SUDDIKSHANA KANNADA NEWS/ DAVANAGERE/ DATE:15-03-2025
ದಾವಣಗೆರೆ: ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ನಿರ್ದೇಶಕರು ಅವಿರೋಧವಾಗಿ ಸಹಕಾರ ಸಂಘಗಳ ನಿಯಮಗಳು 1960, ನಿಯಮ 14 ಜಿ ನಲ್ಲಿನ ಉಪನಿಬಂಧಾನುಸಾರ ಆಯ್ಕೆಯಾಗಿದ್ದಾರೆ.
ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯೂ ಅವಿರೋಧವಾಗಿ ಆಗಿರುತ್ತದೆ ಎಂದು ಚುನಾವಣಾಧಿಕಾರಿ, ಹಿರಿಯ ನಿರೀಕ್ಷಕರು, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕಿ ಭಾಗ್ಯಶ್ರೀ ಎಸ್. ಪಾಟೀಲ್ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ಎಸ್ ಹೆಚ್ ಚಂದ್ರಪ್ಪ, ಉಪಾಧ್ಯಕ್ಷರಾಗಿ ಪ್ರೌಢ ಶಾಲೆ ಶಿಕ್ಷಕ ಸಿ. ಜಿ. ಜಗದೀಶ್ ಕೂಲಂಬಿ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಯೋಗರಾಜ್ ಜಿ ಯು ,(ಆರೋಗ್ಯ ಇಲಾಖೆ), ಮರುಗೇಶ್ ಕೆ ಬಿ, (ಪ್ರಾ.ಶಿಕ್ಷಣ ಇಲಾಖೆ), ಪಾಲಕ್ಷಿ ಬಿ.(ಪ ಪೂ ಶಿಕ್ಷಣ ಇಲಾಖೆ), ದ್ರಾಕ್ಷಾಯಿಣಿ ಕೆ ಎಸ್,(ಜಿಲ್ಲಾ ಖಜಾನೆ ), ಮಲ್ಲಮ್ಮ ಎಂ,(ಪ್ರಾ ಶಿಕ್ಷಣ ಇಲಾಖೆ), ತಿಪ್ಪೇಸ್ವಾಮಿ ಸಿ, ತಾಂತ್ರಿಕ ಶಿಕ್ಷಣ ಇಲಾಖೆ), ಕೆಂಪಣ್ಣ ಎಸ್. ಕಾಠಿ (ಪ್ರೌ. ಶಿಕ್ಷಣ ಇಲಾಖೆ), ಮಾಗಡಿ ಪ್ರಕಾಶ್, (ಆರೋಗ್ಯ ಇಲಾಖೆ), ಸತೀಶ್ ಈ. (ಪ್ರಾ.ಶಿಕ್ಷಣ ಇಲಾಖೆ), ಯಶವಂತ್ ಕುಮಾರ್ ಎಚ್ ಕೆ (ತೋಟಗಾರಿಕೆ ಇಲಾಖೆ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಎಲ್ಲಾ ಸದಸ್ಯರು ಅವಿರೋಧ ಆಯ್ಕೆಯಾಗುವಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್. ಎಂ. ರೇವಣ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ. ಡಿ. ನೀಲಗಿರಿಯಪ್ಪ, ನಿಕಟಪೂರ್ವ ಉಪಾಧ್ಯಕ್ಷ ಎನ್. ಡಿ .ಮಂಜು ಅವರ ಮಾರ್ಗದರ್ಶನ, ಸಹಕಾರ ಮತ್ತು ಸಂಘದ ಮಾಜಿ ನಿರ್ದೇಶಕರುಗಳು ಮತ್ತು ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದ್ದು, ಸಂಘದ ನೂತನ ಆಡಳಿತ ಮಂಡಳಿ ಇವರಿಗೆ ಕೃತಜ್ಞಾಪೂರ್ವಕವಾದ ಧನ್ಯವಾದಗಳನ್ನು ಆಯ್ಕೆಯಾದವರು ಸಲ್ಲಿಸಿದ್ದಾರೆ.