SUDDIKSHANA KANNADA NEWS/ DAVANAGERE/ DATE-26-04-2025
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಈ ಬೆಳವಣಿಗೆ ನಡುವೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮೌನ ಮುರಿದಿದ್ದಾರೆ.
ಏಪ್ರಿಲ್ 23ರಂದು ಜಮ್ಮುಕಾಶ್ಮೀರದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದ ಬಳಿಕ ಯಾವುದೇ ಹೇಳಿಕೆ ನೀಡಿರಲಿಲ್ಲ. ಪಾಕಿಸ್ತಾನ ಸಚಿವರು, ವಿದೇಶಾಂಗ ಮಂತ್ರಿಗಳು ಹುಚ್ಚರಂತೆ ಹೇಳಿಕೆ ಕೊಡುತ್ತಲೇ ಇದ್ದಾರೆ.

ಈ ಬೆಳವಣಿಗೆ ನಡುವೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪಾಕ್ ನ ಪಿಎಂ ಶೆಹಬಾಜ್ ಷರೀಫ್ ನಾವು ಯಾವುದೇ ದುಸ್ಸಾಹಸಕ್ಕೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಯುದ್ಧ ಸಾರುವ ಸುಳಿವು ಕೊಟ್ಟಿದ್ದಾರೆ.
ಏಪ್ರಿಲ್ 23 ರಂದು ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಸುಂದರವಾದ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ವಿದೇಶಿ ಪ್ರಜೆಗಳು ಸೇರಿದಂತೆ 26 ಜನರನ್ನು ಗುಂಡಿಕ್ಕಿ ಕೊಂದಾಗ ಭಯಾನಕತೆ ಮತ್ತು ಭೀತಿ
ಉಂಟಾಗಿತ್ತು.