ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಟೆಸ್ಟ್ ಕ್ರಿಕೆಟ್‌ಗೆ ಶಕೀಬ್ ಅಲ್ ಹಸನ್ ನಿವೃತ್ತಿ ಘೋಷಣೆ

On: September 26, 2024 6:03 PM
Follow Us:
---Advertisement---

ಮುಂಬೈ: ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಗುರುವಾರ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಕಾನ್ಪುರದಲ್ಲಿ ಶುಕ್ರವಾರ ಆರಂಭವಾಗಲಿರುವ ಭಾರತ – ಬಾಂಗ್ಲಾದೇಶ 2 ನೇ ಟೆಸ್ಟ್‌ನ ಮುನ್ನಾದಿನದಂದು ಸುದ್ದಿಗೋಷ್ಠಿಯಲ್ಲಿ 37 ವರ್ಷದ ಶಕೀಬ್ ಆಘಾತಕಾರಿ ನಿರ್ಧಾರವನ್ನು ತಿಳಿಸಿದ್ದಾರೆ.

ಈ ಸರಣಿಯಲ್ಲಿ ಮೀರತ್​ನಲ್ಲಿ ಒಂದು ಪಂದ್ಯ ಜರುಗಲಿದ್ದು, ಈ ಮ್ಯಾಚ್ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಗುಡ್ ಬೈ ಹೇಳಲು ಶಕೀಬ್ ಅಲ್ ಹಸನ್ ನಿರ್ಧರಿಸಿದ್ದಾರೆ. ಇದಾಗ್ಯೂ ಶಕೀಬ್ ಅಲ್ ಹಸನ್ ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ. ಅಲ್ಲದೆ 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

ತಮ್ಮ 37ನೇ ವಯಸ್ಸಿನಲ್ಲಿ ಶಕೀಬ್ ಅಲ್ ಹಸನ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ಅದರಂತೆ ತವರಿನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅವರು ರೆಡ್ ಬಾಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ.

Join WhatsApp

Join Now

Join Telegram

Join Now

Leave a Comment