Home ದಾವಣಗೆರೆ ಪ್ರತಿಯೊಂದು ಜಿಲ್ಲೆಯಲ್ಲೂ ಬಡವರಿಗೆ 50,000 ನಿವೇಶನ ಹಂಚಿಕೆ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ದಾವಣಗೆರೆನವದೆಹಲಿಬೆಂಗಳೂರು

ಪ್ರತಿಯೊಂದು ಜಿಲ್ಲೆಯಲ್ಲೂ ಬಡವರಿಗೆ 50,000 ನಿವೇಶನ ಹಂಚಿಕೆ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

Share
ನಿವೇಶನ
Share

ಬೆಂಗಳೂರು: ರಾಜ್ಯದ ಬಡ ಹಾಗೂ ವಸತಿರಹಿತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ 50,000 ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಸೂಕ್ತ ಸರ್ಕಾರಿ ಜಮೀನುಗಳನ್ನು ಗುರುತಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.

ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದ್ದು, ಯಾವುದೇ ರೀತಿಯ ಬೋಗಸ್ ಬಿಲ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬರ ಪರಿಹಾರ:

ಚುನಾವಣೆ: ನವೆಂಬರ್‌ ಒಳಗೆ ಪಂಚಾಯತಿ ಹಾಗೂ ಪಾಲಿಕೆ ಚುನಾವಣೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ವಲಸೆ ತಡೆಯಲು ತಾಲೂಕು ಮಟ್ಟದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ.

ಬರ ಘೋಷಣೆ: 102 ತಾಲೂಕುಗಳ ಪ್ರವಾಸ ಅಧ್ಯಯನದ ನಂತರ ಶೀಘ್ರವೇ ಬರಪೀಡಿತ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು. ತುರ್ತು ಕುಡಿಯುವ ನೀರಿಗಾಗಿ ₹1 ಕೋಟಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಕೆರೆ ಹಾಗೂ ಹಸಿರು ಪ್ರದೇಶ ಅಭಿವೃದ್ಧಿ:

ಹೆಸರಘಟ್ಟ, ಬನ್ನೇರುಘಟ್ಟ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ ಸೇರಿದಂತೆ ಪ್ರಮುಖ ಕೆರೆಗಳ ಒತ್ತುವರಿ ತಡೆದು, ಅಂತರ್ಜಲ ಹೆಚ್ಚಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ.

ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ ಸೇರಿದಂತೆ 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನೂತನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು.

ವಿರೋಧ ಪಕ್ಷದವರಿಗೆ ಬಡವರು, ಬರದ ಬಗ್ಗೆ ಕಾಳಜಿ ಇಲ್ಲ

“ಶಾಸಕರ ಬೇಡಿಕೆಯನ್ನು ಕೇಳಿದ್ದೇನೆ. ತಮ್ಮ ಕ್ಷೇತ್ರದ ಅಭಿವೃದ್ದೀಯೇ ನಮ್ಮ ಗುರಿ. ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಾರದರ್ಶಕ ಆಡಳಿತ, ರಾಜ್ಯದ ಹಿತಕ್ಕೆ ಶ್ರಮಿಸಬೇಕು ಎಂದರು. ವಿರೋಧ ಪಕ್ಷದವರಿಗೆ ಬಡವರು, ಬರದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರಾಜಕೀಯ ಮುಖ್ಯ. ಡಿಸಿಎಂ ಅವರು ಶೀಘ್ರ ಬರಪೀಡಿತ ತಾಲ್ಲೂಕು ಪ್ರಕಟಿಸಲಿದ್ದಾರೆ. ಕುಡಿಯುವ ನೀರಿಗೆ 1 ಕೋಟಿ ರೂ. ನೀಡಲಾಗಿದೆ. 102 ತಾಲ್ಲೂಕು ಪ್ರವಾಸ ಅಧ್ಯಯನ ಮುಕ್ತಾಯವಾದ ನಂತರ ಬರಪೀಡಿತ ಪ್ರದೇಶ ಘೋಷಣೆ ಮಾಡಲಾಗುವುದು” ಎಂದರು.

