ದಾವಣಗೆರೆ: ಮಾಯಕೊಂಡ (MAYAKONDA) ಕಾಂಗ್ರೆಸ್ (CONGRESS) ನಲ್ಲಿ ಭಿನ್ನಮತ ಸ್ಫೋಟ ಮುಂದುವರಿದಿದ್ದು, ಟಿಕೆಟ್ (TICKET) ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಕಾಂಗ್ರೆಸ್ (CONGRESS) ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ (SAVITHA BAI MALLESH NAIK) ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು, ಕಾಂಗ್ರೆಸ್ (CONGRESS)ನ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಸಂಪರ್ಕದಲ್ಲಿದ್ದಾರೆ. ಚುನಾವಣೆ (ELECTION)ಯಲ್ಲಿ ಕಣಕ್ಕಿಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಬೇರೆ ಪಕ್ಷಗಳಿಂದಲೂ ಆಫರ್ ಬರುತ್ತಿದೆ. ಆದ್ರೆ, ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು.
ನನ್ನ ಟಿಕೆಟ್ (TICKET) ತಪ್ಪಲು ಎಡಿಟ್ (EDIT) ಆದ ಫೋಟೋ(PHOTO)ಗಳೇ ಕಾರಣ. ಮಹಿಳೆಗೆ ಅಪಮಾನ, ಚಾರಿತ್ರ್ಯವಧೆ, ತೇಜೋವಧೆ ಮಾಡಲಾಗಿದೆ. ಕೇವಲ ಟಿಕೆಟ್ ಗಾಗಿ ಒಬ್ಬ ಹೆಣ್ಣು ಮಗಳ ಮಾನ, ಮರ್ಯಾದೆ ತೆಗೆಯುವಷ್ಟು ನೀಚ ಮಟ್ಟಕ್ಕೆ ಇಳಿದಿದ್ದು ನೋವು ತಂದಿದೆ ಎಂದು ಕಣ್ಣೀರು ಸುರಿಸಿದರು.
ನನಗೆ ಈ ಬೆಳವಣಿಗೆ ಆಘಾತ, ನೋವು ತಂದಿದೆ. ಮೂರು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ (WORK) ಮಾಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ನೊಂದಿದ್ದಾರೆ. ಮಹಿಳೆಯರಿಗೆ ನ್ಯಾಯ ಇಲ್ಲ, ಹೆಣ್ಣಾಗಿ ಹೊರಗೆ ಬರಬಾರದು. ಬಂದರೆ ಇಂಥ ಆರೋಪ ಸಹಿಸಿಕೊಳ್ಳುವ ಶಕ್ತಿ ಬೇಕು. ರಾಜಕಾರಣದಲ್ಲಿ ಬೆಳೆಯುವುದು ಸುಲಭ ಅಲ್ಲ. ನನಗೆ ತುಂಬಾನೇ ಮೋಸ ಆಗಿದೆ. ಮೋಸ ಮಾಡಿ ಟಿಕೆಟ್ ತಂದರೆ ಗೆಲ್ಲುತ್ತೇವೆ ಎಂಬುದು ಭ್ರಮೆ ಅಷ್ಟೇ. ಜನರು ತಕ್ಕ ಪಾಠ ಕಲಿಸುವುದು ಖಚಿತ. ಕ್ಷೇತ್ರದಲ್ಲಿ 97 ಸಾವಿರ ಮಹಿಳಾ ಮತದಾರರಿದ್ದಾರೆ, 2 ಲಕ್ಷ ಮತಗಳಿವೆ. ಕ್ಷೇತ್ರ ಮಾತ್ರವಲ್ಲ ಪಕ್ಷ(PARTY)ದ ಮುಖಂಡರ ಬಳಿ ಫೋಟೋ ತೋರಿಸಿ ಅಪಮಾನ ಮಾಡಲಾಗಿದೆ. ಈ ಕಾರಣಕ್ಕೆ ಬಸವಂತಪ್ಪ ಎಂಬುವವರ ವಿರುದ್ಧ ದೂರು ಕೊಡಲಾಗಿದೆ. ಅಶ್ಲೀಲ ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿ ವಾರ ಕಳೆದರೂ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಶ್ಲೀಲವಾಗಿ ಫೋಟೋ ಎಡಿಟ್ (EDIT) ಮಾಡಿ ಶೇರ್ (SHARE) ಮಾಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದವರಿಂದಲೇ ಕೃತ್ಯ ಇದಾಗಿದೆ. ಶೇ.99ರಷ್ಟು ಮಾಯಕೊಂಡ ಕೈ ಟಿಕಟ್ ಖಚಿತ ಆಗಿತ್ತು. ಶೇ. 