ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

School: ಶಾಲೆಯೊಳಗೆ ಕುಳಿತರೆ ಮೇಲ್ಛಾವಣಿ ಬೀಳುವ ಭಯ… ಹೊರಗಡೆ ಹೋದರೆ ಕರೆಂಟ್ ಶಾಕ್ ಆತಂಕ… ಮಕ್ಕಳಿಗೇನಾದರೂ ಆದ್ರೆ ಯಾರು ಹೊಣೆ…?

On: July 17, 2023 7:16 AM
Follow Us:
Vasathi School Problem
---Advertisement---

SUDDIKSHANA KANNADA NEWS/ DAVANAGERE/ DATE:17-07-2023

ದಾವಣಗೆರೆ: ಸರ್ಕಾರಿ ವಸತಿ ಶಾಲೆ (School) ಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ. ಆದ್ರೆ, ಜಡ್ಡುಗಟ್ಟಿದ ವ್ಯವಸ್ಥೆಯಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನ ಇದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಶಿಕ್ಷಕರು ನೀಡುವ ವಿದ್ಯಾಭ್ಯಾಸವೂ ಚೆನ್ನಾಗಿದೆ. ಮಕ್ಕಳಿಗೂ ಖುಷಿ ಖುಷಿ. ಆದ್ರೆ, ಶಾಲೆ (School) ಯಲ್ಲಿನ ಅವ್ಯವಸ್ಥೆ ನೋಡಿದರೆ ಶಿಕ್ಷಣ ಇಲಾಖೆ ಬೇಜವಾಬ್ದಾರಿತನಕ್ಕೆ ಸಾಕ್ಷಿ.

ಹೌದು. ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಹಾಗೂ ಗೋಪನಾಳ್ ಗ್ರಾಮದಲ್ಲಿರುವ ಸರ್ಕಾರಿ ವಾಲ್ಮಿಕಿ ಆಶ್ರಮ ಶಾಲೆಯ ದುಸ್ಥಿತಿ ಇದು. ವಸತಿ ಶಾಲಾ (School) ಕಟ್ಟಡಗಳ ಸ್ಥಿತಿ ದೇವರೇ ಬಲ್ಲ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಉನ್ನತೀಕರಣ, ಅಭಿವೃದ್ಧಿ, ಉಳುವಿಗೆ ಕಂಕಣಬದ್ಧವಾಗಿದೆ ಎಂಬ ಭರವಸೆ ಭರವಸೆಯಾಗಿಯೇ ಉಳಿದಿದೆ.

ಕುಸಿಯುವ ಹಂತದಲ್ಲಿ ಮೇಲ್ಛಾವಣಿ:

ಇನ್ನು ಮಳೆಗಾಲ ಆರಂಭವಾಗಿದೆ. ಚನ್ನಗಿರಿ ತಾಲೂಕಿನಲ್ಲಿಯೂ ಈಗಾಗಲೇ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಅಸ್ತಾಪನಹಳ್ಳಿ ಹಾಗೂ ಗೋಪನಾಳ್ ನಲ್ಲಿನ ವಸತಿ ಶಾಲೆಯ ದುಃಸ್ಥಿತಿ ನೋಡಿದರೆ ಮಕ್ಕಳು ಹೇಗೆ ಪಾಠ
ಕಲಿಯುತ್ತಾರೆ ಎಂಬ ಅನುಮಾನ ಎಲ್ಲರಿಗೂ ಶುರುವಾಗಿದೆ. ಆತಂಕ, ಭಯದಲ್ಲಿಯೇ ಓದುವ ದುರ್ಗತಿ ತಂದೊಡ್ಡಿದೆ ಆಡಳಿತ ವ್ಯವಸ್ಥೆ.

