Site icon Kannada News-suddikshana

ಘನ ತ್ಯಾಜ್ಯ ನೋಡಿ ಸಿಎಂ ಕೆಂಡಾಮಂಡಲ: ರಾಘವೇಂದ್ರ ಪ್ರಸಾದ್ ಮತ್ತು ಪ್ರಹ್ಲಾದ್ ಗೆ ನೋಟಿಸ್ ಕೊಡಲು ಸಿದ್ದರಾಮಯ್ಯ ಸೂಚನೆ

ಸಿದ್ದರಾಮಯ್ಯ

SUDDIKSHANA KANNADA NEWS/DAVANAGERE/DATE:27_09_2025

ಬೆಂಗಳೂರು: ವಾರ್ಡ್ ನಂಬರ್ 23 ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಹೊರಗೆ ಬಂದು ರಾಶಿ ಬಿದ್ದಿರುವುದನ್ನು ಗಮನಿಸಿದ ಸಿಎಂ‌ ಸಿದ್ದರಾಮಯ್ಯ ಸಿಟ್ಟಾದರು.

READ ALSO THIS STORY: ನಾನು ತಂಗಿ ಎಂದುಕೊಂಡು ಸಾರ್ಜಜನಿಕವಾಗಿ ಮುತ್ತಿಡುತ್ತೇನೆಯೇ: ರಾಹುಲ್ ಗಾಂಧಿ -ಪ್ರಿಯಾಂಕಾ ಬಗ್ಗೆ ಬಿಜೆಪಿ ಸಚಿವನ ಟೀಕೆಗೆ ಕೈ ಪಡೆ ನಿಗಿನಿಗಿ!

ಸಂಗ್ರಹಣಾ ಕೇಂದ್ರದ ಒಳಗೆ ಸಾಕಷ್ಟು ಜಾಗ ಖಾಲಿ ಇರುವುದನ್ನು ಗಮನಿಸಿದ ಸಿಎಂ ಬಿ ಸ್ಮೈಲ್ ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಲು ಸೂಚನೆ ನೀಡಿದರು‌.

ಬಳಿಕ ಅಲ್ಲಿಂದ ಕೆಲವೇ ದೂರದಲ್ಲಿ ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ ಇದಕ್ಕೆ ಕಾರಣರಾದ ಮತ್ತೋರ್ವ ಎಂಜಿನಿಯರ್ ಚೀಫ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡಿ ಎಂದು ಸಿಎಂ ಸೂಚಿಸಿದರು.

Exit mobile version