SUDDIKSHANA KANNADA NEWS/ DAVANAGERE/ DATE:25_07_2025
ಬೆಂಗಳೂರು, ವೈಟ್ ಫೀಲ್ದ್: ಕಳೆದ 7 ವರ್ಷಗಳಿಂದ ಅಸಾಮಾನ್ಯ ಗರ್ಭಾಶಯ ರಕ್ತಸ್ರಾವ ಮತ್ತು ಪೆಲ್ವಿಕ್ ನೋವಿನಿಂದ ಬಳಲುತ್ತಿದ್ದ ಆಂಧ್ರ ಮೂಲದ 42 ವರ್ಷದ ಮಹಿಳೆಗೆ, ಮೆಡಿಕವರ್ ಆಸ್ಪತ್ರೆ ವೈಟ್‌ಫೀಲ್ಡ್‌ನ ಹಿರಿಯ ಸ್ತ್ರೀರೋಗ ತಜ್ಞೆ ಡಾ. ಸಭಿಹಾ ಅಂಜುಮ್ ಅವರಿಂದ ನಿಟ್ಟುಸಿರು ಬಿಡುವಂತಾಗಿದೆ.
ಈ ಸುದ್ದಿಯನ್ನೂ ಓದಿ: 610 ಕ್ರೆಡಿಟ್ ಸ್ಕೋರ್ ವೈಯಕ್ತಿಕ ಸಾಲ ಅನುಮೋದನೆಯ ಮೇಲೆ ಹೇಗೆ ಪರಿಣಾಮ ಬೀರುತ್ತೆ: ಸಾಲಗಾರರು ಏನು ತಿಳಿದುಕೊಳ್ಳಬೇಕು?
ಈಕೆ ಎರಡು ಬಾರಿ ಸೀಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗಾಗಲೇ ಎರಡು ಬಾರಿ D&C ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು, ಆದರೂ ಯಾವುದೇ ಪರಿಹಾರ ದೊರಕಿಲ್ಲ. ಪರಿಸ್ಥಿತಿ ಹಂತ ಹಂತವಾಗಿ ಗಂಭೀರವಾಗಿ, ಗರ್ಭಾಶಯದ ಕ್ಯಾನ್ಸರ್ ಶಂಕೆ ಏರಿತು.
ಮೆಡಿಕವರ್‌ನಲ್ಲಿ ಹೆಚ್ಚಿನ ತಪಾಸಣೆಯ ಬಳಿಕ, ಸೀಸೇರಿಯನ್‌ನಿಂದ ಉಂಟಾದ ಗಟ್ಟಿಯಾದ ಅಂಟಿಕೆಗಳಿಂದ ಗರ್ಭಾಶಯ ಸುತ್ತಲಿನ ಅಂಗಗಳಿಗೆ ಬೆಸೆದುಕೊಂಡಿರುವುದು ತಿಳಿಯಿತು. ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಇದು ಅಪಾಯಕಾರಿಯಾಗಿತ್ತು.
ಡಾ. ಸಭಿಹಾ ಅವರು ರೊಬೋಟಿಕ್ ತಂತ್ರಜ್ಞಾನ ಬಳಸಿ ರೊಬೋಟಿಕ್ ಹಿಸ್ಟರೆಕ್ಟಮಿ (ಗರ್ಭಾಶಯ ತೆಗೆದುಹಾಕುವ ಶಸ್ತ್ರಚಿಕಿತ್ಸೆ) ನಡೆಸಿದರು. ಶಸ್ತ್ರಚಿಕಿತ್ಸೆಯಲ್ಲಿ ಅವರು ಅಂಟಿಕೆಗಳನ್ನು ಒಂದೊಂದಾಗಿ ಬೇರ್ಪಡಿಸಿ, ಗರ್ಭಾಶಯವನ್ನು ಸುರಕ್ಷಿತವಾಗಿ ತೆಗೆದುಹಾಕಿದರು.
“ಇಂತಹ ಗಂಭೀರ ಪ್ರಕರಣಗಳಲ್ಲಿ ರೊಬೋಟಿಕ್ ತಂತ್ರಜ್ಞಾನ ನಿಖರ ದೃಷ್ಟಿ ಮತ್ತು ನಿಖರ ನಿಯಂತ್ರಣ ಒದಗಿಸುತ್ತದೆ. ಇದು ರಕ್ತಸ್ರಾವ ಕಡಿಮೆ ಮಾಡುತ್ತದೆ, ನೋವು ಕಡಿಮೆ ಆಗುತ್ತದೆ ಮತ್ತು ಗುಣಮುಖತೆ ವೇಗವಾಗಿ ನಡೆಯುತ್ತದೆ,” ಎನ್ನುತ್ತಾರೆ ಡಾ. ಸಭಿಹಾ.
ಈ ಶಸ್ತ್ರಚಿಕಿತ್ಸೆ ನಂತರ ರೋಗಿಗೆ ಯಾವುದೇ ತೊಂದರೆ ಆಗದೆ, 24 ಗಂಟೆಗಳಲ್ಲಿ ಡಿಸ್ಚಾರ್ಜ್ ಮಾಡಲಾಯಿತು.ಈ ಪ್ರಕರಣವು, ಹಳೆಯ ಸೀಸೇರಿಯನ್ ಮಾಡಿದ ಮಹಿಳೆಯರಲ್ಲಿ, ಗರ್ಭಾಶಯ ಸಂಬಂಧಿತ ಸಮಸ್ಯೆಗಳಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.