SUDDIKSHANA KANNADA NEWS. DAVANAGERE
DATE:27-03-2023
ದಾವಣಗೆರೆ: ಚುನಾವಣೆ ಸಮೀಪಿಸುತ್ತಿದ್ದಂತೆ ಯಾರು ಏನೇ ಕೇಳಿದರೂ ರಾಜ್ಯ (STATE) ಸರ್ಕಾರ ಕೊಟ್ಟುಬಿಡುತ್ತದೆ. ಕರ್ನಾಟಕವನ್ನೇ ಬೇಕಾದರೆ ಮಾರಿಬಿಡುತ್ತದೆ ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ಆಕ್ರೋಶ ವ್ಯಕ್ತಪಡಿಸಿದರು.
ಶಾಮನೂರಿನಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶೇ. 4ರಷ್ಟು ಮುಸ್ಲಿಂ (MUSLIM) ರ ಮೀಸಲಾತಿ ರದ್ದು ಮಾಡಿದ್ದು ದೊಡ್ಡ ತಪ್ಪು. ಮುಸ್ಲಿಂರ ಮೀಸಲಾತಿ ಕಿತ್ತುಕೊಳ್ಳುವ ಅವಶ್ಯಕತೆ ಇರಲಿಲ್ಲ. ಇಲ್ಲಿ ತೆಗೆದು ಬೇರೆಯವರಿಗೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ದಾವಣಗೆರೆಯಲ್ಲಿ ನಡೆದ ಬಿಜೆಪಿ (BJP) ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮಕ್ಕೆ ಪ್ರಧಾನಿ ನರೇಂದ್ರ ಮೋದಿ (NARENDRA MODI) ಆಗಮಿಸಿದಾಗ 2 ಲಕ್ಷ ಜನರು ಬಂದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹತ್ತು ಲಕ್ಷ ಜನರು ಬಂದಿದ್ದರು. ಮಹಾಸಂಗಮಕ್ಕೆ ಮಾಧ್ಯಮದವರು ಹೆಚ್ಚಿನ ಪ್ರಚಾರ ಕೊಟ್ಟಿದ್ದಾರಷ್ಟೇ. ಸಿದ್ದರಾಮೋತ್ಸವಕ್ಕೆ ಸೇರಿದ್ದಷ್ಟು ಜನರಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾವಣೆ (ELECTION) ಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ನೀಡುವುದು ಖಾತ್ರಿಯಾಗಿದೆ. ಕಾಂಗ್ರೆಸ್ (CONGRESS) 2 ನೇ ಅಭ್ಯರ್ಥಿಗಳ (CANDIDATES) ಪಟ್ಟಿಯಲ್ಲಿ ಇನ್ನು 25 ಮಂದಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮೊದಲ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ 32 ಮಂದಿಗೆ ಟಿಕೆಟ್ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಒಟ್ಟು 55ರಿಂದ 60 ಮಂದಿಗೆ ಕಾಂಗ್ರೆಸ್ (CONGRESS) ಟಿಕೆಟ್ (TICKET) ಸಿಗುವ ವಿಶ್ವಾಸ ಇದೆ ಎಂದು ಶಾಮನೂರು ಶಿವಶಂಕರಪ್ಪ ಮಾಹಿತಿ ನೀಡಿದರು.
ದಾವಣಗೆರೆ (DAVANAGERE) ದಕ್ಷಿಣ (SOUTH) ಕಾಂಗ್ರೆಸ್ (CONGRESS) ಅಭ್ಯರ್ಥಿಯಾಗಿ ಈಗ ಪ್ರಚಾರ ಆರಂಭಿಸಬೇಕಿಲ್ಲ, ಮೊದಲಿನಿಂದಲೂ ಪ್ರಚಾರ ನಡೆಸಲಾಗುತ್ತಿದೆ. ಮುಸ್ಲಿಂರಿಗೆ ಟಿಕೆಟ್ ನೀಡಿಕೆ ವಿಚಾರ ಮುಗಿದ ಅಧ್ಯಾಯ. ನನಗೆ ಟಿಕೆಟ್ ಘೋಷಣೆಯಾದ ಬಳಿಕ ಬೇರೆ ಯಾರಿಗೆ ಕೊಡಲು ಬರುತ್ತದೆ. ಹಾಗಿದ್ದ ಮೇಲೆ ಮುಗಿದ ಹಾಗೆ ಅಲ್ಲವೇ ಎಂದು ಪ್ರಶ್ನಿಸಿದರು.