SUDDIKSHANA KANNADA NEWS/ DAVANAGERE/ DATE:05-11-2023
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪ್ರತಿಮಾ ಒಳ್ಳೆಯ ಅಧಿಕಾರಿಯಾಗಿದ್ದರು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ ವಿಡಿಯೋ ಕಾನ್ಫೆರನ್ಸ್ ಸಭೆಗೂ ಹಾಜರಾಗಿದ್ದರು. ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ. ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನೂ ನೀಡಿದ್ದಾರೆ ಎಂದು ಹೇಳಿದರು.
ಪ್ರತಿಮಾ ಹತ್ಯೆ ಪ್ರಕರಣದಿಂದ ಅಧಿಕಾರಿಗಳಿಗೆ ರಾಜ್ಯದಲ್ಲಿ ಭದ್ರತೆ ಇಲ್ಲ ಎಂಬುದು ಸುಳ್ಳು. ಊರಲ್ಲಿ ಇದ್ದವರಿಗೆಲ್ಲಾ ಪೊಲೀಸರು ಭದ್ರತೆ ನೀಡಲಾಗುತ್ತದೆಯೇ…? ಪಿನ್ ಟು ಪಿನ್ ಹಾಗೂ ಕೇಸ್ ಟು ಕೇಸ್ ತನಿಖೆ ನಡೆಯುತ್ತದೆ. ಇದರಲ್ಲಿ
ಯಾವುದೇ ಅನುಮಾನ ಬೇಡ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ನೀನು ಬೇರೆ ಊರಿನಲ್ಲಿದ್ದು ಏನಾದರೂ ಮಾಡಿದ್ದರೆ ಇಲ್ಲಿನವರಿಗೆ ಹೇಗೆ ಮಾಹಿತಿ ಸಿಗುತ್ತದೆ? ವೈಯಕ್ತಿಕವಾಗಿಯೂ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಯಾರ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಸಿಗಬೇಕು. ಹಾಗಾಗಿ, ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.