ಯಾವುದೇ ಸಂದರ್ಭದಲ್ಲಿ ಮೇಲ್ಚಾವಣಿ ಕುಸಿದು ಬೀಳುವ ಆತಂಕದಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಕಟ್ಟಡ 25 ವರ್ಷಕ್ಕಿಂತ ಹಳೆಯದು. ಶಿಕ್ಷಕರು ಉಳಿದುಕೊಳ್ಳಲು ಯಾವುದೇ ವಸತಿ ಕಟ್ಟಡ ಇಲ್ಲ.

ಕರೆಂಟ್ ಶಾಕ್ ಭೀತಿ:

ಶಾಲೆಯು ರಸ್ತೆ ಬದಿ ಇರುವುದರಿಂದ ಮಕ್ಕಳು ಓಡಾಡಲು ಭಯಡುವಂಥ ಸನ್ನಿವೇಶ ನಿರ್ಮಾಣವಾಗಿದೆ. ಶಾಲಾ ಆವರಣದಲ್ಲಿ ವಿದ್ಯುತ್ ಸಂಪರ್ಕ ಇದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕತ್ತಲೆಯಿಂದ ಕೂಡಿದೆ. ಸಿಸಿಟಿವಿ ಕ್ಯಾಮೆರಾ
ಅಳವಡಿಸಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಕೆಲಸ ನಿರ್ವಹಿಸದ ಸ್ಥಿತಿಯಲ್ಲಿ ಸಿಸಿಟಿವಿಗಳಿವೆ.

ಈ ಸುದ್ದಿಯನ್ನೂ ಓದಿ: 

Channagiri:ಪಟ್ಟುಬಿಡದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್: ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ವಿರುದ್ಧ ಯಾವ ರೀತಿ ಕ್ರಮ ಎಂದ್ರು ಎಸ್ಪಿ….?

ಕಂಪ್ಯೂಟರ್ ಇದೆ, ಶಿಕ್ಷಕರಿಲ್ಲ:

ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಸುಮಾರು 15 ರಿಂದ 20 ಕಂಪ್ಯೂಟರ್ ಗಳು ಇಲ್ಲಿವೆ. ಆದ್ರೆ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಶಿಕ್ಷಕರೇ ಇಲ್ಲ. ಪಠ್ಯೇತರ ಚಟುವಟಿಕೆಗಳು ಎಷ್ಟು ಮುಖ್ಯವೋ ಅಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರು ಓದಿನ ಒತ್ತಡದ ನಡುವೆ ಮನಸ್ಸು ಆಹ್ಲಾದಕರವಾಗುತ್ತದೆ. ಒತ್ತಡ ನಿವಾರಣೆ ಆಗುತ್ತದೆ. ಜೊತೆಗೆ ದೈಹಿಕವಾಗಿ ಸದೃಢವಾಗುತ್ತಾರೆ. ಇಲ್ಲಿ ದೈಹಿಕ ಶಿಕ್ಷಕರು ಇಲ್ಲದ ಕಾರಣ ಕ್ರೀಡೆಗಳನ್ನು ನಡೆಸುವುದು ಕಷ್ಟವಾಗಿದೆ.

ಕಂಪ್ಯೂಟರ್ ಗಳು, ಪ್ರೊಜೆಕ್ಟರ್ ಗಳು ಇದ್ದರೂ ಇಂಟರ್ನೆಟ್ ವ್ಯವಸ್ಥೆ ಇಲ್ಲ. ಇದರಿಂದ ಇದ್ದು ಇಲ್ಲದ ಸ್ಥಿತಿ ಇದೆ. ಪೋಷಕರು ಮಕ್ಕಳನ್ನು ಸಂಪರ್ಕಿಸಲು ದೂರವಾಣಿಯ ಕೊರತೆ ಇದೆ. ಮಕ್ಕಳು ತಮ್ಮ ಕುಟುಂಬದವರ ಜೊತೆ ಮಾತನಾಡಲು ಕಷ್ಟ ಅನುಭವಿಸುವಂತಾಗಿದೆ. ತಕ್ಷಣ ಶಾಲೆಗೆ ದೂರವಾಣಿ ಸಂಪರ್ಕ ಒದಗಿಸುವ ಕೆಲಸ ಮಾಡಬೇಕಿದೆ.

