SUDDIKSHANA KANNADA NEWS/ DAVANAGERE/ DATE:04-01-2025
ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶಿವಣ್ಣರಿಗೆ ಆಪರೇಷನ್ ಆಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆಸ್ಪತ್ರೆಯ ಆವರಣದಲ್ಲಿ ಆರಾಮಾಗಿ ಓಡಾಡುತ್ತಿದ್ದಾರೆ.
ಅಮೇರಿಕಾದ ಮಿಯಾಮಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಶಿವಣ್ಣರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಆದ ಬಳಿಕ ಸ್ವಲ್ಪ ಸೊರಗಿದ್ದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅಲ್ಲಿಯೇ ವಾಕ್ ಮಾಡುತ್ತಿದ್ದಾರೆ. ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಅಭಿಮಾನಿಗಳ ಹಾರೈಕೆಗೆ ಚಿರಋಣಿ ಎಂದಿದ್ದಾರೆ.

ಸದ್ಯದಲ್ಲಿಯೇ ಬೆಂಗಳೂರಿಗೆ ಬರುತ್ತೇನೆ. ಸಿನಿಮಾ ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳುತ್ತೇನೆ. ಕರುನಾಡಿನ ಜನರು, ಅಭಿಮಾನಿಗಳು, ಹಿತೈಷಿಗಳು ತೋರಿಸಿದ ಅಭಿಮಾನ, ಪ್ರೀತಿ ಹಾಗೂ ಪತ್ನಿ ಗೀತಾ ನನ್ನನ್ನು ನೋಡಿಕೊಂಡ ಬಗೆ ನನಗೆ ಪುನರ್ಜನ್ಮ ಸಿಗುವಂತೆ ಮಾಡಿದೆ ಎಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 24 ರಂದು ಆಪರೇಷನ್ ಆಗಿತ್ತು. ನ್ಯೂ ಇಯರ್ ಗೆ ವಿಶಸ್ ಕೂಡ ಮಾಡಿದ್ದರು. ಪುತ್ರಿ ಮಗಳು ನಿವೇದಿತಾ, ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಸೆಲ್ಫಿ ಫೋಟೋವನ್ನು ತೆಗೆದುಕೊಂಡಿದ್ದಾರೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸೆಲ್ಫಿ ಫೋಟೋ ಈಗ ಶಿವಣ್ಣನ ಅಭಿಮಾನಿಗಳು ವೈರಲ್ ಆಗುವಂತೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮತ್ಮ ಪೇಜ್ ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆ ಆವರಣದಿಂದಲೇ ಹೊರ ಬಂತು ಶಿವಣ್ಣನ ಮೊದಲ ಫೋಟೋ ಅನ್ನೋ ಲೈನ್ ಇದಾಗಿದೆ.