ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬೇನಾಮಿ ಹೆಸರಿನಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಜಮೀನು ಖರೀದಿ: ರೈತರ ಗಂಭೀರ ಆರೋಪ!

On: November 4, 2025 6:11 PM
Follow Us:
ಎಸ್.ಎಸ್. ಮಲ್ಲಿಕಾರ್ಜುನ್
---Advertisement---

SUDDIKSHANA KANNADA NEWS/DAVANAGERE/DATE:04_11_2025

ದಾವಣಗೆರೆ: ಹರಿಹರ ತಾಲೂಕಿನ ಚಿಕ್ಕಬಿದರಿ, ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ಹದ್ದಿಗಿಡದ ಹಳ್ಳದ ಬಳಿ, ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಈ ಜಮೀನುಗಳಲ್ಲಿ ಒಂದು ಗುಂಟೆಯೂ ಸಹ ಖರಾಬು ಇಲ್ಲ. ಸಚಿವರು ಸುಳ್ಳು ಹೇಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

READ ALSO THIS STORY: “ನಿಮಗಾಗಿ ನಾನು ನನ್ನ ಹೆಂಡತಿ ಕೊಂದೆ”: ಐವರು ಪ್ರಿಯತಮೆಯರಿಗೆ ಮಹೇಂದ್ರ ರೆಡ್ಡಿ ಸಂದೇಶ, ಮತ್ತಷ್ಟು ಸ್ಫೋಟಕ ಮಾಹಿತಿ ಬಯಲು!

ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ರೈತರು, ಹಣ ಹಾಗೂ ಅಧಿಕಾರದ ದರ್ಪದಿಂದ ರೈತರು ಹಾಗೂ ಶಾಸಕರ ಬಗ್ಗೆ ಸಚಿವರು ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮ ಹಾಗೂ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮಗಳಲ್ಲಿ ಸಚಿವರು ಹಾಗೂ ಅವರ ಕುಟುಂಬದವರು ಮಾಡಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ ರೈತರು ಹಾಗೂ ಶಾಸಕರನ್ನು ನಾಯಿಗಳು ಎಂದು ಕರೆದಿದ್ದಾರೆ. ಇದು ಸಚಿವ ಮಲ್ಲಿಕಾರ್ಜುನ್ ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ತೋರುತ್ತದೆ. ಹಣ ಮತ್ತು ಅಧಿಕಾರ ಮಲ್ಲಿಕಾರ್ಜುನ್ ಅವರಿಗೆ ದೊರೆಕಿರುವುದು ಮುಗ್ಧ ರೈತರ ಹೊಲಗದ್ದೆಗಳನ್ನು ಅಕ್ರಮವಾಗಿ ಕಬಳಿಸಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಸರ್ವೇ ನಂಬರ್ 12,13,14 ಮತ್ತು 15ಕ್ಕೆ ಹೊಂದಿಕೊಂಡಿರುವುವ ಹಳ್ಳವನ್ನು ಮುಚ್ಚಿಲ್ಲ ಎನ್ನುವುದಾದರೆ ಅವರ ಮಾಲಿಕತ್ವದ ಹಿಟಾಚಿ ಕರೆಸಿ ತುರ್ತಾಗಿ ಹಳ್ಳವನ್ನು ತೆಗಿಸುವ ಹುಚ್ಚು ಸಾಹಸ ಮಾಡಿದ್ದು ಯಾವ ಕಾರಣಕ್ಕೆ. ಹಿಟಾಚಿಯಿಂದ ಹಳ್ಳ ತೆಗೆಸುತ್ತಿರುವ ಜಿಪಿಎಸ್ ಪೋಟೋಗಳು ನಮ್ಮ ಹತ್ತಿರ ಇವೆ. ಸಾಕ್ಷಿ ಹಾಗೂ ದಾಖಲಾತಿಗಳನ್ನು ಕೇಳುವ ಸಚಿವರು ರಾತ್ರೋ ರಾತ್ರಿ ಹಿಟಾಚಿಯನ್ನು ಕಂಪನಿ ಒಳಗಡೆ ತೆಗೆದುಕೊಂಡು ಹೋಗಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಸರ್ವೇ ನಂಬರ್ 236/ಸಿ ರಲ್ಲಿ 67 ಎಕರೆ ಕಡು ಬಡವ, ದೀನದಲಿತರ ರೈತರ ಜಮೀನನ್ನು ಕೆ.ಐ.ಎ.ಡಿ.ಬಿ ಮುಖಾಂತರ ರೈತರ ನಕಲಿ ಸಹಿಗಳನ್ನು ಮಾಡಿ ರೈತರಿಗೆ ಸೇರಬೇಕಾಗಿದ್ದ ಪರಿಹಾರದ ಹಣವನ್ನು ಲಪಟಾಯಿಸಿರುವುದು ರೈತರಿಗೆ ಮಾಡಿರುವ ಅನ್ಯಾಯವಲ್ಲವೇ? ಕೆ.ಐ.ಎ.ಡಿ.ಬಿಯಿಂದ ಶಾಮನೂರು ಶುಗರ್ಸ್ ನವರು ಚಿಕ್ಕಬಿದರಿ, ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಕಾರ್ಖಾನೆ ಮಾಡುತ್ತೇವೆ ಎಂದು ಸಾವಿರಾರು ಎಕರೆ ರೈತರ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದರ ಬಗ್ಗೆ ಧ್ವನಿ ಎತ್ತಿದ ರೈತರು ಹಾಗೂ ಹರಿಹರ ಶಾಸಕರನ್ನು ಹೀಯಾಳಿಸುವುದು ಅಧಿಕಾರದ ದರ್ಪವಲ್ಲದೇ ಮತ್ತೇನು ಎಂದು ಹೇಳಿದರು.

ಗೋಷ್ಠಿಯಲ್ಲಿ ಚಿಕ್ಕಬಿದರಿ ಗ್ರಾಮದ ಕೊಟ್ರೇಶಪ್ಪ, ದುಗ್ಗಾವತಿಯ ಯೋಗೇಶ್, ಕೆಂಚಪ್ಪ, ಭದ್ರಪ್ಪ, ಕಾಳಪ್ಪ, ಗುಟ್ಟಪ್ಪ ಮತ್ತಿತರರು ಹಾಜರಿದ್ದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment