SUDDIKSHANA KANNADA NEWS/ DAVANAGERE/ DATE:30-04-2023
ದಾವಣಗೆರೆ (DAVANAGERE): ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ (CONGRESS) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್. ಪಿ. ರಾಜೇಶ್ (H. P. RAJESH) ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಜಗಳೂರು ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ (CONGRESS) ಅಭ್ಯರ್ಥಿ ಪರ ಪ್ರಚಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಕ್ಷೇತ್ರದಲ್ಲಿ ನಿನ್ನ ಬಗ್ಗೆ ಒಲವು ಇಲ್ಲ, ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದೆ. ಟಿಕೆಟ್ ಸಿಕ್ಕಿಲ್ಲ ಎಂದು ರಾಜೇಶ್ ಪಕ್ಷೇತರನಾಗಿ ಸ್ಪರ್ಧಿಸಿದ್ದಾನೆ. ಸಿದ್ದರಾಮಯ್ಯ ಬೆಂಬಲ ಇದೆ ಎಂಬುದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆ. ಆತನಿಗೆ ನೂರಕ್ಕೆ ನೂರರಷ್ಟು ನನ್ನ ಬೆಂಬಲ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದರು.
ಹೆಚ್. ಪಿ. ರಾಜೇಶ್ ಗೆ ಕಾಂಗ್ರೆಸ್ (CONGRESS) ಪಕ್ಷವು ಎರಡು ಬಾರಿ ಅವಕಾಶ ನೀಡಿದೆ. 2013ರಲ್ಲಿ ಜಯ ಗಳಿಸಿದ್ದರೆ, 2018ರಲ್ಲಿ ಸೋಲು ಕಂಡಿದ್ದರು. ಮಾಜಿ ಶಾಸಕ ಹೆಚ್. ಪಿ. ರಾಜೇಶ್ ನನ್ನು ಸಂಪೂರ್ಣವಾಗಿ ತಿರಸ್ಕರಿಸಿ. ರಾಜೇಶ್ ಗೆ ಪಕ್ಷ ನಿಷ್ಠೆ ಇಲ್ಲ ಎಂದು ಕಿಡಿಕಾರಿದರು.
ಶಾಸಕರಾಗಿದ್ದಾಗ ಎಸ್. ವಿ. ರಾಮಚಂದ್ರ ಐದು ವರ್ಷಗಳಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಜನರು ಬಿಜೆಪಿಯ ಸೋಲಿಸಿ ಕಾಂಗ್ರೆಸ್ ಗೆ ಅಧಿಕಾರ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪರನ್ನು ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ನಾಗಮೋಹನ್ ದಾಸ್ ಸಮಿತಿ ಮಾಡಿದ್ದು ಕಾಂಗ್ರೆಸ್. ನಾಗಮೋಹನ್ ದಾಸ್ ವರದಿ ಕೈ ಸೇರುವ ಸಮಯಕ್ಕೆ ಬಿಜೆಪಿ ಅಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂತು. ವಾಲ್ಮೀಕಿ ಸ್ವಾಮೀಜಿ 200 ಕ್ಕೂ ಹೆಚ್ಚು ದಿನ ಧರಣಿ ಕೂತ ಮೇಲೆ ನಾಗಮೋಹನ್ ದಾಸ್ ವರದಿ ಜಾರಿಗೆ ತಂದರು. ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ರಾಜಕೀಯ ಗಿಮಿಕ್ ಎಂದು ಹೇಳಿದರು.
ಬಿಜೆಪಿ ಸರ್ಕಾರ ನೀಡಿರುವ ಮೀಸಲಾತಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ರೆ ತಡೆಯಾಜ್ಞೆ ಸಿಗುತ್ತದೆ. ಆ ರೀತಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಎಸ್ ಟಿಪಿ, ಟಿಎಸ್ ಪಿ ಕಾಯ್ದೆ ತಂದಿದ್ದು ನಾವು. ತೆಲಂಗಾಣ, ನಮ್ಮಲ್ಲಿ ಬಿಟ್ರೆ ಎಲ್ಲೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ (NARENDRA MODI) ಈ ಕಾನೂನು ಮಾಡಿದ್ದಾರಾ ಕೇಳಿ. ಪರಿಶಿಷ್ಟ ಜಾತಿ, ವರ್ಗದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾಗಮೋಹನ್ ದಾಸ್ ವರದಿ ಜಾರಿ ಮಾಡಿರುವುದು ಬಿಜೆಪಿಯಾದರೂ ನಾವೇ ವರದಿ ತಯಾರಿಗೆ ಆದೇಶ ಕೊಟ್ಟಿದ್ದೆವು ಎಂದು ತಿಳಿಸಿದರು.