1ರಷ್ಟು ಕಾಣದ ಕೈಗಳು, ಹೈಕಮಾಂಡ್ ಗೆ ತಪ್ಪು ಮಾಹಿತಿ ನೀಡಿ ತಪ್ಪಿಸಲಾಗಿದೆ. ಷಡ್ಯಂತ್ರ, ಕುತಂತ್ರದಿಂದ ಕಾಂಗ್ರೆಸ್ (CONGRESS) ಟಿಕೆಟ್ ತಪ್ಪಿದೆ. ನ್ಯಾಯಯುತವಾಗಿ ಟಿಕೆಟ್ ಗೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಮಹಿಳೆಯ ಮಾನ ಹರಾಜು ಹಾಕಿ ಟಿಕೆಟ್ ಪಡೆದರೆ ಒಳ್ಳೆಯದಾಗುತ್ತಾ?. ನನಗೂ ಕುಟುಂಬ ಇದೆ, ತಾಯಿ ಹಾಗೂ ತಂದೆ ನೊಂದಿದ್ದಾರೆ. ನನ್ನ ನೋವು ನಾನೇ ನುಂಗಿಕೊಂಡಿದ್ದೇನೆ. ನನಗೆ ಮರ್ಯಾದೆ ಮುಖ್ಯ, ರಾಜಕಾರಣ ಅಲ್ಲ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪರ ಆಶೀರ್ವಾದದಿಂದ ಬೆಳೆದಿರುವೆ. ಮಾಯಕೊಂಡದ ಜನರ ಮನಸ್ಸು ಗೆದ್ದಿರುವೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ಈಗ ಜನರ ಒತ್ತಾಯ ಹೆಚ್ಚಾದ ಕಾರಣ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದೇನೆ. ಕೆಲ ಕುತಂತ್ರಿಗಳಿಂದ ಮಹಿಳೆಗೆ ಅವಮಾನ ಆಗಿದೆ. ಯಾವಾಗ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಮಾನ, ಮರ್ಯಾದೆ ಹೋದರೆ ಮರಳಿ ಪಡೆಯಲು ಆಗುತ್ತಾ. ತಾಯಿಯೂ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಪ್ಪು ಮಾಡದೇ ನಾನು ಶಿಕ್ಷೆ ಅನುಭವಿಸಬೇಕಾ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಅದೇ ರೀತಿಯಲ್ಲಿ ಕುಕೃತ್ಯ ಎಸಗಿದವರಿಗೂ ತಕ್ಕ ಪಾಠ ಕಲಿಸುತ್ತಾರೆ. ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ. ನಾನು ಕೊನೆಯ ಉಸಿರು ಇರುವವರೆಗೂ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ, ಕೆಲಸ ಮಾಡುತ್ತೇನೆ ಎಂದು ಸವಿತಾ ಬಾಯಿ ಮಲ್ಲೇಶ್ ನಾಯ್ಕ ಹೇಳಿದರು.
ಸಾವಿರ ಕುತಂತ್ರ ಮಾಡಿದರೂ ಹೆದರುವ ಪ್ರಶ್ನೆಯೇ ಇಲ್ಲ. ಜನರಿಗೋಸ್ಕರ ನಾನು ಅಂದುಕೊಂಡದ್ದನ್ನು ಮಾಡುತ್ತೇನೆ. ಮಾನವೀಯತೆ, ಮನುಷ್ಯತ್ವ, ಮರ್ಯಾದೆ ಮುಖ್ಯ. ಅಶ್ಲೀಲ ಫೋಟ್ ವೈರಲ್ ಮಾಡಿದಾಗಿನಿಂದಲೂ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಶ್ಲೀಲವಾಗಿ ಚಿತ್ರಿಸಿ ಮಹಿಳೆಯರನ್ನು ಕುಗ್ಗಿಸಬಹುದು ಎಂದುಕೊಂಡಿರುವವರಿಗೆ ತಕ್ಕ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪತಿ ನಿತಿನ್, ತಾಯಿ ಚಂದ್ರಿಬಾಯಿ, ತೇಜಸ್ ಮತ್ತಿತರರು ಹಾಜರಿದ್ದರು.