ಎಷ್ಟು ವಿದ್ಯಾರ್ಥಿಗಳಿದ್ದಾರೆ…?

ಸದ್ಯ ಅಸ್ತಾಪನಹಳ್ಳಿಯ ವಸತಿ ಶಾಲೆಗಳಲ್ಲಿ 1ನೇ ತರಗತಿಯಿಂದ 5 ತರಗತಿ ವರೆಗೆ 125 ವಿಧ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಬ್ಬರು ಮುಖ್ಯಶಿಕ್ಷಕರು, ನಾಲ್ವರು ಸಹ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗೋಪನಾಳ್ ವಸತಿ ಶಾಲೆಯಲ್ಲಿ 75
ವಿದ್ಯಾರ್ಥಿಗಳು ಓದುತ್ತಿದ್ದು, ಓರ್ವ ಮುಖ್ಯ ಶಿಕ್ಷಕರು, ಮೂವರು ಸಹ ಶಿಕ್ಷಕರಿದ್ದಾರೆ. 75 ವಿದ್ಯಾರ್ಥಿಗಳನ್ನು 3 ಕೊಠಡಿಗಳಲ್ಲಿ ಒಗ್ಗೂಡಿಸಿ ಪಾಠ ಮಾಡುವಂಥ ದುರ್ಗತಿ ಎದುರಾಗಿದೆ.

ಈ ವಸತಿ ಶಾಲೆಗಳಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚಿನ ಮಕ್ಕಳು ಪ್ರವೇಶಾತಿಗಾಗಿ ಸಮಾರು 50 ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನ ಶೂನ್ಯ.

ಸ್ಥಳಕ್ಕೆ ಬಾರದ ಅಧಿಕಾರಿಗಳು:

ಶಾಲೆಯ ಸುತ್ತಲೂ ಆಟ ಆಡಲು ವ್ಯವಸ್ಥಿತವಾದ ಜಾಗ ಇಲ್ಲ. ಎಲ್ಲಾ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಇಲ್ಲಿಗೆ ಭೇಟಿ‌ ಕೊಡದೇ ಬೇಜವಬ್ದಾರಿತನ‌ ತೋರಿಸಿದ್ದಾರೆ. ಇಲ್ಲಿಯ ಸಹ ಶಿಕ್ಷಕರಿಗೆ ವೇತನ ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ. ಸದ್ಯ ಈಗಲಾದ್ರು ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು‌ ಸರ್ಕಾರಿ ಶಾಲೆಗಳ‌ ಉಳಿವಿಗೆ ಮುಂದಾಗಬೇಕಿದೆ.

ಆರ್. ಪುನೀತ್ ಕುಮಾರ್

ವಸತಿ ಶಾಲೆಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಅವರ ಗಮನಕ್ಕೆ ತಂದಿದ್ದೇವೆ. ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಮಳೆಗಾಲ ಆರಂಭವಾಗಿದ್ದು, ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ಅನಾಹುತವಾದಾಗ ಬರುವ ಬದಲು ಈಗಲೇ ಇಲ್ಲಿನ ಅನಾಹುತಕ್ಕೆ ಎಡೆಮಾಡಿಕೊಡುವಂಥ ಸಮಸ್ಯೆಗಳನ್ನು ಪರಿಹರಿಸಬೇಕು. ಮಕ್ಕಳಿಗೆ ಕಲಿಯಲು ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ವಸತಿ ಶಾಲಾ ಕಟ್ಟಡಗಳ ಬಗ್ಗೆ ಕ್ರಮ ವಹಿಸುವ ಕೆಲಸ ಮಾಡಬೇಕಿದೆ ಎಂಬುದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಪುನೀತ್ ಕುಮಾರ್ ಆಗ್ರಹ.

School Proble, School Students, School Students Fear, School In Channagiri, Davanagere School News, Davanagere School Problems

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment