SUDDIKSHANA KANNADA NEWS/ DAVANAGERE/ DATE:14-07-2023
ದಾವಣಗೆರೆ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ (G. M. Siddeshwara) ಅವರು, ಸಿಡಿಗುಂಡುಗಳನ್ನೇ ಸಿಡಿಸಿದರು.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಅದಿರು ಸಾಗಣೆ ಮಾಡುವ ಲಾರಿಗಳನ್ನು ನಿಲ್ಲಿಸಿದ್ದರೆ ಸಂತೋಷ. ನಾವ್ಯಾಕೆ ಬೇಸರ ಪಟ್ಟುಕೊಳ್ಳಬೇಕು. ಆದ್ರೆ, ಯಾಕೆ ನಿಲ್ಲಿಸಲಾಗಿದೆ ಎಂಬ ಕಾರಣ ಬಹಿರಂಗಪಡಿಸಬೇಕು ಅಷ್ಟೇ ಎಂದು ಹೇಳಿದರು.
ಭರಮಸಾಗರದಲ್ಲಿನ ನಮ್ಮ ಮನೆಯ ಮುಂದೆ ಅದಿರು ಹೊತ್ತ ಲಾರಿಗಳು ಹೋಗುತ್ತಿದ್ದವು. ಮುಖ್ಯ ರಸ್ತೆಯಿಂದ ಬೇರೊಂದು ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಿ ಎಂದು ಡಿಸಿ ಅವರಿಗೆ ನಾನೇ ಮನವಿ ಮಾಡಿದ್ದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರೂ ಬಂದರು ನಿಲ್ಲಿಸಿರಲಿಲ್ಲ. ಈಗ ನಿಲ್ಲಿಸಿದ್ದಾರೆ. ಸಂತೋಷ, ಆದ್ರೆ, ನಿಲ್ಲಿಸಲು ಕಾರಣ ಏನು ಎನ್ನೋದು ಬೇಕು ಅಲ್ವಾ. ನನಗೆ ಅನಾನುಕೂಲವಾಗಲಿ ಎಂಬ ಕಾರಣಕ್ಕೆ ನಿಲ್ಲಿಸಿದ್ದರೆ ಸ್ವಾಗತಿಸುತ್ತೇನೆ. ಸಂತೋಷ ಪಡುತ್ತೇನೆ. ಅದರಲ್ಲಿ ಎರಡು ಮಾತಿಲ್ಲ ಎಂದರು.
ಬೇಲಿಕೆರೆಯಲ್ಲಿ ತಮ್ಮನನ್ನು ಸಿಲುಕಿಸಿದರು:
2015ರಲ್ಲಿ ನಾನು ಕೇಂದ್ರ ಸಚಿವನಾಗಿದ್ದಾಗ ಬೇಲಿಕೆರೆ ಅದಿರು ಪ್ರಕರಣ ನಡೆದಿದ್ದು, ನಾವು ಯಾವ ಚಟುವಟಿಕೆಗಳನ್ನು ಕಾನೂನು ಬಾಹಿರವಾಗಿ ಮಾಡಿಲ್ಲ. ನಾವು ಬೇಲಿಕೆರೆಗೆ ಕಳುಹಿಸಿದ್ದೆವು. ಅಲ್ಲಿಂದ ಬೇರೆ ಕಡೆ ಹೋಗುತಿತ್ತು. ರಫ್ತಿನಲ್ಲಿ ಒಂಚೂರು ಹೆಚ್ಚು ಕಡಿಮೆ ಆಗಿಲ್ಲ. ಒಂದು ಕೆಜಿನೂ ವ್ಯತ್ಯಾಸ ಆಗಿಲ್ಲ. ಟ್ರಾನ್ಸ್ ಪೋರ್ಟ್ ನಲ್ಲಿ ಹತ್ತು ಟನ್ ಗಿಂತ ಹೆಚ್ಚು ರವಾನೆ ಮಾಡುವ ಹಾಗಿರಲಿಲ್ಲ. ಅದಿರು ರಫ್ತು ಮಾಡುವ ವಿಚಾರದಲ್ಲಿ ಒಂದು ರೂಪಾಯಿಯೂ ವ್ಯತ್ಯಾಸ ಆಗಿಲ್ಲ. ನನ್ನ ಮೇಲೆ ಗೂಬೆ ಕೂರಿಸಲು ಎಸ್. ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ಅವರದ್ದೇ ಸರ್ಕಾರ ಇತ್ತು. ನಮ್ಮ ಲಾರಿಗಳನ್ನು ಹಿಡಿಸಿ ನನ್ನ ತಮ್ಮನಿಗೆ ತೊಂದರೆ ಕೊಟ್ಟರು. ಕೋರ್ಟ್ ನಲ್ಲಿ ಕೇಸ್ ಇತ್ತು. ಅದು ವಜಾ ಆಯ್ತು ಎಂದರು.
