ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Savings Scheme: ಪ್ರತಿ ತಿಂಗಳು 20,000 ರೂ. ವರೆಗಿನ ಆದಾಯ ಗಳಿಸಲು ಅಂಚೆ ಇಲಾಖೆಯ ಹೊಸ ಯೋಜನೆ!

On: September 4, 2024 3:13 PM
Follow Us:
---Advertisement---

(Savings Scheme) ಕೇವಲ ಒಂದು ಬಾರಿ ಹೂಡಿಕೆ ಮಾಡುವುದರ ಮುಖಾಂತರ ಪ್ರತಿ ತಿಂಗಳು 20,000 ರೂ. ವರೆಗಿನ ಆದಾಯ ಗಳಿಸಲು ಅಂಚೆ ಇಲಾಖೆಯ ಈ ಒಂದು ಯೋಜನೆ ಅತ್ಯಂತ ಲಾಭದಾಯಕವಾಗಿದೆ.

ನಿವೃತ್ತಿ ಜೀವನದ ನಂತರ ಪ್ರತಿಯೊಬ್ಬರಿಗೂ ಹಣಕಾಸು ವಿಷಯದಲ್ಲಿ ಒಳ್ಳೆಯ ಪ್ಲಾನ್ ಹೊಂದಿರಬೇಕೆಂಬುದು ಕನಸಾಗಿರುತ್ತದೆ. ನಿವೃತ್ತಿ ಸಮಯದಲ್ಲಿ ಹಣಕಾಸು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಂಚೆ ಇಲಾಖೆಯ ಈ ಒಂದು ಹೊಸ ಸ್ಕೀಮ್ ಅತ್ಯಂತ ಲಾಭದಾಯಕವಾಗಿದೆ. ಈ ಪ್ಲಾನಿನ ಮೆಚುರಿಟಿ ಅವಧಿ (Maturity Period) ಕೇವಲ ಐದು ವರ್ಷವಿದ್ದು, ನಂತರದಲ್ಲಿ ಪ್ರತಿ ತಿಂಗಳೂ ನೀವು 20,000 ಆದಾಯ ಗಳಿಸಬಹುದು.

ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದಾಗಿ ಹಣಕಾಸು ವಿಷಯದಲ್ಲಿ ಹೂಡಿಕೆ ಮಾಡಲು ಯಾವುದೇ ತೊಂದರೆಗಳಿಲ್ಲ ಮತ್ತು ನಾವು ನಂಬಬಹುದು. ಅಂಚೆ ಇಲಾಖೆಯು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಿನ ನಾಗರಿಕರವರೆಗೂ ಕೂಡ ಉಪಯೋಗವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪೈಕಿ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವುದು ನಿವೃತ್ತಿ ಯೋಜನೆಯ ಪ್ಲಾನ್ (Retirement Scheme).

ಯಾವುದು ಇದು ಅಂಚೆ ಇಲಾಖೆಯ ಯೋಜನೆ?:
ಹಿರಿಯ ನಾಗರಿಕರಿಗಾಗಿ ಇರುವಂತಹ ಈ ಯೋಜನೆಯ ಹೆಸರು ” ಹಿರಿಯ ನಾಗರಿಕರ ಉಳಿತಾಯ ಯೋಜನೆ”, ಇದನ್ನು ಇಂಗ್ಲೀಷಿನಲ್ಲಿ “Senior Citizen Savings Scheme” ಎಂದು ಕರೆಯಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರು ಹೂಡಿಕೆ ಮಾಡಬಹುದು.

ಯೋಜನೆಯ ವಿವರ:
ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದಕ್ಕೂ ಮುಂಚೆ ಕೇವಲ 15 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡಲು ಸೀಮಿತಗೊಳಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕ 8.5% ವಾರ್ಷಿಕ ಬಡ್ಡಿ ದರ (Annual Interest Rate) ನೀಡಲಾಗುತ್ತದೆ. ಈ ಸ್ಕೀಮ್ ನ ಮೆಚುರಿಟಿ ಅವಧಿ ಐದು ವರ್ಷವಿರುತ್ತದೆ. ಅಂದರೆ ನೌಕರಿ ಮಾಡುವವರು ನಾವು 55 ವರ್ಷ ವಯಸ್ಸಿನಲ್ಲಿದ್ದಾಗ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು.

ಪ್ರತಿ ವರ್ಷ 8.5% ಬಡ್ಡಿ ದರ ನಿಮಗೆ ಸಿಕ್ಕರೆ 30 ಲಕ್ಷ ರೂಪಾಯಿಗೆ ಅದು ವಾರ್ಷಿಕ 2,46,000ರೂ ಬಡ್ಡಿ ಹಣ ನೀಡಲಿದೆ. ಇದನ್ನು 12 ತಿಂಗಳಿಗೆ ಅನ್ವಯ ಮಾಡಿದರೆ ಪ್ರತಿ ತಿಂಗಳು ನಿಮಗೆ 20,500ರೂ. ಸಿಗಲಿದೆ.

ಗಮನಿಸಬೇಕಾದ ವಿಷಯವೇನೆಂದರೆ ನಿವೃತ್ತ ನೌಕರರು ಈ ಯೋಜನೆ ಅಡಿಯಲ್ಲಿ ಬಡ್ಡಿ ಮುಖಾಂತರ ಆದಾಯ ಪಡೆಯಲು ಆದಾಯ ತೆರಿಗೆ (Income Tax) ಪಾವತಿಸಬೇಕು. ನೀವು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಈ ಕೂಡಲೇ ನಿಮ್ಮ ಹತ್ತಿರದ ಅಂಚೆ ಇಲಾಖೆ ಭೇಟಿ ನೀಡಿ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವ ಮುನ್ನ ನೀವು ಪ್ರತಿಯೊಂದು ಟರ್ಮ್ಸ್ ಅಂಡ್ ಕಂಡಿಷನ್ ತಿಳಿದುಕೊಳ್ಳಿ. ನಂತರದಲ್ಲಿ ನಿಮಗೆ ಈ ಯೋಜನೆಯ ಸರಿ ಎನಿಸಿದರೆ ಮಾತ್ರ ಹೂಡಿಕೆ ಮಾಡಿ.

ಈ ಲೇಖನವೂ ಕೇವಲ ಯೋಜನೆಗಳ ಮಾಹಿತಿಯನ್ನು ತಿಳಿಸುವುದಕ್ಕಾಗಿ ಮಾತ್ರವಾಗಿದ್ದು, ನಾವು ಯಾವುದೇ ರೀತಿಯ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ನಿಮಗೆ ಪ್ರೋತ್ಸಾಹಿಸುವುದಿಲ್ಲ.

Join WhatsApp

Join Now

Join Telegram

Join Now

Leave a Comment