SUDDIKSHANA KANNADA NEWS/DAVANAGERE/DATE:01_11_2025
ದಾವಣಗೆರೆ: ಸಿಎಂ ಸಿದ್ದರಾಮಯ್ಯರ ಖುರ್ಚಿ ಗಟ್ಟಿ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
READ ALSO THIS STORY: ಕೈ ಹಚ್ಚಿದರೆ ಮೇಲೇಳಲು ಆಗಬಾರದು ಹಾಗೆ ಕೈ ಹಚ್ಚುತ್ತೀನಿ: ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಕೆಂಡಾಮಂಡಲ!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಕಾಂಗ್ರೆಸ್ ಪಕ್ಷ. ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳಲಿದೆ. ಯಾವ ಅನುಮಾನವೂ ಬೇಡ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧ. ಕೇವಲ ಊಹಾಪೋಹ ಹರಡುವುದು ಬೇಡ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುತ್ತಾರೆಯೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಅನುಮಾನ ಇದೆಯೋ ಎಂದು ಹೇಳಿದರು.
ಸಿಎಂ ಪೋಸ್ಟ್, ಸಂಪುಟ ಪುನರಚನೆ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಎಲ್ಲರೂ ಆಗಬೇಕೆನ್ನುತ್ತಾರೆ. ಆಸೆ ಇರೋದಿಲ್ವಾ ಎಂದು ಹೇಳಿದರು.
ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಮದುವೆಗೆ ಬರುತ್ತೇನೆ ಎಂದಿದ್ದರು. ವಕೀಲರ ಉದ್ಘಾಟನಾ ಸಮಾರಂಭವೊಂದಿದೆ. ಯಾವುದಕ್ಕೆ ಬರುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.






