SUDDIKSHANA KANNADA NEWS/ DAVANAGERE/ 03-04-2023
DAVANAGERE: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ (CONGRESS) ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಶಾಮನೂರು ಶಿವಶಂಕರಪ್ಪರು ಚಾಲನೆ ನೀಡಿದರು. ಈ ವೇಳೆ ಮಲ್ಲಿಕಾರ್ಜುನ್ ಅವರೂ ಸಹ ಇದ್ದರು.
ಇನ್ನು ಶಾಮನೂರಿನ ಶ್ರೀ ಆಂಜನೇಯ ಸ್ವಾಮಿ (ANJANEYA SWAMY) ದೇವಸ್ಥಾನ (TEMPLE), ಈಶ್ವರ ದೇಗುಲದಲ್ಲಿ ಪತ್ನಿ ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN)ರ ಜೊತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆ ಬಳಿಕ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಇಳಿದರು. ಶಾಮನೂರಿಗೆ ಮಲ್ಲಿಕಾರ್ಜುನ್ (MALLIKARJUN) ಆಗಮಿಸುತ್ತಿದ್ದಂತೆ ಕಾಂಗ್ರೆಸ್ (CONGRESS) ಕಾರ್ಯಕರ್ತರು, ಮುಖಂಡರು ಹೆಚ್ಚಿನ ಜನಸಂಖ್ಯೆಯಲ್ಲಿ ಜಮಾಯಿಸಿದರು. ಕಾರಿನಿಂದ ಇಳಿಯುತ್ತಿದ್ದಂತೆ ಮಲ್ಲಿಕಾರ್ಜುನ್ (MALLIKARJUN)ರ ಪರ ಘೋಷಣೆಗಳು ಕೇಳಿ ಬಂದವು. ಪಟಾಕಿ ಸಿಡಿಸಲಾಯಿತು. ಮಲ್ಲಿಕಾರ್ಜುನ್ ಅವರು ದೇವಸ್ಥಾನಕ್ಕೆ ಬರುತ್ತಿದ್ದಂತೆ ನೂಕು ನುಗ್ಗಲು ಆಯಿತು. ಕೆಲವರು ಹೂವಿನ ಹಾರ ಹಾಕಿ ಬರಮಾಡಿಕೊಂಡರು.
ದೇವರಲ್ಲಿ ಗೆಲುವಿಗೆ ಪ್ರಾರ್ಥಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪ್ರಚಾರಕ್ಕೆ ಹೋಗುವಾಗಲೂ ಅಭಿಮಾನಿಗಳ ತಳ್ಳಾಟ, ನೂಕಾಟ ಮುಂದುವರಿಯಿತು. ನೂರಾರು ಮಹಿಳೆಯರು ಸಹ ಮಲ್ಲಿಕಾರ್ಜುನ್ ಅವರಿಗೆ ಸ್ವಾಗತ ಕೋರಿದರು.
ಈ ವೇಳೆ ಮಾಧ್ಯಮದವರ ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ದಾವಣಗೆರೆ ಉತ್ತರದಿಂದ ಸಿಎಂ ಆದರೂ ಬರಲಿ, ಪ್ರಧಾನಿ ನರೇಂದ್ರ ಮೋದಿ (NARENDRA MODI) ಬೇಕಾದರೂ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಯಾರೂ ಬೇಕಾದರೂ ನನ್ನ ವಿರುದ್ಧ ಸ್ಪರ್ಧಿಸಲಿ, ಬೇಡ ಅಂದಿಲ್ಲ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಶೇಕಡಾ 40ರಷ್ಟು ಪರ್ಸಂಟೈಸ್ ಸರ್ಕಾರ ಎಂದು ಮಾಧ್ಯಮಗಳಲ್ಲಿ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಯಾವ ಅಭಿವೃದ್ಧಿ ಆಗಿದೆ ಎಂಬುದನ್ನು ಹೇಳಲಿ. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಎಲ್ಲೆಡೆ ಪಕ್ಷದ ಪರ ಅಲೆ ಈಗಾಗಲೇ ಎದ್ದಿದೆ. ನಮಗೂ ಹುಮ್ಮಸ್ಸು ತಂದಿದೆ ಎಂದು ತಿಳಿಸಿದರು.
ಸ್ಪರ್ಧೆ ಮಾಡುವಂತೆ ಜನರೇ ಈ ಬಾರಿ ಒತ್ತಾಯ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಜನರ ಒಲವು ಇದೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು. ಮಲ್ಲಿಕಾರ್ಜುನ್ ರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ
ಘಟನೆಯೂ ನಡೆಯಿತು. ದೇವಸ್ಥಾನದ ಒಳಗಡೆಯೂ ನೂರಾರು ಮಂದಿ ಆಗಮಿಸಿದ್ದು, ನೂಕು ನುಗ್ಗಲು ಉಂಟಾಗಿತ್ತು.