SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ದಾವಣಗೆರೆಯ ಮಟಿಕಲ್ ನಲ್ಲಿ ಆಕ್ಷೇಪಾರ್ಹ ಪೋಸ್ಟರ್ ಅಳವಡಿಕೆ ಸಂಬಂಧ ಗೊಂದಲ ಉಂಟಾದ ಕಾರಣ ಆರ್ ಎಂ ಸಿ ಯಾರ್ಡ್ ಪಿಎಸ್ಐ ಸೇರಿ ಮೂವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.
READ ALSO THIS STORY: ನೂರಾರು ಕೇಸ್ ಹಾಕಿ ತಾಕತ್ತಿದ್ದರೆ ಬಂಧಿಸಿ: ಎಫ್ಐಆರ್ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಂ. ಪಿ. ರೇಣುಕಾಚಾರ್ಯ ಸವಾಲ್!
ಆರ್ ಎಂ ಸಿ ಯಾರ್ಡ್ ಪಿಎಸ್ಐ ಸಚಿನ್ ಬಿರಾದಾರ್, ವತ್ಸಲಾ ಸೇರಿದಂತೆ ಮೂವರು ಪೊಲೀಸರ ತಲೆದಂಡವಾಗಿದೆ. ಆಗಸ್ಟ್ 28ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದಡಿ ಸಸ್ಪೆಂಡ್ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಡಿವೈಎಸ್ಪಿ, ಸಿಪಿಐಗೆ ಮೆಮೊ ಕೊಡಲಾಗಿದೆ. ಮಟಿಕಲ್ ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಸಮೀಪ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ವಧೆ ಮಾಡಿದ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದಕ್ಕೆ ಕೆಲ ಮುಸ್ಲಿಂ ಸಮುದಾಯದವರು
ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಫ್ಲೆಕ್ಸ್ ತೆರವಿಗೆ ಬಂದಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಸಾವಿರಾರು ಹಿಂದೂ ಸಮಾಜದ ಯುವಕರು, ಆರ್ ಎಸ್ ಎಸ್ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಮುಖಂಡರು ಸೇರಿದ್ದರು.
ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆದು ತಳ್ಳಾಟ, ನೂಕಾಟವೂ ಆಗಿತ್ತು. ಸೂಕ್ಷ್ಮ ವಿಚಾರ ಸರಿಯಾಗಿ ನಿರ್ವಹಿಸದ ಹಾಗೂ ಕರ್ತವ್ಯ ಲೋಪ ಆರೋಪದಡಿ ಸಸ್ಪೆಂಡ್ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಆಗಸ್ಟ್ 28ರಂದು ಮಟಿಕಲ್ ನಲ್ಲಿ ಉದ್ವಿಗ್ವ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಮಾಜದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟಿಪ್ಪು ಸುಲ್ತಾನ್ ಸೇರಿದಂತೆ ಮುಸ್ಲಿಂ ಸಮುದಾಯದವರ ಫೋಟೋ ಹಾಕಲು ಯಾವುದೇ ನಿರ್ಬಂಧ ಹೇರುವುದಿಲ್ಲ. ಹಿಂದೂಗಳ ಹಬ್ಬಕ್ಕೆ ಮಾತ್ರ ಯಾಕೆ ಇಷ್ಟೊಂದು ಕಠಿಣ ನಿರ್ಬಂಧ ಎಂಬ ಪ್ರಶ್ನೆ ಮಾಡಿದ್ದರು.
ಘಟನೆ ಹಿನ್ನೆಲೆ ಏನು?
