ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ಸಿಹಿ ಸುದ್ದಿ.
ದೇಶಾದ್ಯಂತ ಉದ್ಯೋಗದ ಹುಡುಕಾಟದಲ್ಲಿರುವ ಐಟಿಐ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ಒಟ್ಟು 6,557 ಟೆಕ್ನಿಷಿಯನ್ (Technician Grade-I Signal & Grade-III) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಅಧಿಕೃತ ಪ್ರಕಟಣೆ (CEN 02/2026) ಬಿಡುಗಡೆಯಾಗಿದೆ.
ಪ್ರಮುಖ ದಿನಾಂಕಗಳು:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 29, 2026 (ರಾತ್ರಿ 11:59 ರವರೆಗೆ) ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಜುಲೈ 31 ರವರೆಗೆ ಕಾಲಾವಕಾಶ ನೀಡಲಾಗಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:
ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ (323 ಹುದ್ದೆಗಳು): ಬಿ.ಎಸ್ಸಿ (ಫಿಸಿಕ್ಸ್/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಐಟಿ) ಅಥವಾ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ/ಪದವಿ ಪಡೆದಿರಬೇಕು. (ವೇತನ ಶ್ರೇಣಿ: ₹29,200, ವಯೋಮಿತಿ: 18-33 ವರ್ಷ)
ಟೆಕ್ನಿಷಿಯನ್ ಗ್ರೇಡ್-III (6,234 ಹುದ್ದೆಗಳು): ಎಸ್‌ಎಸ್‌ಎಲ್‌ಸಿ ಜೊತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ (ITI) ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು. (ವೇತನ ಶ್ರೇಣಿ: ₹19,900, ವಯೋಮಿತಿ: 18-30 ವರ್ಷ)
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆಗಳ ಪರಿಶೀಲನೆ (DV) ಮತ್ತು ವೈದ್ಯಕೀಯ ತಪಾಸಣೆಯ (Medical Exam) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ 1/3 ರಷ್ಟು ನೆಗೆಟಿವ್ ಮಾರ್ಕಿಂಗ್ ಇರಲಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹500 (CBT ಪರೀಕ್ಷೆಗೆ ಹಾಜರಾದ ನಂತರ ₹400 ರೀಫಂಡ್ ಆಗುತ್ತದೆ). ಎಸ್‌ಸಿ, ಎಸ್‌ಟಿ, ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ₹250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ (ಪರೀಕ್ಷೆಗೆ ಹಾಜರಾದ ನಂತರ ₹250 ಸಂಪೂರ್ಣ ರೀಫಂಡ್ ಆಗುತ್ತದೆ).
ಆಸಕ್ತರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ rrb.indianrailways.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- Apply Online RRB Technician
- ITI Railway Jobs
- Railway Jobs 2026
- Railway Technician Syllabus
- RRB CEN 02/2026 Notification
- RRB Official Website
- RRB Technician Recruitment 2026
- ಆರ್ಆರ್ಬಿ ಅಧಿಸೂಚನೆ 2026
- ಆರ್ಆರ್ಬಿ ಟೆಕ್ನಿಷಿಯನ್ ನೇಮಕಾತಿ
- ಐಟಿಐ ಉದ್ಯೋಗಗಳು
- ಕೇಂದ್ರ ಸರ್ಕಾರಿ ಕೆಲಸಗಳು
- ಡಿಪ್ಲೊಮಾ ರೈಲ್ವೆ ಕೆಲಸ
- ರೈಲ್ವೆ ಉದ್ಯೋಗಗಳು 2026
- ರೈಲ್ವೆ ಟೆಕ್ನಿಷಿಯನ್ ಅರ್ಜಿ 2026





Leave a comment