ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Regional Transport Office:26 ಬೈಕ್ ಗಳ ವಶ: ಆರ್ ಟಿಒ ಕಚೇರಿಯ ನಾಲ್ವರು ಸಹಾಯಕ ಸಿಬ್ಬಂದಿ ಸೇರಿ ಐವರ ಬಂಧಿಸಿದ್ಯಾಕೆ…?

On: August 1, 2023 4:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-08-2023

ದಾವಣಗೆರೆ: ಬೈಕ್ ಕಳವು ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಾಗ ವಿವಿಧೆಡೆ ಕಳ್ಳತನ ಮಾಡಿದ್ದ 26 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ, ಬೈಕ್ ಗಳ ವಾರಸುದಾರರ ದಾಖಲೆ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕೆಂದರೆ ದಾಖಲೆ ಪರಿಶೀಲಿಸಿದಾಗ ಕೆಲ ಬೈಕ್ ಗಳು ನಕಲಿ ಮಾಲೀಕತ್ವ ಇರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರ್ ಟಿ ಒ ಕಚೇರಿ (Regional Transport Office)ಯ ನಾಲ್ವರು ಸಹಾಯಕ ಸಿಬ್ಬಂದಿ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

Police: ದಾವಣಗೆರೆ ಎಸ್ಪಿ ವರ್ಗಾವಣೆ ಬಗ್ಗೆ ಎಸ್ಎಸ್ ಮಲ್ಲಿಕಾರ್ಜುನ್ ಏನಂದ್ರು…?

ಆರ್.ಟಿ.ಓ ಕಚೇರಿ(Regional Transport Office)ಯ ಸಹಾಯಕ ಸಿಬ್ಬಂದಿ ಜಗದೀಶ, ಪ್ರದೀಪ, ಶಶಿಧರ, ವಸಂತ ಕುಮಾರ ಹಾಗೂ ಆರ್‌ಟಿಓ ಏಜೆಂಟ್ ರಸೂಲ್‌ ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ:

ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಆಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗೆ ಬಂದಿದ್ದರು. ಈ ವೇಳೆ ಬೈಕ್ ಸಿಕ್ಕಿದ್ದು, ನಕಲಿ ಮಾಲೀಕತ್ವದ ಕುರಿತಂತೆ ಅನುಮಾನ ಬಂದ ಕಾರಣ ಮೂಲ ಬೈಕ್ ವಾರಸುದಾರರ ಬಗ್ಗೆ
ತಿಳಿದುಕೊಂಡು ಈ ಬಗ್ಗೆ ಪರಿಶೀಲನೆ ನಡೆಸಲಾಯಿತು. ಆರೋಪಿ ಸಿದ್ದೇಶ ಎಂಬಾತ ಮೋಟಾರ್ ಬೈಕ್‌ ಅನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಪ್ರಕಾಶ್, ಮಹಮದ್ ಯಾಸೀರ್ ಅರಾಫತ್, ಕಲೀಂ ಅಲಿಯಾಸ್ ಕಲಾಮುದ್ದೀನ್ ಜೊತೆ ಸೇರಿಕೊಂಡು ದಾವಣಗೆರೆ ಆರ್.ಟಿ.ಓ ಕಛೇರಿಯಲ್ಲಿ ಆರ್.ಟಿ.ಓ (Regional Transport Office) ಅಧಿಕಾರಿಗಳೊಂದಿಗೆ ಶಾಮೀಲಾಗಿ ಆರ್.ಸಿ. ಮಾಲೀಕತ್ವವನ್ನು ಬದಲಾವಣೆ ಮಾಡಿದ್ದು ಬೆಳಕಿಗೆ ಬಂದಿದೆ.

ಸಿದ್ದೇಶ್, ಪ್ರಕಾಶ, ಮಹಮದ್ ಯಾಸೀರ್ ಅರಾಫತ್, ಕಲೀಂ ಅಲಿಯಾಸ್ ಕಲಾಮುದ್ದೀನ್ ಜೊತೆಗೆ ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ದಾವಣಗೆರೆ ಆರ್.ಟಿ.ಓ ಕಛೇರಿಯಲ್ಲಿ ಆರ್.ಟಿ.ಓ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಳ್ಳು ಆರ್.ಸಿ ದಾಖಲಾತಿಯನ್ನು ಸೃಷ್ಠಿಸಿ ಆರ್.ಸಿ ಮಾಲೀಕತ್ವವನ್ನು ಬದಲಾವಣೆ ಮಾಡಿ ಬೈಕ್ ಅನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.

ಬೈಕ್‌ಗಳ ಮೂಲ ವಾರಾಸುದಾರರಿಂದ ದೂರು ಪಡೆದು ಬಸವನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ದಾವಣಗೆರೆ ಸಿಇಎನ್ ಠಾಣೆಗೆ ವಹಿಸಲಾಗಿತ್ತು.ಸಿಇಎನ್ ಪೊಲಿಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ತಂಡ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

RTO NEWS, RTO SUDDI UPDATE, RTO NEWS, RTO NEWS UPDATE, DAVANAGERE RTO, RTO EMPLOY ARREST

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment