ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Sari Exibution: ಕಾಶ್ಮೀರದಿಂದ ಕಾಂಚಿಪುರವರೆಗಿನ ರೇಷ್ಮೆ ಸೀರೆ ಬೇಕಾ.. ಸೀರೆಗಳ ಬೃಹತ್ ಪ್ರದರ್ಶನ, ಮಾರಾಟ ಸಿಲ್ಕ್ ಇಂಡಿಯಾಕ್ಕೆ ಸಿಕ್ಕಿದೆ ಚಾಲನೆ

On: August 20, 2023 12:39 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-08-2023

ದಾವಣಗೆರೆ : ಅಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಪೂಜಾ ಇಂಟರ್ ನ್ಯಾಷನಲ್ ಇಂದಿನಿಂದ ಆ.27ರವರೆಗೆ ನಡೆಯುವ 23 ರೇಷ್ಮೆ ಸೀರೆ (Sari)ಗಳ ಬೃಹತ್ ಪ್ರದರ್ಶನ – ಮಾರಾಟ ಸಿಲ್ಕ್ ಇಂಡಿಯಾ-2023 ಕ್ಕೆ ಎಸ್.ಎಸ್ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಲಾ ಕೃಷ್ಣಮೂರ್ತಿ, ಮಿಸ್ ಕರ್ನಾಟಕ -2019 ಸುಪ್ರೀತಾ ಒಡೆಯರ್, ಮಿಸ್ ಕರ್ನಾಟಕ ಸೃಜನಾ ವೀರೇಂದ್ರ ಕುಮಾರ್‌ ಚಾಲನೆ ನೀಡಿದರು.

ಭಾರತದಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿರುತ್ತದೆ. ಅಭಿವೃದ್ಧಿ ಸಂಸ್ಥೆಯನ್ನು ಭಾರತದಲ್ಲಿರುವ ಕುಶಲಕರ್ಮಿಗಳು ಮತ್ತು ನೇಕಾರರ ಶ್ರೇಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.

ಈ ಸುದ್ದಿಯನ್ನೂ ಓದಿ: 

SUSPECT DEATH BIG EXCLUSIVE STORY: ಸಾವಿನ ಸುತ್ತ ಅನುಮಾನದ ಹುತ್ತ: ಅಮೆರಿಕಾದಲ್ಲಿ ಮೂವರು ಸಾವಿನ ಸುತ್ತ ಗಿರಕಿ ಹೊಡೆಯುತ್ತಿರುವ ಮೂರು ಕಾರಣಗಳು…!

ವರಮಹಾಲಕ್ಷ್ಮಿ ಹಬ್ಬಗಳನ್ನು ಗಮನದಲ್ಲಿಟ್ಟು ಸಿಲ್ಕ್ ಇಂಡಿಯ -ಮೇಳವನ್ನು 9 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ದಾವಣಗೆರೆ ಜನತೆಯ ಮುಂದೆ ಪ್ರತಿ ದಿನ ಬೆಳಿಗ್ಗೆ 10.30ರಿಂದ ರಾತ್ರಿ 8.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ದಾವಣಗೆರೆ ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು 6 ದಿವಸಗಳ ಈ ವಿಶಿಷ್ಟ ಸಿಲ್ಕ್ ಇಂಡಿಯಾ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪಾದಕರನ್ನು ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಲಾಗಿದೆ. ಮೇಳಕ್ಕೆ ಪ್ರವೇಶವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಅಭಿವೃದ್ಧಿ ಸಂಸ್ಥೆಯ ಅಭಿನಂದನ ಇತರರು ಇದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment