ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಗ್ನಿವೀರ್ ಯೋಜನೆಯಡಿ ವಿವಿಧ ಹುದ್ದೆಗಳಿಗಾಗಿ ನೇಮಕಾತಿ

On: March 27, 2025 10:38 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-03-2025

ಬಳ್ಳಾರಿ: ಭಾರತೀಯ ಸೇನೆ ವತಿಯಿಂದ ಅಗ್ನಿವೀರ್ ಯೋಜನೆಯಡಿ ಭಾರತೀಯ ಸೇನೆಯಲ್ಲಿ ಸೇರಲು ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, 17 ವರ್ಷ 6 ತಿಂಗಳು ತುಂಬಿದ ಹಾಗೂ 21 ವರ್ಷದೊಳಗಿನ ವಯೋಮಿತಿಯ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಬಹುದು.

8ನೇ ತರಗತಿಯಿಂದ ದ್ವಿತೀಯ ಪಿಯುಸಿ, ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದ್ದು, ನೇಮಕಾತಿ ರ‍್ಯಾಲಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಹುದ್ದೆ:

ಅಗ್ನಿವೀರ್ (ಸಾಮಾನ್ಯ ಕರ್ತವ್ಯ) ಎಲ್ಲಾ ಶಸ್ತ್ರಾಸ್ತ್ರಗಳು, ಅಗ್ನಿವೀರ್ (ಸಾಮಾನ್ಯ ಕರ್ತವ್ಯ) (ಮಹಿಳಾ ಮಿಲಿಟರಿ ಪೊಲೀಸ್), ಅಗ್ನಿವೀರ್ (ತಾಂತ್ರಿಕ) (ಎಲ್ಲಾ ಶಸ್ತ್ರಾಸ್ತ್ರಗಳು), ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್ (ಗುಮಾಸ್ತ)/ಸ್ಟೋರ್ ಕೀಪರ್ ಟೆಕ್ನಿಕಲ್ (ಎಲ್ಲಾ ಆರ್ಮ್ಸ್), ಅಗ್ನಿವೀರ್ ಟ್ರೇಡ್ಸ್ಮ್ಯಾನ್ 10 ನೇ ಪಾಸ್(ಎಲ್ಲಾ ಆರ್ಮ್ಸ್), ಅಗ್ನಿವೀರ್ ಟ್ರೇಡ್ಸ್ಮ್ಯಾನ್ 8 ನೇ ಪಾಸ್(ಎಲ್ಲಾ ಆರ್ಮ್ಸ್).

*ಮಹಿಳಾ ಸದಸ್ಯರಿಗೆ ಮಾತ್ರ: ಸರಂಜಾಮುಗಳಲ್ಲಿ ಮರಣ ಹೊಂದಿದ ರಕ್ಷಣಾ ಸಿಬ್ಬಂದಿಯ ವಿಧವೆಯರಿಗೆ ಸಂಬಂಧಿಸಿದಂತೆ ಗರಿಷ್ಠ ವಯಸ್ಸಿನ ಮಿತಿಯನ್ನು 30 ವರ್ಷಗಳವರೆಗೆ ಸಡಿಲಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-294230 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment