(RKM Scholarships) ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರೆಸಲು 2024-25 ನೇ ಸಾಲಿನ ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್, ಹೀರೋ ಫಿನ್ ಕಾರ್ಪ್ ನಿಂದ ಬೆಂಬಲಿತ ರಮಣ್ ಕಾಂತ್ ಮುಂಜಾಲ್ ಫೌಂಡೇಶನ್ನ ಉಪಕ್ರಮವಾಗಿದ್ದು ಹಣಕಾಸು-ಸಂಬಂಧಿತ ಕೋರ್ಸ್ಗಳನ್ನು ಅನುಸರಿಸುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಮ್ಮ ಆಶಾದಾಯಕ ವೃತ್ತಿಜೀವನದ ಮತ್ತು ಉತ್ತಮ ಜೀವನದ ಕನಸುಗಳನ್ನು ಮುಂದುವರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
- ಪ್ರಥಮ ವರ್ಷದ ಬಿಬಿಎ, ಬಿಎಫ್ಐಎ, ಬಿ.ಕಾಂ. (ಎಚ್, ಇ), ಬಿಎಂಎಸ್, ಐಪಿಎಂ, ಬಿ.ಎ. (ಎಕನಾಮಿಕ್ಸ್). ಬಿಬಿಎಸ್, ಬಿಬಿಐ, ಬಿಎಎಫ್, ಬಿ.ಎಸ್ಸಿ (ಸ್ಟಾಟಿಸ್ಟಿಕ್ಸ್) ಅಥವಾ ಯಾವುದೇ ಇತರ ಹಣಕಾಸು-ಸಂಬಂಧಿತ ಪದವಿ ಕೋರ್ಸ್ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
- ಅಭ್ಯರ್ಥಿಗಳು 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ 80% ಅಂಕಗಳನ್ನು ಹೊಂದಿರಬೇಕು.
- ಅಭ್ಯರ್ಥಿಯ ವಾರ್ಷಿಕ ಕುಟುಂಬ ಆದಾಯವು ರೂ. 4 ಲಕ್ಷಗಳಿಗಿಂತ ಕಡಿಮೆ ಇರಬೇಕು.
- ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ.
- ಎಷ್ಟು ಸ್ಕಾಲರ್ ಶಿಪ್ ಲಭ್ಯ:
40,000 ದಿಂದ 5,50,000 (ಮೂರು ವರ್ಷಗಳವರೆಗೆ)ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
20-08-2024ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/RMKSP4 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.