ಧರ್ಮ ರಕ್ಷಣೆಗೆ ಸದಾ ಎಚ್ಚರಿಕೆಯಿಂದಿರಿ. ಶಕ್ತಿಯಲ್ಲ, ಯುಕ್ತಿಯಿಂದ ಹೋರಾಡಿ ಅಫ್ಜಲ್ ಖಾನ್ ವಧೆ ಇದು ಕಲಿಸುತ್ತದೆ. ಮಹಾರಾಜರಂತೆ ರಾಷ್ಟ್ರರಕ್ಷಣೆಗೆ ಸಿದ್ಧರಾಗಿ ಎಂಬ ಪೋಸ್ಟರ್ ತೆರವಿಗೆ ಪೊಲೀಸರು ಬಂದಿದ್ದು ಹಿಂದೂ ಸಮಾಜದವರ
ಸಿಟ್ಟು ಕಟ್ಟೆಯೊಡೆಯುವಂತೆ ಮಾಡಿತ್ತು. ಯಾವುದೇ ಕಾರಣಕ್ಕೂ ಈ ಫ್ಲೆಕ್ಸ್ ತೆರವುಗೊಳಿಸುವುದಿಲ್ಲ ಎಂದು ಹಠ ಹಿಡಿದಿದ್ದರು. ಆದ್ರೆ, ಪೊಲೀಸರು ಕೋಮು ಪ್ರಚೋದನೆ ಕಾರಣ ಈ ಫ್ಲೆಕ್ಸ್ ತೆರವುಗೊಳಿಸಲಾಗುವುದು ಎಂದು ಹೇಳಿದಾಗ ಗಲಾಟೆ ತಾರಕಕ್ಕೇರಿತ್ತು. ಆ ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ನಿನ್ನೆ ರಾತ್ರಿ ವಿದ್ಯಾನಗರ ಪೊಲೀಸರು ಕೆಟಿಜೆ ನಗರದಲ್ಲಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆ ಜಾಮೀನು ನೀಡಿ ಕಳುಹಿಸಿಕೊಟ್ಟಿದ್ದರು. ಇದಾದ ಬೆಳವಣಿಗೆ ನಡುವೆ ಮಟಿಕಲ್ ನಲ್ಲಿ ಇಷ್ಟೊಂದು ಗಲಾಟೆ, ಗೊಂದಲ ಆಗಲು ಪೊಲೀಸರ ಕರ್ತವ್ಯ ಲೋಪ ಕಾರಣ ಎಂದು ಹೇಳಲಾಗಿತ್ತು. ಈಗ ಸಸ್ಪೆಂಡ್ ಮಾಡಲಾಗಿದ್ದು, ಪಿಎಸ್ಐ ಸಚಿನ್, ವತ್ಸಲಾ ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.
ಮಟ್ಟಿಕಲ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪ್ರಯುಕ್ತ ಸ್ಥಳದಲ್ಲಿ ಅಳವಡಿಸಿದ್ದ ಆಕ್ಷೇಪಾರ್ಹ ಚಿತ್ರವೊಂದನ್ನು ತೆರವುಗೊಳಿಸುವಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಚನೆ ನೀಡುತ್ತಿದ್ದಂತೆ ಹಿಂದೂ ಸಂಘಟನೆಗಳ
ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗುರುವಾರ ರಾತ್ರಿ ವಾಗ್ವಾದ, ತಳ್ಳಾಟಕ್ಕೂ ಕಾರಣವಾಗಿದೆ. ಸ್ಥಳದಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡಂದಂತಾಗಿತ್ತು. ಸದ್ಯ ಪರಿಸ್ಥಿತಿ
ಶಾಂತವಾಗಿದೆ.
ನಗರದ ಮಟಿಕಲ್ ನ ವೀರ ಸಾವರ್ಕರ್ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಸಮೀಪದ ರಸ್ತೆಯಲ್ಲಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಪೋಸ್ಟರ್ ಅಳವಡಿಸಿದ್ದಾರೆ. ಇದರಲ್ಲಿ ವೀರ್ ಸಾವರ್ಕರ್ ಸೇರಿದಂತೆ
ಹಲವು ಮಹನೀಯರ ಫೋಟೋಗಳು ರಾರಾಜಿಸುತ್ತಿವೆ. ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ವಿವಾದದ ಪೋಸ್ಟರ್ ವಿವಾದ ಭುಗಿಲೇಳುವಂತೆ ಮಾಡಿದೆ.
ಈ ಪೋಸ್ಟರ್ ಕಂಡ ಅನ್ಯ ಧರ್ಮದ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಪೋಸ್ಟರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಇದು ಎರಡು ಕೋಮುಗಳ ನಡುವೆ ವೈಷಮ್ಯ ಉಂಟು ಮಾಡುತ್ತದೆ. ಹಾಗಾಗಿ, ತೆರವುಗೊಳಿಸಿ
ಎಂದು ಮನವಿ ಮಾಡಿದ್ದರು. ರಾತ್ರಿ 10.30ಕ್ಕೆ ಆಕ್ಷೇಪಾರ್ಹ ಚಿತ್ರಗಳನ್ನು ತೆರವುಗೊಳಿಸಲು ಪೊಲೀಸರು ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು, ಆರ್ ಎಸ್ ಎಸ್ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆಯ
ಸತೀಶ್ ಪೂಜಾರಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿದ್ಗರು.