SUDDIKSHANA KANNADA NEWS/ DAVANAGERE/ DATE:28_07_2025
ದಾವಣಗೆರೆ: ಪ್ರಸಕ್ತ ಸಾಲಿನ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿ ಹೊಸದಾಗಿ ತೆಂಗು ಬೆಳೆಯನ್ನು ನಾಟಿ ಮಾಡಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Read Also This Story: ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2025: 2500 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ರೂ. 28000/- ಪ್ರತಿ ಹೆಕ್ಟೇರ್‍ಗೆ ವರ್ಷಕ್ಕೆ ಒಟ್ಟಾರೆ ರೂ 56000 ಗಳ ಸಹಾಯಧನವನ್ನು ನೀಡಲಾಗುವುದು. ತೆಂಗು ಬೆಳೆಯನ್ನು ಹೊಸ ಪ್ರದೇಶ ನಾಟಿ ಮಾಡಿದಲ್ಲಿ ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಬದುಗಳ ಅಂಚಿನಲಿ ನಾಟಿಗೆ ಪರಿಗಣಿಸಲಾಗುವುದಿಲ್ಲ. ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜೆರಾಕ್ಸ್, ಅಧಿಕೃತ ಸಸ್ಯಾಗಾರಗಳಿಂದ ಖರೀದಿಸಿದ ಸಸಿ ಖರೀದಿ ಬಿಲ್ಲು ಹಾಗೂ ಅರ್ಜಿಯೊಂದಿಗೆ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ತಮ್ಮ ಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.