ನಾಗಪುರ: ಐಟಿಐ (ITI) ಮುಗಿಸಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಸುವರ್ಣಾವಕಾಶ ಎದುರಾಗಿದೆ. ಭಾರತೀಯ ರೈಲ್ವೆಯ ಆಗ್ನೇಯ ಮಧ್ಯ ರೈಲ್ವೆ (SECR) ವಲಯವು ನಾಗಪುರ ಡಿವಿಷನ್ ಮತ್ತು ಮೋತಿಬಾಗ್ ವರ್ಕ್‌ಶಾಪ್‌ನಲ್ಲಿ ಖಾಲಿ ಇರುವ ಒಟ್ಟು 1079 ಆಕ್ಟ್ ಅಪ್ರೆಂಟಿಸ್ (Act Apprentice) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಒಟ್ಟು 1079 ಹುದ್ದೆಗಳಲ್ಲಿ ನಾಗಪುರ ವಿಭಾಗಕ್ಕೆ 977 ಹುದ್ದೆಗಳು ಹಾಗೂ ಮೋತಿಬಾಗ್ ವರ್ಕ್‌ಶಾಪ್‌ಗೆ 102 ಹುದ್ದೆಗಳನ್ನು ಮೀಸಲಿಡಲಾಗಿದೆ. ಫಿಟ್ಟರ್, ಎಲೆಕ್ಟ್ರಿಷಿಯನ್, ಕೋಪಾ (COPA), ವೆಲ್ಡರ್, ವೈರ್‌ಮನ್ ಸೇರಿದಂತೆ ಒಟ್ಟು 23 ವಿವಿಧ ಟ್ರೇಡ್‌ಗಳಲ್ಲಿ ಈ ತರಬೇತಿ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು.
ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT ಅಥವಾ SCVT ಇಂದ ಐಟಿಐ (ITI) ಪ್ರಮಾಣಪತ್ರ ಹೊಂದಿರಬೇಕು.
ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ವಯೋಮಿತಿ (19-05-2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ 15 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.
ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದ್ದು, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ (Merit List) ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ (NAPS) ಅಧಿಕೃತ ಪೋರ್ಟಲ್ https://www.apprenticeshipindia.gov.in ಮೂಲಕ ಜೂನ್ 18, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ 10ನೇ ತರಗತಿ ಹಾಗೂ ಐಟಿಐ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 19-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-06-2026 (ರಾತ್ರಿ 11:59 ರವರೆಗೆ)
- Apprenticeshipindia gov in registration
- Central Government Jobs
- How to apply for railway apprentice
- Indian Railway Jobs 2026
- ITI Railway Recruitment
- Railway Apprentice Jobs
- SECR Nagpur Vacancy 2026
- SECR Recruitment 2026
- ಉದ್ಯೋಗ ಮಾಹಿತಿ
- ಎಸ್ಇಸಿಆರ್ ರೈಲ್ವೆ ನೇಮಕಾತಿ
- ಐಟಿಐ ಉದ್ಯೋಗಗಳು
- ನಾಗಪುರ ರೈಲ್ವೆ ಉದ್ಯೋಗ
- ರೈಲ್ವೆ ಅಪ್ರೆಂಟಿಸ್ ಹುದ್ದೆಗಳು
- ರೈಲ್ವೆ ಇಲಾಖೆ ನೇಮಕಾತಿ
- ರೈಲ್ವೆ ಉದ್ಯೋಗ 2026
- ಸರ್ಕಾರಿ ಕೆಲಸಗಳು 2026





Leave a comment