ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

School: ಪಠ್ಯಪುಸ್ತಕ, ಸಮವಸ್ತ್ರಗಳ ದಂಧೆ ತಡೆಗೆ ಆಗ್ರಹಿಸಿ ಸಚಿವ ಮಧು ಬಂಗಾರಪ್ಪರಿಗೆ ಟಿ. ಅಸ್ಗರ್ ಮನವಿ

On: June 23, 2023 1:18 PM
Follow Us:
Ministerge Manavi
---Advertisement---

SUDDIKSHANA KANNADA NEWS/ DAVANAGERE/ DATE:23-06-2023

ದಾವಣಗೆರೆ: ರಾಜ್ಯ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಖಾಸಗಿ ಶಾಲಾ (School) -ಕಾಲೇಜುಗಳು ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಪೆನ್‌, ಪೆನ್ಸಿಲ್‌ ಸೇರಿ ಲೇಖನ ಸಾಮಗ್ರಿಗಳು ಶಾಲಾ ಸಮವಸ್ತ್ರ ಶೂಗಳು ಶಾಲೆಯಲ್ಲೇ ಮಾರುವ ಅಕ್ರಮ ದಂಧೆ ನಿಲ್ಲಿಸಲು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್ ಅವರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ: 

BESCOM: ವಿದ್ಯುತ್ ನಿಲುಗಡೆ ಮಾಡಿದ್ದ ಬೆಸ್ಕಾಂಗೆ ಗ್ರಾಹಕರ ಪರಿಹಾರ ಆಯೋಗವು ವಿಧಿಸಿದ ದಂಡವೆಷ್ಟು..? 

ರಾಜ್ಯ ವ್ಯಾಪ್ತಿಯಲ್ಲಿ ಶಾಲಾ (School) – ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಪೆನ್‌, ಪೆನ್ಸಿಲ್‌ ಸೇರಿ ಲೇಖನ ಸಾಮಗ್ರಿಗಳನ್ನು ಶಾಲಾ (School) ಸಮವಸ್ತ್ರ ಶೂ ಗಳು ಶಾಲೆಯಲ್ಲೇ ಮಾರುವ ಪರಿಪಾಠ ರಾಜ್ಯ (State) ವ್ಯಾಪ್ತಿಯಲ್ಲಿ ಬಹುತೇಕ ಕಡೆ ಖಾಸಗಿ ಶಾಲಾ (School)  ಕಾಲೇಜು(college)ಗಳಲ್ಲಿ ಕಂಡುಬಂದಿದೆ. ಇದು ನಿಯಮ ಬಾಹಿರವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರಿ ಶಾಲಾ- ಕಾಲೇಜುಗಳು ಹೊರತುಪಡಿಸಿದರೆ ಇನ್ನುಳಿದಂತೆ ಬಹುತೇಕ ಖಾಸಗಿ ಶಾಲಾ- ಕಾಲೇಜುಗಳು ಲೇಖನ ಸಾಮಗ್ರಿ ಶಾಲಾ ಸಮವಸ್ತ್ರ ಶೂ ಮಾರಾಟಕ್ಕೆ ಇಳಿದಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಪ್ರವೇಶದ ಸಂದರ್ಭದಲ್ಲೇ ಒದಗಿಸುವುದನ್ನು ರೂಢಿಸಿಕೊಂಡಿವೆ. ನೋಟ್‌ ಪುಸ್ತಕ, ಬೈಂಡ್‌ ಕಾಗದ, ಬಣ್ಣದ ಪೆನ್ಸಿಲ್‌, ನಕ್ಷೆ ಮೊದಲಾದವು ನೀಡುತ್ತಾರೆ. ಹಣ ಪಾವತಿಸಿ ಶಾಲೆಯಲ್ಲೇ ಅವುಗಳನ್ನು
ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಮಾರುಕಟ್ಟೆಗಿಂತ ಹೆಚ್ಚಿನ ದರಗಳಲ್ಲಿ ಇವುಗಳನ್ನು  ಮಾರಲಾಗುತ್ತಿದ್ದು, ಬಡ ಪೋಷಕರ ಜೇಬಿಗೆ ಹೊರೆಯಾಗಿದೆ. ಅನೇಕ ಬಡವರು ಒಂದೊತ್ತು ಹೊಟ್ಟೆಗೆ ಊಟ ಇಲ್ಲದೆ ಹೋದರೂ ಸರಿ ತನ್ನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಪ್ರಯತ್ನ ಪಡುತ್ತಾರೆ. ಅದ್ದರಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ನಡೆಯುವ ಈ ಅಕ್ರಮ ದಂಧೆಗೆ ಕೂಡಲೇ ಕಡಿವಾಣ ಹಾಕಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಖಾಸಗಿ ಶಾಲಾ ಕಾಲೇಜುಗಳಿಗೆ ಯಾವ ತರಗತಿಗೆ ಎಷ್ಟು ಶುಲ್ಕ ಪಾವತಿಸಬೇಕು ಎಂದು ಹೇಳಿದೆ. ಅದೇ ರೀತಿ ಆಯಾ ಶಾಲಾ ಕಾಲೇಜುಗಳ ಆವರಣಗಳಲ್ಲಿ ಬೋರ್ಡ್ ಹಾಕಬೇಕು. ಅಷ್ಟೇ ಶುಲ್ಕವನ್ನು ಪಡೆಯಬೇಕು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

School text book, School News, School Manavi, School Minister, ಶಾಲಾ ಪಠ್ಯಪುಸ್ತಕ ಸೇರಿ ಹಲವು ವಿಚಾರಗಳ ಪ್ರಸ್ತಾಪ, ಶಾಲಾ ಕಾಲೇಜುಗಳ ನೀತಿ ವಿರುದ್ಧ ಸಚಿವರಿಗೆ ಮನವಿ, ಶಾಲಾ ಕಾಲೇಜಿನ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment