ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದೇಣಿಗೆ ನೀಡುವುದರಲ್ಲಿ ಡಾ. ಶಾಮನೂರು ಕುಟುಂಬವು ಸದಾ ಮುಂದಿದೆ: ಸಾಣೆಹಳ್ಳಿ ಶ್ರೀಗಳು

On: August 31, 2025 10:18 PM
Follow Us:
ದೇಣಿಗೆ
---Advertisement---

SUDDIKSHANA KANNADA NEWS/ DAVANAGERE/DATE:31_08_2025

ದಾವಣಗೆರೆ: ಸೇವಾ ಮನೋಭಾವ ಹಾಗೂ ದೇಣಿಗೆ ನೀಡುವುದರಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬವು ಸದಾ ಮುಂದಿದೆ ಎಂದು ಸಾಣೇಹಳ್ಳಿ ಸದ್ಧರ್ಮಪೀಠದ ಮಹಾಸ್ವಾಮಿಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

READ ALSO THIS STORY: ಡಿಜೆ ಸೌಂಡ್ ಸಿಸ್ಟಂ ಹೊತ್ತೊಯ್ಯುತ್ತಿದ್ದ ಲಾರಿ ಸೀಜ್: ಮೂವರ ವಿರುದ್ಧ ಕೇಸ್!

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ಶಾಸಕರು ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಆಗಮಿಸಿ, ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೂ ಹಾಗೂ ಭಕ್ತರಿಗೂ ಆಶಿರ್ವಾದವನ್ನು ಮಾಡಿ ಮಾತನಾಡಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸಂಸದರಾಗುವುದಕ್ಕು ಮುನ್ನ ತಮ್ಮ ಪತಿ ಹಾಗೂ ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರೊಂದಿಗೆ ಕಾರ್ಯಕ್ರಮಹೊಂದರಲ್ಲಿ ಮಾತನಾಡಿದ್ದನ್ನು ಗಮನಿಸಿದ್ದು, ಅಂದೇ ನಾವು ಇವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದಿದ್ದೇವು ಎಂದರು. ಹಿರಿಯ ಶಾಸಕರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರು ಸದಾ ಸೇವಾ ಮನೋಭಾವ ಹೊಂದಿರುವವರು. ತಂದೆಯ ಗುಣಗಳೇ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರಿಗೂ ಸಂಸದೆಯವರಿಗೂ ಹಾಗೂ ಅವರ ಕುಟುಂಬಕ್ಕು ಬಂದಿವೆ. ಆದರೆ ನಮಗೆ ಎಸ್.ಎಸ್ ಮಲ್ಲಿಕಾರ್ಜುನ ಅವರಿಗಿಂತಲು ಡಾ.ಶಾಮನೂರು ಶಿವಶಂಕರಪ್ಪ ಅವರು ಅಚ್ಚುಮೆಚ್ಚು ಎಂದರು.

ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಮಾತನಾಡಿ ಸ್ವಾಮೀಜಿಗಳು ಅಪ್ಪಾಜಿಯವರಿಗೆ ಹಾಗೂ ಕುಟುಂಬಕ್ಕು ಮತ್ತು ಭಕ್ತರಿಗೆ ಆಶಿರ್ವಾದ ಮಾಡಲು ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಮಹಾಸ್ವಾಮಿಗಳು ನಮ್ಮೆಲ್ಲರಿಗೂ ಆಶೀರ್ವಾದ ನೀಡಲು ಬಂದಿದ್ದು, ಅವರ ಪಾದಸ್ಪರ್ಶದಿಂದ ನಮ್ಮೆಲ್ಲರ ಬದುಕು ಪಾವನವಾಯಿತು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖಂಡರಾದ ಅಣಬೇರು ರಾಜಣ್ಣ, ಕುರುಡಿ ಗಿರೀಶ್ ಸ್ವಾಮಿ, ಮುದೇಗೌಡ್ರು ಗಿರೀಶ್, ಮಾಗನಹಳ್ಳಿ ಪರಶುರಾಮ್, ಬೂದಾಳ್ ಬಾಬು ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment