SUDDIKSHANA KANNADA NEWS| DAVANAGERE| DATE:03-04-2023
ದಾವಣಗೆರೆ: ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ನಮ್ಮ ಜೊತೆಗಿದ್ದಾರೆ. ನೀವು ಕಿತಾಪತಿ ಮಾಡಬೇಡಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ಹೇಳಿದರು.
- ದಾವಣಗೆರೆ ತಾಲೂಕಿನ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿರ ಬೆಂಬಲ ಇದೆ. ನೀವು ಏನನ್ನೋ ಕೇಳಿ ಕಿತಾಪತಿ ಮಾಡುವುದು ಬೇಡ ಎಂದು ಮಾಧ್ಯಮದವರನ್ನೇ ಕಿಚಾಯಿಸಿದರು.ಎಲ್ಲೆಡೆ ಕಾಂಗ್ರೆಸ್ (CONGRESS) ಪರ ಅಲೆ ಇದೆ. ಜನರ ಬೆಂಬಲ, ದೇವರ ಆಶೀರ್ವಾದ ನಮ್ಮ ಮೇಲಿದೆ. ಚುನಾವಣೆಯಲ್ಲಿ ಗೆಲ್ಲುವುದು ಖಚಿತ. ನನಗೆ ದಾವಣಗೆರೆ ದಕ್ಷಿಣದಲ್ಲಿ ಪ್ರತಿಸ್ಪರ್ಧಿ ಇಲ್ಲ. ಈ ಹಿಂದೆ ಸ್ಪರ್ಧಿಸಿದವರು ಏನಾಗಿದ್ದಾರೆ, ಎಷ್ಟು ಬಾರಿ ಸೋತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಈ ಬಾರಿಯೂ ಕಾಂಗ್ರೆಸ್ ಪರವೇ ಫಲಿತಾಂಶ ಬರಲಿದೆ. ಅಧಿಕೃತವಾಗಿ ಚುನಾವಣಾ ಪ್ರಚಾರ ಇಂದಿನಿಂದ ಪ್ರಾರಂಭಿಸಿದ್ದೇವೆ. ಎಲ್ಲಾ ಮುಸ್ಲಿಂ ಮುಖಂಡರು ಕಾಂಗ್ರೆಸ್ ಪರ ಇದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.