SUDDIKSHANA KANNADA NEWS/ DAVANAGERE/DATE:16_08_2025
ದಾವಣಗೆರೆ: ದಾವಣಗೆರೆ ನಗರದ ಶಿವಪ್ಪನಾಯಕ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಗುಜರಿ ಅಂಗಡಿ ಹೊತ್ತಿ ಉರಿದ ಘಟನೆ ನಡೆದಿದೆ. ಗುಜರಿ ಅಂಗಡಿಯೊಳಗೆ ಮಾಲೀಕ ಇಲ್ಲದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
READ ALSO THIS STORY: ವಿದ್ಯಾಸಾಗರ ಶಾಲೆಯಲ್ಲಿ ಧರೆಗಿಳಿದ ಶ್ರೀಕೃಷ್ಣ ಜನ್ಮಾಷ್ಟಮಿ ಸೊಬಗು: ತುಂಟ ಮಕ್ಕಳ ಅದ್ಭುತ ನೃತ್ಯಕ್ಕೆ ಪೋಷಕರು ಫಿದಾ!
ಗುಜರಿ ಅಂಗಡಿಯಲ್ಲಿದ್ದ ಗುಜರಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಇಂದು ದಾವಣಗೆರೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಜೆ ವಿದ್ಯುತ್ ಸಂಪರ್ಕ ಕೊಡುತ್ತಿದ್ದಂತೆ ಸಿಂಗಲ್ ಫೇಸ್ ಆಗಿತ್ತು. ಆ ಬಳಿಕ ಅಂಗಡಿಯೊಳಗೆ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಇದ್ದಕ್ಕಿದ್ದಂತೆ ಧಗಧಗಿಸತೊಡಗಿತು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳೀಯರು ಹತ್ತಿರ ಹೋಗಲಿಲ್ಲ. ಒಳಗಡೆ ಬೆಂಕಿ ಹೊತ್ತಿ ಉರಿಯಲಾರಂಭಿಸುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರಲ್ಲಿ ಭಯ ಆವರಿಸಿತ್ತು.
ಪಕ್ಕದಲ್ಲಿದ್ದ ಹೊಟೇಲ್ ನ ರೆಫ್ರಿಜರೇಟರ್ ಹಾಳಾಗಿದೆ. ಅಂಗಡಿಯೊಳಗೆ ಇದ್ದ ಪುಸ್ತಕ, ಪೇಪರ್ ಸೇರಿದಂತೆ ಗುಜರಿ ವಸ್ತುಗಳು ಹೊತ್ತಿ ಉರಿಯುತ್ತಿದ್ದಂತೆ ಎದುರುಗಡೆ ಹಾಗೂ ಅಕ್ಕಪಕ್ಕದ ಅಂಗಡಿಯವರು ಬೆಚ್ಚಿಬಿದ್ದರು. ಅಗ್ನಿಶಾಮಕ ದಳ ವಾಹನ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೊಬೈಲ್ ಚಾರ್ಜರ್, ಬಲ್ಡ್ ಢಮಾರ್!
ಇನ್ನು ಗುಜರಿ ಅಂಗಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳಲ್ಲಿ ಹಾಕಿದ್ದ ಮೊಬೈಲ್ ಚಾರ್ಜರ್, ಬಲ್ಡ್ ಗಳು ಢಮಾರ್ ಆಗಿವೆ. ಕೆಲವು ಮನೆಗಳಲ್ಲಿ ಮೊಬೈಲ್ ಚಾರ್ಜರ್ ಗಳು ಇದ್ದಕ್ಕಿದ್ದಂತೆ ಢಮ್.. ಢಮ್.. ಅಂತಾ
ಶಬ್ಧ ಕೇಳಿಸಿದ್ದರೆ, ಮತ್ತೆ ಕೆಲವು ಮನೆಗಳಲ್ಲಿ ಬಲ್ಡ್ ಗಳು ಸುಟ್ಟು ಹೊಗೆ ಬರಲು ಪ್ರಾರಂಭಿಸಿದೆ. ಬೆಸ್ಕಾಂನವರು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದೇ ಈ ಘಟನೆಗೆ ಕಾರಣ ಎಂದು ಕೆ. ಬಿ. ಬಡಾವಣೆಯ ಸುತ್ತಮುತ್ತಲಿನ
ವಾಸಿಗಳು ಆರೋಪಿಸಿದ್ದಾರೆ.
ನಾವು ಮನೆಯೊಳಗೆ ಇದ್ದೆವು. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಮೊಬೈಲ್ ಚಾರ್ಜರ್ ಗೆ ಹಾಕಿದ್ದೆವು. ಇದ್ದಕ್ಕಿದ್ದಂತೆ ಜೋರಾದ ಶಬ್ಧ ಕೇಳಿ ಬಂತು. ನೋಡಿದಾಗ ಮೊಬೈಲ್ ಚಾರ್ಜರ್ ಹಾಳಾಗಿತ್ತು. ಇನ್ನು ಮನೆಯ
ಬಲ್ಬ್ ಗಳು ಫಳ್ ಫಳ್ ಅಂತಾ ಶಬ್ಧ ಬಂತು. ನೋಡ ನೋಡುತ್ತಿದ್ದಂತೆ ಬಲ್ಡ್ ಗಳು ಪೀಸ್ ಪೀಸ್ ಆದವು. ಈ ಘಟನೆ ಏನಾಯಿತೋ ಎಂಬ ಭಯ ಆವರಿಸಿತು. ಆ ನಂತರ ಗುಜರಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ
ಹೊತ್ತಿಕೊಂಡಿದೆ ಎಂಬುದು ಗೊತ್ತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿಕ್ಷಣ ನ್ಯೂಸ್ ಮೀಡಿಯಾಕ್ಕೆ ಮಾಹಿತಿ ನೀಡಿದರು.