ಸಾರ್ವಜನಿಕ ಉದ್ದೇಶಕ್ಕೆ ಪಾರ್ಕ್ ಜಾಗ ಬಳಕೆ:

ಪಾರ್ಕ್ ಗಳ ಜಾಗ ಬಳಕೆ ಬಗ್ಗೆ ಮಸೂದೆಗೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ “ರಸ್ತೆ ಅಗಲೀಕರಣ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ರೀತಿ ಭೂಮಿ ಬಳಸುವ ಚಿಂತನೆಯಿದೆ. ನಾವು ಖಾಸಗಿಯವರಿಗೆ ಅವಕಾಶ ನೀಡುವುದಿಲ್ಲ. ಬೇರೆ ಸರ್ಕಾರದಲ್ಲಿ ಅವರು ಅವರ ಪಕ್ಷ ಹಾಗೂ ಕಾರ್ಯಕರ್ತರಿಗೆ ನೀಡಿರುವುದು ಹೇಳಲೇ? ಸದಾಶಿವನಗರದ ನಮ್ಮ ನಿವಾಸದ ಬಳಿ ಪಾರ್ಕ್ ನೋಡಿ” ಎಂದು ತಿರುಗೇಟು ನೀಡಿದರು.

ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, “ನಾಗೇಂದ್ರ ಪಕ್ಷದ ವಿಚಾರದಲ್ಲಿ ಎಂದು ಹಿಂದೇಟು ಹಾಕಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ. ಅವರು ನಿರಪರಾಧಿ. ಆದರೂ ನಾವು ರಾಜೀನಾಮೆ ಪಡೆದಿದ್ದೆವು. ಅವರ ನಾಯಕತ್ವದಲ್ಲಿ ಅಪಾರ ವಿಶ್ವಾಸವಿದೆ” ಎಂದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ದೆಹಲಿ ಭೇಟಿ ವೇಳೆ ಕೇಂದ್ರದ ಸಚಿವರು, ಕಾನೂನು ತಜ್ಞರ ಜೊತೆ ಚರ್ಚೆ. ನಮ್ಮ ಪಕ್ಷದ ಕಚೇರಿ ಶಂಕುಸ್ಥಾಪನೆ ಬಗ್ಗೆ ನಾಯಕರೊಂದಿಗೆ ಚರ್ಚಿಸಲಾಗುವುದು” ಎಂದರು.

ಬೆಂಗಳೂರಿನ ಜಲಮೂಲ, ಹಸಿರು ಪ್ರದೇಶ ಅಭಿವೃದ್ಧಿಗೆ ಒತ್ತು

“ಬೆಂಗಳೂರಿನ ಮುಂದಿನ 25 ವರ್ಷಗಳ ನೀರಿನ ಭದ್ರತೆಗಾಗಿ ಪ್ರಮುಖ ಕೆರೆಗಳ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ಒತ್ತುವರಿ ತಡೆಗೆ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ” ಎಂದು ತಿಳಿಸಿದರು.

“ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಹಾಗೂ ಬೈರಮಂಗಲ ಕೆರೆಗಳನ್ನು ಅಭಿವೃದ್ಧಿಪಡಿಸಿ ಹೊಸ ಜೀವ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕೆರೆಗಳ ಒತ್ತುವರಿ ತಡೆ, ಅಗತ್ಯವಿರುವ ಕಡೆ ಆಳಗೊಳಿಸುವುದು ಹಾಗೂ ಕೊಳಚೆ ನೀರು ಸೇರುವುದನ್ನು ತಡೆಯುವ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ಈ ಕುರಿತು BWSSB, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ BDA ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳಿಗೆ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗುತ್ತದೆ” ಎಂದು ಹೇಳಿದರು.

5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳು

“ಬೆಂಗಳೂರು ನಗರಕ್ಕೆ ಹಸಿರು ಹೊದಿಕೆ ಹೆಚ್ಚಿಸಲು ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವಂತಪುರ, ಮಂಡೂರು ಹಾಗೂ ಜ್ಯೋತಿಪುರ ಸೇರಿದಂತೆ ಒಟ್ಟು 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದರ ಮೂಲಕ ಬೆಂಗಳೂರಿನಲ್ಲಿ ಹಸಿರು ಪ್ರದೇಶ ವಿಸ್ತರಣೆ, ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ನೀರಿನ ಭದ್ರತೆಗೆ ಒತ್ತು ನೀಡಲಾಗುತ್ತಿದೆ” ಎಂದರು.

Share

Leave a comment

Leave a Reply

Your email address will not be published. Required fields are marked *