ಭ್ರಷ್ಟಾಚಾರ ಮಾಡಿ ಆಸ್ತಿ ಮಾಡಿಲ್ಲ:
ನನ್ನ ಆಸ್ತಿ ಬಗ್ಗೆ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿದ್ದಾರೆ. ನಾವು ಭ್ರಷ್ಟಾಚಾರ ಮಾಡಿ ಆಸ್ತಿ ಮಾಡಿಲ್ಲ, ಹೊಡೆದಿಲ್ಲ. ನನ್ನನ್ನು ಸೇರಿ ಆರು ಮಂದಿ ನಮ್ಮ ಕುಟುಂಬದಲ್ಲಿ ದುಡಿಯುತ್ತೇವೆ. ಅವರ ಮನೆಯಲ್ಲಿ ದುಡಿಯೋದು ಅವನೊಬ್ಬನೇ.
ಅವರದ್ದು ಎಷ್ಟು ಆಸ್ತಿ ಇತ್ತು, ಈಗ ನಮ್ಮದು ಎಷ್ಟು ಆಸ್ತಿ ಇದೆ, ಅವರದ್ದು ಎಷ್ಟಿದೆ ಎಂಬುದರ ಬಗ್ಗೆ ಲೆಕ್ಕ ಕೊಡಲಿ. ನಾವು ಪ್ರಾಮಾಣಿಕವಾಗಿ ದುಡಿದು ಸಂಪಾದಿಸಿದ ಹಣ ಎಂದು ಟಾಂಗ್ ಕೊಟ್ಟರು.
ಆರೋಪ ಸಾಬೀತಾದರೆ ಶಿಕ್ಷೆಗೊಳಪಡುತ್ತೇನೆ: G. M. Siddeshwara
ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಶಿಕ್ಷೆಗೊಳಪಡಲು ಸಿದ್ಧನಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ, ಯಾರಿಗೂ ಕಿರುಕುಳ ನೀಡಿಲ್ಲ. ಅಧಿಕಾರಿಗಳಿದ್ದಾರೆ ಕೇಳಲಿ. ಅಧಿಕಾರಿಗಳ ಬಳಿ ಸಿದ್ದೇಶ್ವರ್ (G. M. Siddeshwara) ಹೇಗೆ ಎಂದರೆ ಅವರೇ ಎಲ್ಲವನ್ನೂ ಹೇಳುತ್ತಾರೆ ಎಂದು ತಿಳಿಸಿದರು.
ನನ್ನ ದುಡ್ಡಲ್ಲಿ ಕಾಲೇಜು ಕಟ್ಟುತ್ತೇವೆ, ತಪ್ಪೇನು..?
ಕಾಲೇಜಿನ ಮೇಲೆ ಕಾಲೇಜು ಕಟ್ಟುತ್ತಾರೆ ಎಂಬ ಆರೋಪ ಮಾಡಿದ್ದಾರೆ. ನನ್ನ ದುಡ್ಡಿನಲ್ಲಿ, ನನ್ನ ಕಾಲೇಜಿನಲ್ಲಿ ಕಾಲೇಜಿನ ಮೇಲೆ ಕಾಲೇಜು ಕಟ್ಟಿದ್ದೇವೆ. ಇನ್ನು ಎಷ್ಟೋ ಕಾಲೇಜು ಬೇಕಾದರೆ ಖರೀದಿ ಮಾಡುತ್ತೇನೆ. ಕೊಡಲು ಬಂದರೆ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ದೇವರು ಶಕ್ತಿ ಕೊಟ್ಟಿದ್ದಾನೆ. ಇನ್ ಕಂ ಟ್ಯಾಕ್ಸ್, ಸೇಲ್ ಟ್ಯಾಕ್ಸ್ ಸೇರಿದಂತೆ ಎಲ್ಲಾ ಇಲಾಖೆಗಳಿವೆ. ಅಲ್ಲಿನ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಆದಾಯ ತೆರಿಗೆ ಇಲಾಖೆ ಯಾಕಿದೆ..? ಎಲ್ಲಾ ಪರಿಶೀಲನೆ
ಮಾಡುತ್ತದೆ. ಅವರು ದಾಖಲೆ ಕೇಳಿದರೆ ಕೊಡುತ್ತೇವೆ. ಇವರಿಗ್ಯಾಕೆ ಚಿಂತೆ ಎಂದು ಪ್ರಶ್ನಿಸಿದರು.
