SUDDIKSHANA KANNADA NEWS/ DAVANAGERE/ DATE:31-05-2024
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೆ.ಎಸ್ ರೇವಣಸಿದ್ದಪ್ಪ ರಂಗಮಂದಿರ ಆವರಣದಲ್ಲಿ ಗುಲಾಬಿ ಹೂ ನೀಡುವ ಮೂಲಕ ನೂತನ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಹರೀಶ್ ಕೆ.ಎಲ್ ಬಸಾಪುರ ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು, ಸರ್ಕಾರಿ ಶಾಲೆಯ ಮಕ್ಕಳು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಗೆ ಮೊದಲ ಸ್ಥಾನ ಗಳಿಸಿದ್ದು ತಾವು ಇದರಿಂದ ಪ್ರೇರೇಪಿಸಲಾಗಬೇಕೆಂದು ತಿಳಿಸಿ, ಕಳೆದ ವರ್ಷ ತಾವು ಮಕ್ಕಳಿಗೆ ನೀಡಿದ ಮಾತಿನಂತೆ ಶೇಕಡ ನೂರರಷ್ಟು ಹಾಜರಾತಿ ಪಡೆದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ನೀಡಲಾಗುವುದು. ಈ ವರ್ಷ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶೇಕಡ ನೂರರಷ್ಟು ಹಾಜರಾತಿ ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಗುರುಸಿದ್ದಯ್ಯ ಉಪಾಧ್ಯಕ್ಷೆ ಮಂಜುಳಾ, ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.