್ ಗಾಂಧಿ ಅವರು ಜನರತ್ತ ಮತ್ತೆ ಮತ್ತೆ ನೋಡತೊಡಗಿದರು. ಎಲ್ಲಿ ನೋಡಿದರೂ ಜನರ ಶಿಳ್ಳೆ, ಚಪ್ಪಾಳೆಯದ್ದೇ ಸದ್ದಾಗಿತ್ತು. ಸಿದ್ದರಾಮಯ್ಯರ ಮೇಲೆ ತೋರಿದ ಪ್ರೀತಿಗೆ ಮೂಕವಿಸ್ಮಿತರನ್ನಾಗಿಸಿತ್ತು.

ಸಿದ್ದರಾಮಯ್ಯರ ಭಾಷಣ ಕೇಳಿದ ಜನರು ಹುಚ್ಚೆದ್ದು ಕುಣಿದರು. ಆ ನಂತರ ಸಿದ್ದರಾಮಯ್ಯರು ಎಲ್ಲೇ ಹೋದರೂ ಸಿದ್ದರಾಮಯ್ಯ ಕೀ ಜೈ, ಸಿದ್ದರಾಮಯ್ಯ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಎಷ್ಟೋ ವೇದಿಕೆಯಲ್ಲಿ ಡಿ. ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯರ ಹೆಸರು ಹೇಳುತ್ತಿದ್ದಂತೆ ಜನರಿಂದ ವ್ಯಕ್ತವಾಗುತ್ತಿದ್ದ ಪರಿಗೆ ವೇದಿಕೆಯಲ್ಲಿ ನಾಯಕರಿಗೆ ಆಗಲೇ ಅರಿವಾಗಿತ್ತು.

ಸಿದ್ದರಾಮೋತ್ಸವದ ಬಳಿಕ ರಾಹುಲ್ ಗಾಂಧಿ ಅವರು ಸಹ ಸಿದ್ದರಾಮಯ್ಯರ ಜನಶಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಸಮಸ್ಯೆಯಾಗಬಾರದು, ಎಲ್ಲರೂ ಒಟ್ಟಾಗಿದ್ದೇವೆ ಎಂಬ
ಸಂದೇಶ ಸಾರುವ ಸಲುವಾಗಿ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂಬುದನ್ನೂ ಸಹ ಘೋಷಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ರ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದು ಸಹ ದಾವಣಗೆರೆ ನೆಲದಲ್ಲಿಯೇ ಎಂಬುದು ವಿಶೇಷ.

ಸಿದ್ದರಾಮಯ್ಯರಿಗೆ ಅಷ್ಟೇ ಇಷ್ಟವಾದ ನೆಲವೆಂದರೆ ಬೆಣ್ಣೆನಗರಿ. ಜೆಡಿಎಸ್ ನಿಂದ ಹೊರ ಬಂದು ಅಹಿಂದ ಸಮಾವೇಶ ಮಾಡಿದಾಗ ದಾವಣಗೆರೆಯಲ್ಲಿ ಸಿಕ್ಕ ಅಭೂತಪೂರ್ವ ಸ್ಪಂದನೆ ಇಂದಿಗೂ ಮರೆತಿಲ್ಲ. ಅದೇ ರೀತಿಯಲ್ಲಿ ಸಿದ್ದರಾಮೋತ್ಸವದ ಯಶಸ್ಸು, ಜನಸ್ಪಂದನೆ, ಜನಸ್ತೋಮವೂ ಇದಕ್ಕೆ ಸಾಕ್ಷಿ. ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಹೊರತುಪಡಿಸಿದರೆ ಹೆಚ್ಚು ಜನಸಂಖ್ಯೆ ಇರೋದು ಕುರುಬ ಸಮಾಜದ್ದು. ಹರಿಹರ, ದಾವಣಗೆರೆ, ಹೊನ್ನಾಳಿ ಸೇರಿದಂತೆ ಬೇರೆ ಬೇರೆ ತಾಲೂಕುಗಳಲ್ಲಿಯೂ ಈ ಸಮಾಜದ ಪಾರುಪತ್ಯ ಇದೆ. ಸಿದ್ದರಾಮಯ್ಯರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಸಮಾಜವು ಕಾಂಗ್ರೆಸ್ ಕೈ ಹಿಡಿದಿದೆ. ಜಿಲ್ಲೆಯಲ್ಲಿ ಆರು ಸ್ಥಾನಗಳು ಬರುವಲ್ಲಿ ಈ ಸಮಾಜದ ಬೆಂಬಲ ಅಲ್ಲಗಳೆಯುವಂತಿಲ್ಲ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment