ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಆಗ್ತಾ ಇದೆ. ಮತ್ತೊಂದು ಕಡೆ ರೈತರ ಆತ್ಮಹತ್ಯೆ ಆಗ್ತಾ ಇದೆ. ಹಣಕ್ಕಾಗಿ ರಾಜ್ಯದಲ್ಲಿ ವಸೂಲಿ ದಂಧೆ ನಡೀತಾ ಇದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಇವೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ದುರಾಸೆಗೆ ಗುತ್ತಿಗೆದಾರರು ಸಾವನ್ನಪ್ಪುತ್ತಿದ್ದಾರೆ. ಕಾಮಗಾರಿಯಲ್ಲಿ ಕಾಂಟ್ರಾಕ್ಟರ್ ಬಳಿ ಆಕ್ರಮವಾಗಿ ಹಣ ಸುಲಿಗೆ ಮಾಡೋದು ಮನೆ ಮಾತಾಗಿದೆ. ರಾಜ್ಯದಲ್ಲಿ ಇರೋದು ಪರ್ಸಂಟೇಜ್ ಸರ್ಕಾರ. ರಾಜ್ಯದಲ್ಲಿ ಆತ್ಮಹತ್ಯೆ ದಿನನಿತ್ಯ ಆಗ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಜಾಸ್ತಿ ಆಗಿದೆ ಎಂದು ಕಿಡಿಕಾರಿದರು.
ಸಚಿನ್ ಕುಟುಂಬ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಸಚಿನ್ ಅವರ ಇಡೀ ಕುಟುಂಬ ನೋವಿನಲ್ಲಿ ಇದೆ. ಇದೇ ರೀತಿ ಮುಂದುವರೆದರೆ ಬಿಹಾರ್ ರೀತಿ ಆಗುತ್ತದೆ. ರಾಜ್ಯ ಸರ್ಕಾರ ಪಾಪರ್ ಆಗಿದೆ. ಎಲ್ಲಾ ದರ ಹೆಚ್ಚಳ ಆಗ್ತಿದೆ. ಬಿಜೆಪಿ ಅವರು 10 ವರ್ಷದಿಂದ ತೆರಿಗೆ ಭಾರ ಹಾಕಿಲ್ಲ. ಸಾರಿಗೆ ಇಲಾಖೆಗೆ ನಾನು ಬಂದಾಗ ಸಾವಿರ ಕೋಟಿ ಲಾಭ ಮಾಡಿದ್ದೇನೆ. ಆದ್ರೆ ಇವಾಗ ಏನ್ ಆಗಿದೆ? ನಾವು ಎಂಟುವರೆ ವರ್ಷ ಮಾತ್ರ ಇದ್ದೇವೆ ಅಷ್ಟು ಬಿಟ್ಟು ನೀವು ಏನ್ ಮಾಡಿದ್ರಿ? ಕಾಂಗ್ರೆಸ್ ಮಾಡಿರೋ ತಪ್ಪು ಮುಚ್ಚಿಟ್ಟು ಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಹೇಳಿದರು.
ಇದು ಮನೆ ಹಾಳು ಸರ್ಕಾರ, ಸಿಎಂ ಸಿದ್ದರಾಮಯ್ಯ ಸರ್ಕಾರ ಲೂಟಿಕೋರರ ಹಿಡಿತದಲ್ಲಿದೆ. ರಾಜ್ಯ ಸರ್ಕಾರದ ಮೇಲೆ ಸಚಿನ್ ಮನೆಯವರಿಗೆ ನಂಬಿಕೆ ಇಲ್ಲ. ಹಾಗಾಗಿ ನಾವು ಅವರ ಪರವಾಗಿ ಇದ್ದೇವೆ ಎಂದು ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ಧಾಳಿ ನಡೆಸಿದರು.