ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

S. A. Ravindranath: ಮಾರ್ಚ್ ನಲ್ಲೇ 966 ನಿವೇಶನಗಳ ಹಕ್ಕುಪತ್ರಗಳು ರೆಡಿ, ಸಚಿವರು, ಅಧಿಕಾರಿಗಳಿಗೆ ಫಲಾನುಭವಿಗಳಿಗೆ ಪತ್ರ ಕೊಡಲು ಮನವಿ ಮಾಡಿದ್ದೇನೆ: ಎಸ್. ಎ. ರವೀಂದ್ರನಾಥ್

On: July 12, 2023 2:46 PM
Follow Us:
S. A. Ravindranath
---Advertisement---

SUDDIKSHANA KANNADA NEWS/ DAVANAGERE/ DATE:12-07-2023

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಎಕರೆ ಪ್ರದೇಶದಲ್ಲಿ ಸೂಕ್ತ ಫಲಾನುಭವಿಗಳನ್ನು ಗುರುತಿಸಿ 966 ಹಕ್ಕುಪತ್ರಗಳು ಕಳೆದ ಮಾರ್ಚ್ ತಿಂಗಳಿನಲ್ಲಿಯೇ ರೆಡಿ ಮಾಡಲಾಗಿದೆ. ಅವುಗಳನ್ನು ಕೊಡಬೇಕಷ್ಟೇ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಅಧಿಕಾರಿಗಳು ತಡ ಮಾಡಿದ ಕಾರಣಕ್ಕೆ ಹಕ್ಕುಪತ್ರ ವಿತರಣೆ ವಿಳಂಬವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್. ಎ. ರವೀಂದ್ರನಾಥ್ (S. A. Ravindranath) ಹೇಳಿದ್ದಾರೆ.

ಶಿರಮಗೊಂಡನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 966 ಫಲಾನುಭವಿಗಳನ್ನು ಗುರುತಿಸಿ ನಿವೇಶನಕ್ಕೆ ಹಕ್ಕು ಪತ್ರಗಳು ಸಿದ್ಧವಾಗಿವೆ. ಆದ್ರೆ, ಯಾರಿಗೂ ಹಕ್ಕು ಪತ್ರ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು,
ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಹಕ್ಕುಪತ್ರ ನೀಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಹಕ್ಕುಪತ್ರ ನೀಡಬೇಕಾಗಿದೆ ಎಂದು ಹೇಳಿದರು.

ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಬೇಕಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 966 ಹಕ್ಕುಪತ್ರಗಳು ಸಿದ್ಧಗೊಂಡು ಮೂರ್ನಾಲ್ಕು ತಿಂಗಳಾಗಿದ್ದು, ಅಧಿಕಾರಿಗಳ ವಿಳಂಬದಿಂದ ತಡವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: 

Amarnath Temple: ಕುದುರೆ ಮೇಲೂ ಹೋಗ್ಲಿಲ್ಲ, ನಡೆದುಕೊಂಡು ಹೋಗ್ಲಿಲ್ಲ.. ಬದುಕಿ ಬರಲು ಕಾರಣವಾದದ್ದು ಏನು…? ದಾವಣಗೆರೆ ಮಹಿಳೆಯರು ಬಿಚ್ಚಿಟ್ಟ ರೋಚಕ ಕಥೆ..!

 

ಯಾರೂ ಸಹ ದುಡ್ಡು ಪಡೆದು ಸೈಟ್ ಕೊಡಿಸುತ್ತೇವೆ ಎಂದು ಹೇಳಿಲ್ಲ. ಈ ರೀತಿಯಲ್ಲಿ ಯಾವುದೇ ಲೋಪಗಳೂ ಆಗಿಲ್ಲ. ಅರ್ಹರಿಗೆ ನಿವೇಶನ ನೀಡಲು ಪಟ್ಟಿ ಸಿದ್ಧಪಡಿಸಲಾಗಿದೆ. ದುಡ್ಡು ಪಡೆದಿದ್ದಾರೆ ಎಂಬುದು ಸುಳ್ಳು. ದುಡ್ಡಿದ್ದವರು ದುಡ್ಡಿನ ಬಗ್ಗೆ ಚಿಂತೆ ಮಾಡುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ. ಹಕ್ಕುಪತ್ರ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು. ನಾವಂತೂ ರೂಪಾಯಿ ನೀಡಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಟಾಂಗ್ ನೀಡಿದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಆಯ್ಕೆ ಇನ್ನೂ ಆಗದಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಣ್ಣ ಪುಟ್ಟ ದೋಷ ಸರಿಪಡಿಸಿಕೊಂಡು ಎಲ್ಲವನ್ನೂ ರಾಜ್ಯ ನಾಯಕರು ಹಾಗೂ
ಕೇಂದ್ರದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ಬಿಜೆಪಿ ಬುದ್ಧಿವಂತರ ಪಕ್ಷ. ಈ ಪಕ್ಷದಲ್ಲಿ ಇದ್ದದ್ದೇ. ಈ ಬಗ್ಗೆ ನಾನ್ಯಾಕೆ ಮಾತನಾಡಲಿ. ನನಗೇನೂ ಜವಾಬ್ದಾರಿ ವಹಿಸಿದ್ದಾರೋ ಆ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು.

ಕೇಂದ್ರ ಸರ್ಕಾರದ ಸಾಧನೆಗಳುಳ್ಳ ಕರಪತ್ರಗಳನ್ನು ಮನೆ ಮನೆಗೆ ಹಂಚಬೇಕೆಂಬ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಕರಪತ್ರಗಳನ್ನು ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ನಾನು ಪಕ್ಷ ಏನು ಹೇಳುತ್ತದೆಯೋ
ಆ ಕೆಲಸ ಮಾಡುವ ಕಾರ್ಯಕರ್ತನಷ್ಟೇ ಎಂದು ಎಸ್. ಎ. ರವೀಂದ್ರನಾಥ್ (S. A. Ravindranath) ತಿಳಿಸಿದರು.

S. A. Ravindranath Statement, S. A. Ravindranath React,  S. A. Ravindranath Speak, S. A. Ravindranath Talk, S. A. Ravindranath Davanagere News, S. A. Ravindranath, Davanagere Update, S. A. Ravindranath Suddi

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment