ಬೆಂಗಳೂರು: ಸತತ 9ವರ್ಷಗಳು ಬೇಕಾಯಿತು ” A Film By Upendra” ಎಂಬ ಶೀರ್ಷಿಕೆ ನೋಡಲು, ಕೊನೆಗು ಆ ದಿನ ಉಪ್ಪಿ ಅಭಿಮಾನಿಗಳಿಗೆ ಇಂದು ಒದಗಿಬಂದಿದೆ.
ಉಪೇಂದ್ರ ನಿರ್ದೇಶನ ಮಾಡಿ ನಟಿಸಿರುವ UI ಸಿನಿಮಾ ಇಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳ್, ಮಳಯಾಳಂ, ಹಿಂದಿ ಹೀಗೆ 5 ಭಾಷೆಗಳಲ್ಲಿ ಸುಮಾರು 2000 ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಇಂದು ಬಿಡುಗಡೆಯಾಗಿದೆ.
ಇನ್ನೂ ಬುಕ್ ಮೈ ಶೋ ಆ್ಯಪ್ ನಲ್ಲಿ ಹೊಸ ಇತಿಹಾಸ ಬರೆದ UIಸಿನಿಮಾ ಬುಕ್ಕಿಂಗ್ ನಲ್ಲಿ ದಾಖಲೆಯ ಟಕೆಟ್ ಸೇಲ್ ಆಗುವ ಮೂಲಕ ಭಾರಿ ಸುದ್ದಿ ಮಾಡಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಕೆವಿನ್ ಪ್ರೋಡಕ್ಷನ್ ಡಿಸ್ಟ್ರಿಬ್ಯೂಟರ್ ಸುಪ್ರಿತ್ ಹೇಳಿದರು.
ಮುಖ್ಯ ಭೂಮಿಕೆಯಲ್ಲಿ ಉಪೇಂದ್ರ, ರೇಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದು ಇನ್ನೂ ಈ ಚಿತ್ರಕ್ಕೆ ಜಿ.ಮನೋಹರ್ ಮತ್ತು ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ, ಅಂಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.