SUDDIKSHANA KANNADA NEWS/ DAVANAGERE/ DATE:08-04-2023
ದಾವಣಗೆರೆ: ನಗರದ ದೇವರಾಜ ಅರಸು (DEVARAJA ARASU) ಬಡಾವಣೆಯ 39 ನೇ ಬ್ಲಾಕ್ ನಲ್ಲಿ ದಾವಣಗೆರೆ (DAVANAGERE) ಉತ್ತರ ವಿ(NORTH) ಧಾನಸಭಾ ಕ್ಷೇತ್ರದ ಕಾಂಗ್ರೆಸ್ (CONGRESS) ಅಭ್ಯರ್ಥಿ(CANDIDATE) ಯಾಗಿ ಸ್ಪರ್ಧಿಸಿರುವ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು ಚುನಾವಣಾ (ELECTION) ಪ್ರಚಾರ ನಡೆಸಿದರು.
ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಪಕ್ಷದ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ (ROAD SHOW) ನಡೆಸಿದರು, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಡಾವಣೆಯ ನಾಗರಿಕರು ಮತ್ತು ಪಕ್ಷದ ಕಾರ್ಯಕರ್ತರು ಮಲ್ಲಿಕಾರ್ಜುನ್ (MALLIKARJUN) ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಭಾಗದ ಮಹಾನಗರ ಪಾಲಿಕೆ ಸದಸ್ಯೆ ಆಶಾ ಉಮೇಶ್, ಕಾಂಗ್ರೆಸ್ ಪಕ್ಷದ ಮುಖಂಡ ಶಿವನಹಳ್ಳಿ
ರಮೇಶ್, ಕೆ.ಜಿ. ಶಿವಕುಮಾರ್ ಚೆಲುವಪ್ಪ, ಬಿ.ರಮೇಶ್, ಕರೂರು ನಾಗರಾಜಪ್ಪ, ವಿನಯ್, ದುಗ್ಗಪ್ಪ, ಜಿಮ್, ಅವಿನಾಶ್, ಸೀಮೆಎಣ್ಣೆ ಮಲ್ಲೇಶ್, ಹರೀಶ್,ಸಂತೋಷ್, ಉಮೇಶ್, ಪ್ರಕಾಶ್ ಪಾಟೀಲ್, ಕವಿತಾ ಚಂದ್ರಶೇಖರ್, ರವಿ ಸ್ವಾಮಿ, ಆಶಾ ಮುರುಳಿ, ಶುಭ ಮಂಗಳ, ನಾಗರತ್ನಮ್ಮ ಮಲ್ಲೇಶಪ್ಪ, ಎಸ್ ಟಿ ಪಿ ತಿಪ್ಪೇಶ್, ನಾಗಭೂಷಣ ಕಡೆಕೊಪ್ಪ, ಮಂಜಣ್ಣ ಕಂಬಳಿ, ಒಬಿಸಿ ರಾಮಣ್ಣ, ಪಿಸಾಳೆ ರಘು,ರವಿ ಸೊಸೈಟಿ, ಕರೂರ್ ಷಣ್ಮುಖ, ವಿನಯ್ ಜೋಗಪ್ಪನವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಎಸ್. ಎಸ್. ಪ್ರಚಾರ:
ದಾವಣಗೆರೆ ದಕ್ಷಿಣ (DAVANAGERE NORTH) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ನವರು ಮಹಾನಗರ ಪಾಲಿಕೆಯ 10ನೇ ವಾರ್ಡ್‍ನಲ್ಲಿ ಪ್ರಚಾರ (CAMPAIGN) ನಡೆಯಿತು.
ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ,ವಾರ್ಡ್‍ನ ಪ್ರಮುಖ ಬೀದಿಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ವಾರ್ಡ್ ಅಧ್ಯಕ್ಷ ಸತ್ಯನಾರಾಯಣ, ಮುಖಂಡರಾದ ಬಾಬುರಾವ್ ಸಾಳಂಕಿ, ಪಿ.ಜೆ.ನಾಗರಾಜ್ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಲಾಯಿತು.
ನಂತರ ಕಾರ್ಯಕರ್ತರನ್ನು ಮತ್ತು ಮತದಾರರನ್ನುದ್ದೇಶಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪನವರು ದಾವಣಗೆರೆ (DAVANAGERE) ನಗರ (CITY) ದಕ್ಷಿಣ (SOUTH) ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನು ಕೆಲಸ ಆಗಬೇಕಿದ್ದು, ಇದಕ್ಕೆ ಮತ್ತೊಮ್ಮೆ ಕಾಂಗ್ರೆಸ್ (CONGRESS) ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಬರುವ ತಿಂಗಳು 10ರಂದು ಚುನಾವಣೆ ನಡೆಯಲಿದ್ದು ಕ್ಷೇತ್ರದ ಅಭಿವೃದ್ದಿ, ಶಾಂತಿ- ಸಹಬಾಳ್ವೆಗೆ ಕಾಂಗ್ರೆಸ್ (CONGRESS) ಪಕ್ಷದ ಅಭ್ಯರ್ಥಿಯಾಗಿರುವ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್.ಬಿ.ಗೋಣೆಪ್ಪ, ಎಂ.ಮಂಜುನಾಥ್, ಎಸ್.ಮಲ್ಲಿಕಾರ್ಜುನ್, ಉಮೇಶ್ ಸಾಳಂಕಿ, ತರಕಾರಿ ಚಂದ್ರಪ್ಪ, ಎಸ್.ಬಸಪ್ಪ, ಹನುಮಂತರಾವ್ ಜಾಧವ್, ಮಂಜುನಾಥ ಸಾಳಂಕಿ, ಪ್ರಕಾಶ್ ಅಂಬೋಜಿ, ವೀರಣ್ಣ, ಸೀಮೆಎಣ್ಣೆ ಮಲ್ಲೇಶ್, ನಾಗರಾಜ್, ಬಾಬುರಾವ್, ಭೈರೇಶ್, ದುರುಗಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪದಾಧಿಕಾರಿಗಳು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.