SUDDIKSHANA KANNADA NEWS/ DAVANAGERE/ 03-04-2023
ದಾವಣಗೆರೆ: ನಾಲ್ಕು ಬಾರಿ ಸಿದ್ದೇಶ್ವರ (SIDDESHWARA) ಲೋಕಸಭಾ ಸದಸ್ಯರು. ಎರಡು ಬಾರಿ ಅವರಪ್ಪ ಎಂಪಿ. ಆರು ಸಲ ಆ ಕುಟುಂಬದವರೇ ಜಿಲ್ಲೆಯಲ್ಲಿ ಎಂಪಿ ಆಗಿದ್ದಾರೆ. ಹಾಗಾಗಿ, ಸಿದ್ದೇಶ್ವರ, ಅವರ ಪುತ್ರ ಟಫ್ ಕ್ಯಾಂಡಿಟೇಟ್ ಆಗಬಹುದು ಎಂದು ಬಿಜೆಪಿ (BJP) ಹಿರಿಯ ಶಾಸಕ ಎಸ್. ಎ. ರವೀಂದ್ರನಾಥ್ (S. A. RAVINDRANATH) ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದೇಶ್ವರ (SIDDESHWARA) ಅವರ ಮನೆತನದವರೇ ಆರು ಬಾರಿ ಎಂಪಿ ಆಗಿದ್ದಾರೆ, ಗೆದ್ದಿದ್ದಾರೆ ಅಲ್ವಾ. ಹಾಗಾಗಿ ಎದುರಾಳಿಗಳಿಗೆ ಕಠಿಣ ಸ್ಪರ್ಧೆಯನ್ನೊಡ್ಡಬಹುದು ಎಂದು ಹೇಳಿದರು.
ನಾನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿದ್ದಾಗ ಸಿದ್ದೇಶ್ವರ ಅಥವಾ ಅವರ ಪುತ್ರನಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಆಗಿಲ್ಲ. ಉತ್ತರ ಕ್ಷೇತ್ರದ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದರು.
ಸಂಸದ ಜಿ. ಎಂ. ಸಿದ್ದೇಶ್ವರ (G. M. SIDDESHWARA) ಅವರೇ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣಕ್ಕಾಗಿ ಈ ಬಾರಿ ಟಿಕೆಟ್ ನಿರಾಕರಿಸಿಲ್ಲ. ಈ ನಿಯಮವನ್ನು ಈ ಚುನಾವಣೆಗೆ ತೆಗೆದು ಹಾಕಲಾಗಿದೆ. ಮದುವೆ ಆಗಬೇಕೆನ್ನುವ ಹುಡುಗನಿಗೆ ಹುಡುಗಿ ನೋಡಬೇಕು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಆಕಾಂಕ್ಷಿಗಳ ಪ್ರಯತ್ನದ ಕುರಿತಂತೆ ಪ್ರತಿಕ್ರಿಯಿಸಿದರು.