(Kotak Scholarships) ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ಕೋಟಕ್ ಲೈಫ್ ಇನ್ಶೂರೆನ್ಸ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ತಮಿಳುನಾಡು ಮತ್ತು ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ತಮ್ಮ ಸ್ನಾತಕಪೂರ್ವ ವಿದ್ಯಾಭ್ಯಾಸವನ್ನು ಮುಂದುವರೆಸಲು ಆರ್ಥಿಕ ಸಹಕಾರವನ್ನು ನೀಡಲು ಕೋಟಕ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿ.ನ ಉಪಕ್ರಮವಾಗಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಯಾರು ಅರ್ಹರು?;
- ತಮಿಳುನಾಡು ಮತ್ತು ಮಹಾರಾಷ್ಟ್ರದ ನಿವಾಸಿಗಳಾದ ವಿದ್ಯಾರ್ಥಿಗಳಿಗೆ ಲಭ್ಯವಿದೆ.
- ವಿದ್ಯಾರ್ಥಿಗಳು ತಮಿಳುನಾಡು ಮತ್ತು ಮಹಾರಾಷ್ಟ್ರದ ಎಂಟು ನಿರ್ದಿಷ್ಟ ಕಾಲೇಜುಗಳಲ್ಲಿ ಯಾವುದಾದರೂ ಒಂದರಲ್ಲಿ ಬಿ.ಕಾಂ. ಮೊದಲ ವರ್ಷದ ಕಾರ್ಯಕ್ರಮಕ್ಕೆ ದಾಖಲಾಗಿರಬೇಕು. ಕಾಲೇಜುಗಳ ಪಟ್ಟಿ:
- ಎ. ವೀರಯ್ಯ ಮೆಮೊರಿಯಲ್ ಶ್ರೀ ಪುಷ್ಪಂ ಕಾಲೇಜ್ (ತಾಂಜಾವೂರ್, ತಮಿಳುನಾಡು)
- ನಾಡರ್ ಮಹಾಜನ ಸಂಗಮ್ ಎಸ್. ವೆಲ್ಲೈಚಾಮಿ ನಾಡರ್ ಕಾಲೇಜ್ (ಮಧುರೈ, ತಮಿಳುನಾಡು)
- ಎಡಾಯತಂಗುಡಿ ಜಿ. ಎಸ್. ಪಿಳ್ಳೈ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ (ನಾಗಪಟ್ಟಣಂ, ತಮಿಳುನಾಡು)
- ಜೈ ಹಿಂದ್ ಸಿಂಧು ಎಜುಕೇಶನ್ ಟ್ರಸ್ಟ್ಸ್ ಮಂಘನ್ಮಾಲ್ ಉಧರಂ ಕಾಲೇಜ್ ಆಫ್ ಕಾಮರ್ಸ್ (ಪುಣೆ, ಮಹಾರಾಷ್ಟ್ರ)
- ಗೋಖಲೆ ಎಜುಕೇಶನ್ ಸೊಸೈಟೀಸ್ ಬಿ. ವೈ. ಕೆ. (ಸಿನ್ನಾರ್) ಕಾಲೇಜ್ ಆಫ್ ಕಾಮರ್ಸ್ (ನಾಶಿಕ್, ಮಹಾರಾಷ್ಟ್ರ)
- ಎಲ್ಆರ್ಡಿ ಅಂಡ್ ಎಸ್ಆರ್ಪಿ ಕಾಲೇಜ್ ಫಾರ್ ವಿಮೆನ್ (ನಾಗ್ಪುರ್, ಮಹಾರಾಹ್ಟ್ರ)
- ವ್ಯಾಸ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ (ಸೇಲಂ, ತಮಿಳುನಾಡು)
- ಧರ್ಮಪುರಂ ಅಧೀನಂ ಆರ್ಟ್ಸ್ ಕಾಲೇಕ್ (ಮೈಲಾಡುತುರೈ, ತಮಿಳುನಾಡು)
- ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ 65% ಅಥವಾ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರು 12ನೇ ತರಗತಿಯನ್ನು 2023-24ರ ವರ್ಷದಲ್ಲಿ ಉತ್ತೀರ್ಣರಾಗಿರಬೇಕು
- ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯವು ರೂ.3,60,000 ಅಥವಾ ಕಡಿಮೆ ಇರಬೇಕು.
ಎಷ್ಟು ಸ್ಕಾಲರ್ ಶಿಪ್ ಲಭ್ಯ:
30,000
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/KLISP2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15-09-2024