ಆರೋಪ ಸುಳ್ಳು: G. M. Siddeshwara
ಆಶ್ರಯ ನಿವೇಶನ ಹಂಚಿಕೆಯಲ್ಲಿ ದುಡ್ಡು ಹೊಡೆದಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ. ದೂಡಾದಲ್ಲಿ ನಾನು ಸದಸ್ಯನೂ ಅಲ್ಲ. ಹಾಗಿದ್ದಾಗ ದುಡ್ಡು ಪಡೆಯುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು
ಖಾರವಾಗಿ ಪ್ರಶ್ನಿಸಿದರು.
ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಿವೇಶನ ಹಂಚಿಕೆ ಕುರಿತಂತೆ ತನಿಖೆ ಮಾಡಲಿ. ಬೇಡ ಎಂದು ಹೇಳಲ್ಲ. ಈ ಹಿಂದೆ ಮಲ್ಲಿಕಾರ್ಜುನ್ ಮಂತ್ರಿಯಾಗಿದ್ದಾಗ ಹಂಚಿಕೆಯಾಗಿರುವ ನಿವೇಶನಗಳ ಹಂಚಿಕೆ ಕುರಿತಂತೆಯೂ ಸಮಗ್ರ ತನಿಖೆ ಆಗಲಿ. ಆಗ ಹೇಗೆ ಫಲಾನುಭವಿಗಳು ಆಯ್ಕೆಯಾದರು, ಇನ್ ಕಂ ಎಲ್ಲಿಂದ ಬಂತು, ಹಣ ಹೇಗಾಯ್ತು ಎಂಬ ಕುರಿತಂತೆಯೂ ಸಮಗ್ರ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ನಾಲ್ಕು ವರ್ಷ ಮಾತನಾಡಲೇ ಇಲ್ಲ:
2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಎಸ್. ಎಸ್. ಮಲ್ಲಿಕಾರ್ಜುನ್ ಮಧ್ಯ ನಾಲ್ಕು ವರ್ಷ ಬಾಯಿ ಬಿಟ್ಟಿರಲಿಲ್ಲ. ಚುನಾವಣೆ ವೇಳೆಯಲ್ಲಿಯೂ ಮಾತನಾಡಲಿಲ್ಲ. ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಾಗ ಒಂದು ರೀತಿ
ಮಾತನಾಡುವುದು ಸರಿಯಲ್ಲ ಎಂದು ಸಿದ್ದೇಶ್ವರ (G. M. Siddeshwara) ಹೇಳಿದರು.
ಭ್ರಷ್ಟಾಚಾರ ಯಾರೂ ಮಾಡಿಲ್ಲ:
ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಿಯೂ ಕಳಪೆ ಕಾಮಗಾರಿ ಆಗಿಲ್ಲ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೆಡೆ ಕಳಪೆ ಆಗಿತ್ತು. ನಾನೇ ಸರಿಪಡಿಸುವಂತೆ ಸೂಚಿಸಿದ್ದೇನೆ. ಭ್ರಷ್ಟಾಚಾರ ಮಾಡಲು ಯಾರೂ ನಮ್ಮ ಪಕ್ಷದಲ್ಲಿ ತಯಾರಿಲ್ಲ. ಎಲ್ಲರೂಗೌರವಯುತವಾಗಿ ಇದ್ದಾರೆ. ಏನೇನೋ ಮಾತನಾಡಿದರೆ ಪ್ರತಿಕ್ರಿಯೆ ಕೊಡಲ್ಲ. ಆಧಾರ ಇಟ್ಟು ಮಾತನಾಡಲಿ ಎಂದು ಸವಾಲು ಹಾಕಿದರು.
ಎನ್ ಒ ಸಿ ನಿಲ್ಲಿಸಿರೋದು ಯಾಕೆ..?
ದೂಡಾದಲ್ಲಿ ನಿವೇಶನ ಹೊಂದಿದವರಿಗೆ ಎನ್ ಒ ಸಿ ಕೊಡೋದು ನಿಲ್ಲಿಸಿದ್ದಾರೆ. ಮಹಾನಗರ ಪಾಲಿಕೆಯಲ್ಲಿಯೂ ಡೋರ್ ನಂಬರ್ ನಿಲ್ಲಿಸಿದ್ದಾರೆ. ನ್ಯಾಯವಾಗಿ ಇರುವವರಿಗೆ ಕೊಡಲಿ. ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಾಗ ಒಂದು ರೀತಿ
ವರ್ತನೆ ಮಾಡಬಾರದು. ನಾನು ಉತ್ತರ ಕೊಡಬೇಕೆಂದೂ ಇರಲಿಲ್ಲ. ಅನಿವಾರ್ಯ ಕಾರಣದಿಂದ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.
G. M. Siddeshwara News, G. M. Siddeshwara News Updates, G. M. Siddeshwara Talk, Davanagere M. P. G. M. Siddeshwara Statement