SUDDIKSHANA KANNADA NEWS/ DAVANAGERE/ DATE:20-02-2025
ಬೆಂಗಳೂರು: ದಾವಣಗೆರೆಗೆ ಬರುತ್ತಿದ್ದ ಕನ್ನಡ ಚಿತ್ರರಂಗದ ಸ್ಟಾರ್ ಪ್ರೊಡ್ಯೂಸರ್ ಕೆ. ಮಂಜು ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಟ ಶ್ರೇಯಸ್ ಮಂಜು ಅಪಾಯದಿಂದ ಪಾರಾಗಿದ್ದಾರೆ.
ವಿಷ್ಣುಪ್ರಿಯಾ ಸಿನಿಮಾ ಪ್ರಮೋಷನ್ ಗೆ ದಾವಣಗೆರೆಗೆ ಬರುತ್ತಿದ್ದ ಶ್ರೇಯಸ್ ಮಂಜು ಪ್ರಯಾಣಿಸುತ್ತಿದ್ದ ಕಾರಿಗೆ ತುಮಕೂರಿನ ಶಿರಾ ಬಳಿ ಲಾರಿ ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದ್ರೆ, ಕಾರು ಜಖಂಗೊಂಡಿದೆ. ಸಿನಿಮಾ ರಿಲೀಸ್ ಗೆ ಒಂದು ದಿನ ಮುಂಚೆ ಕಾರು ಅಪಘಾತಕ್ಕೀಡಾಗಿದೆ.
ಕಾರನ್ನು ಶ್ರೇಯಸ್ ಮಂಜು ಅವರೇ ಡ್ರೈವ್ ಮಾಡುತ್ತಿದ್ರು ಎಂದು ತಿಳಿದು ಬಂದಿದೆ. ಲಾರಿಯು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಪಡ್ಡೆ ಹುಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ಅವರು ಈ ಚಿತ್ರದ ಮೂಲಕ ಸಕ್ಸಸ್ ಕನಸು ಕಂಡಿದ್ದರು. ಮಾತ್ರವಲ್ಲ, ಪ್ರತಿಭಾವಂತ ನಟರೆನೆಸಿಕೊಂಡಿದ್ದು, ಗುರು ದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ ಚಿತ್ರದಿಂದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ನಂದ ಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲೂ ಶ್ರೇಯಸ್ ಮಂಜು ಕಾಣಿಸಿಕೊಂಡಿದ್ದಾರೆ.
ನಟ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅಭಿನಯದ ಬಹು ನಿರೀಕ್ಷಿತ ವಿಷ್ಣುಪ್ರಿಯ ಚಿತ್ರದ ಫೆಬ್ರವರಿ 21 ರಂದು ತೆರೆಗೆ ಬರ್ತಿದೆ. ಶ್ರೇಯಸ್ ಮಂಜು ಅವರ ವಿಷ್ಣು ಪ್ರಿಯಾ ಸಿನಿಮಾಗೆ ಮಲಯಾಳಂ ನಿರ್ದೇಶನ ವಿಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಿಷ್ಣುಪ್ರಿಯಾ ಸಿನಿಮಾದ ಮೂಲಕ ಕಣ್ಸೆನ್ನೆ ಹುಡುಗಿ ಪ್ರಿಯಾ ವಾರಿಯರ್ ಅಭಿನಯಿಸಿದ್ದಾರೆ. ಈ ಮೂಲಕ ಮಾಲಿವುಡ್ ಬೆಡಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿ ಶ್ರೇಯಸ್ ಮಂಜು ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು. ಅಪಘಾತ ಸಂಭವಿಸಿದ್ದರಿಂದ ಪ್ರಚಾರ ರದ್ದುಗೊಳಿಸಿ ವಾಪಸ್ ಬೆಂಗಳೂರಿನತ್ತ ತೆರಳಿದರು.