SUDDIKSHANA KANNADA NEWS/ DAVANAGERE/ DATE:02-01-2025
ದಾವಣಗೆರೆ: ಎಲ್ಲಾ ಕಲಾವಿದರನ್ನು ಪ್ರೋತ್ಸಾಹಿಸಿದಂತೆ ನನ್ನನ್ನು ಬೆಳೆಸಿ ಹಾರೈಸಿ ಎಂದು ನಟ ಶ್ರೀನಗರ ಕಿಟ್ಟಿ ಮನವಿ ಮಾಡಿದರು.
ನಗರದ ಸರಸ್ವತಿ ಬಡಾವಣೆಯಲ್ಲಿರುವ ಕೆ ಎಸ್ ಹೈ ಸ್ಕೂಲ್ ಆವರಣದಲ್ಲಿ ಮಾತನಾಡಿದ ಅವರು, ಸಂಜು ವೆಡ್ಸ್ ಗೀತಾ ಭಾಗ- 2 ರ ಪ್ರಮೋಷನ್ ಗೆ ಬಂದಿದ್ದೇನೆ. ಈ ಸಿನಿಮಾ ಅದ್ದೂರಿಯಾಗಿ ಚಿತ್ರೀಕರಣವಾಗಿದೆ.
ದೊಡ್ಡ ತಾರಾಗಣ ಹೊಂದಿದೆ ಎಂದು ತಿಳಿಸಿದರು.
ರಚಿತಾ ರಾಮ್, ರಂಗಾಯಣ ರಘು ಮತ್ತಿತರರು ನಟಿಸಿದ್ದಾರೆ. ಶಿಡ್ಲಘಟ್ಟದ ಒಬ್ಬ ರೈತನು ಬೆಂಗಳೂರಿಗೆ ಬಂದು ಏನೆಲ್ಲಾ ಕಷ್ಟಪಡುತ್ತಾನೋ ಈ ನಾಯಕನ ಪಾತ್ರದಲ್ಲಿ ಅಡಗಿದೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲಾ ಕನ್ನಡಿಗರು ಈ ಸಿನಿಮಾವನ್ನ ಬೆಂಬಲಿಸಬೇಕು ಎಂದು ಕೋರಿದರು.
ಚಿತ್ರದ ನಿರ್ಮಾಪಕ ಕುಮಾರ್ ಮಾತನಾಡಿ ಒಳ್ಳೆಯ ಕಥೆಯನ್ನು ಆರಿಸಿ ಸಿನಿಮಾ ಮಾಡಿದರೆ ಕನ್ನಡಿಗರು ಒಪ್ಪಿಕೊಳ್ಳುತ್ತಾರೆ ಅಂತ ಸಿನಿಮಾ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ, ಹೊರದೇಶಗಳಲ್ಲಿ ಚಿತ್ರೀಕರಣ ಮಾಡಿ ಹಿಂದಿ ಸಿನಿಮಾಗಳಂತೆ ಈ ಚಿತ್ರವೂ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದೇವೆ. ಪ್ರತಿಯೊಬ್ಬ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಮಾತನಾಡಿ ಕರ್ನಾಟಕದ ಹೃದಯ ಭಾಗ ದಾವಣಗೆರೆ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಹೆಸರನ್ನು ತಂದುಕೊಟ್ಟಿದೆ. ವರನಟ ಡಾ. ರಾಜಕುಮಾರ್ ಹಾಗೂ ನಟಿ ಚಿಂದೋಡಿ ಲೀಲಾ ಅಂತಹ ಕಲಾವಿದರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಕೀರ್ತಿಯನ್ನು ಕೊಟ್ಟ ಕೀರ್ತಿ ದಾವಣಗೆರೆಗೆ ಸಲ್ಲುತ್ತದೆ. ನಟ ಶ್ರೀನಗರ ಕಿಟ್ಟಿ ಅವರು ಈಗಾಗಲೇ ಹಲವಾರು ಸಿನಿಮಾಗಳನ್ನು ನಟಿಸಿದ್ದಾರೆ. ಎಲ್ಲ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಂಡು ಯಶಸ್ವಿಯಾಗಿದೆ ಈ ಚಿತ್ರವು ನೂರು ದಿನಗಳ ಕಾಲ ಯಶಸ್ವಿ ಗೊಳ್ಳಲೆಂದು ಶುಭ ಹಾರೈಸಿದರು.
ಕೆ ಎಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಕೆ. ಎಸ್. ಬಸವರಾಜ್ ಮಾತನಾಡಿ ಚಿತ್ರದ ನಿರ್ಮಾಪಕ ಕುಮಾರ್ ಅವರು ನಮ್ಮ ಭಾಗದವರು. ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ. ಕನ್ನಡ ಚಿತ್ರರಂಗಕ್ಕೆ ಒಳ್ಳೊಳ್ಳೆ ನಿರ್ಮಾಪಕರು ಬಂದರೆ ಮತ್ತಷ್ಟು ಒಳ್ಳೆಯ ನಟರನ್ನು ಕಾಣಲು ಸಾಧ್ಯವಾಗುತ್ತದೆ. ಅದರಂತೆ ಶ್ರೀನಗರ ಕಿಟ್ಟಿ ಅವರು ಸಹ ಉತ್ತಮ ನಟ ಎನಿಸಿಕೊಳ್ಳುವುದಕ್ಕೆ ಇಲ್ಲಿ ಬಂದಿರುವ ಜನರೇ ಸಾಕ್ಷಿಯಾಗಿದ್ದಾರೆ. ಈ ಚಿತ್ರ ಅದ್ದೂರಿತನದಿಂದ ಕೂಡಿದೆ. ಈ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿ. ಎಸ್. ಸಂತೋಷ್, ಗೋಪಾಲ್ ದೇವರಮನೆ, ಗಿರೀಶ್ ಕುಮಾರ್, ಈಶ್ವರ್, ದೇವೇಂದ್ರ ಮತ್ತಿತರರು ಹಾಜರಿದ್ದರು.