SUDDIKSHANA KANNADA NEWS/ DAVANAGERE/ DATE:23-12-2024
ರಾಯ್‌ಪುರ: ವಿಚಿತ್ರವಾದ್ರೂ ಸತ್ಯ. ರೂಪದರ್ಶಿ ಮತ್ತು ಮಾಜಿ ಪೋರ್ನ್ ನಟಿ ಸನ್ನಿ ಲಿಯೋನ್ ಛತ್ತೀಸ್‌ಗಢ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಮಹತಾರಿ ವಂದನ್ ಯೋಜನೆ’ಯ ಅರ್ಹ ಫಲಾನುಭವಿಗಳಲ್ಲಿ ಒಬ್ಬರು.
ಸನ್ನಿ ಲಿಯೋನ್ ಹೆಸರಿನಲ್ಲಿ, ವಂಚಕ ವೀರೇಂದ್ರ ಕುಮಾರ್ ಜೋಶಿ ಎಂಬಾತ ರಾಯ್ ಪುರದ ಬಸ್ತಾರ್‌ನಲ್ಲಿ ಆನ್‌ಲೈನ್ ಬ್ಯಾಂಕ್ ಖಾತೆ ತೆರೆದಿದ್ದಾನೆ. ಈ ವರ್ಷ ಮಾರ್ಚ್‌ನಲ್ಲಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದಾಗಿನಿಂದ ಪ್ರತಿ ತಿಂಗಳು 1000 ರೂ. ಪಾವತಿಯಾಗುವಂತೆ ಮಾಡಿದ್ದಾನೆ.
ಇದು ನಿಜವಾಗಿಯೂ ಮುಜುಗರದ ಸಂಗತಿ. ತಾಳೂರು ಗ್ರಾಮದ ಜೋಶಿ ಎಂಬವರು ತಪ್ಪು ಹೆಸರು ನೀಡಿ ಪ್ರತಿ ತಿಂಗಳು 1000 ರೂ. ನಾವು ಬ್ಯಾಂಕ್ ಖಾತೆಯನ್ನು ಹೋಲ್ಡ್ ಮಾಡಿದ್ದೇವೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಗುರುತು ಮತ್ತು ಫಲಾನುಭವಿಯ ಹೆಸರಿನಲ್ಲಿ ಹೇಗೆ ಸನ್ನಿಲಿಯೋನ್ ಹೆಸರು ಸೇರಿತು ಎಂಬ ಕುರಿತಂತೆ ವಿವರಣೆ ಕೇಳಲಾಗಿದೆ. ಕಳೆದ
ಹತ್ತು ತಿಂಗಳನಿಂದ ಹತ್ತು ಸಾವಿರ ರೂಪಾಯಿ ಪಾವತಿಸಲಾಗಿದೆ.
146 ಡೆವಲಪ್‌ಮೆಂಟ್ ಬ್ಲಾಕ್‌ಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಅರ್ಹ ವಿವಾಹಿತ ಮಹಿಳೆಯರು ನೇರ ಲಾಭ ವರ್ಗಾವಣೆ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ 1000 ರೂ.ಜೋಶಿ ಅವರು ಫಲಾನುಭವಿ ಎಂದು ಹೆಸರು ನೋಂದಾಯಿಸಿದ ತಳೂರು ಗ್ರಾಮದಲ್ಲಿ ತಂಗಿದ್ದಾರೆ. ಜೋಶಿ ಅವರು ಜಗದಲ್‌ಪುರ ಪಟ್ಟಣದಲ್ಲಿರುವ ‘ಶ್ರೀರಾಮ್ ಫೈನಾನ್ಸ್’ ಎಂಬ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 21 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 70 ಲಕ್ಷ ಅರ್ಹ ವಿವಾಹಿತ ಮಹಿಳೆಯರಿಗೆ ಈ ಪ್ರಯೋಜನ ಸಿಗುತ್ತದೆ.