Site icon Kannada News-suddikshana

Davanagereಯ ಕುಂದುವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಎನ್. ಮಹಾಂತೇಶ್ ಅವಿರೋಧ ಆಯ್ಕೆ

SUDDIKSHANA KANNADA NEWS/ DAVANAGERE/ DATE-26-06-2025

ದಾವಣಗೆರೆ (Davanagere): ನಗರದ ಕುಂದುವಾಡ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್ ಎನ್ ಮಹಾಂತೇಶ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: “ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ”: Channagiri ಶಾಸಕರ ಪಂಥಾಹ್ವಾನ ಸ್ವೀಕರಿಸಿದ ಎಂ. ಪಿ. ರೇಣುಕಾಚಾರ್ಯ!

ಹಳೇ ಕುಂದುವಾಡದ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನಲೆ ಚುನಾವಣೆಧಿಕಾರಿಯಾದ ಭಾಗ್ಯಶ್ರೀ ಎಸ್. ಪಾಟೀಲ್ ಅವರು, ಹೆಚ್ ಎನ್ ಮಾಹಾಂತೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಿದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ಸಂಘದ ನೂತನ ಅಧ್ಯಕ್ಷ ಹೆಚ್ ಎನ್ ಮಹಾಂತೇಶ್, ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ, ಸೊಸೈಟಿಯನ್ನ ಈಗಾಗಲೇ ಹಿರಿಯರು ಅಭಿವೃದ್ದಿ ಪಡಿಸಿದ್ದಾರೆ, ಡಿಸಿಸಿ ಬ್ಯಾಂಕ್ ನಿಂದ ಇನ್ನೂ ಹೆಚ್ಚುವರಿ ಸಾಲವನ್ನ ರೈತರಿಗೆ ಕೊಡಿಸಿ ರೈತರಿಗೆ ನೆರವಾಗುವ ಪ್ರಯತ್ನ ಮಾಡುತ್ತೇನೆ, ಸೊಸೈಟಿ ಆಡಳಿತ ಕ್ರಮವನ್ನ ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತೇನೆ, ನನ್ನ ಆಯ್ಕೆಗೆ ಸಹಕರಿಸಿದ ಸಂಘದ ನಿರ್ದೇಶಕರು, ಗ್ರಾಮದ ಮುಖಂಡರಿಗೆ, ಹಿರಿಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ಎಂ. ಪಿ. ರೇಣುಕಾಚಾರ್ಯಗೆ ಬಸವರಾಜ್ ಶಿವಗಂಗಾ ಪಂಥಾಹ್ವಾನ: ನಾನು ಪ್ರಮಾಣಕ್ಕೆ ಸಿದ್ಧ, ನೀನೂ ಸಿದ್ಧನಾ?

ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಬಿಆರ್ ನಾಗರಾಜ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ನಿರ್ದೇಶಕರಾದ ಗೌಡ್ರು ಬಸವರಾಜಪ್ಪ, ಗುಡುದಪ್ಪ, ಹೆಚ್ ಜಿ ಧರ್ಮೇಶ್, ಹೆಚ್ ಜಿ ಬೆಳಕೇರಪ್ಪ, ಕುಂದುವಾಡ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಎಂಎಸ್ ನಾಗರಾಜಪ್ಪ, ಎಂ ಮಹಾಂತೇಶ್, ಅಕ್ಕಿ ಮಹಾಂತೇಶ್, ಬಣಕಾರ್ ಹನುಮಂತಪ್ಪ, ಪಾರ್ವತಮ್ಮ, ರೇಣುಕಮ್ಮ, ಮಧುನಾಗರಾಜ್ ಸಹಕಾರ ಸಂಘದ ಸಿಇಓ ರೇವಣಸಿದ್ದಪ್ಪ, ಗುಮಾಸ್ತರಾದ ಎಂಎಸ್ ಮಡಿವಾಳಪ್ಪ, ಸಹಾಯಕ ಹೆಚ್ ಹನುಮಂತಪ್ಪ ಸೇರಿದಂತೆ ನಿರ್ದೇಶಕರು, ಗ್ರಾಮಸ್ಥರು ಇದ್ದರು.

Exit mobile version