ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

1,000 ರೂ. ನೋಟುಗಳು ವಾಪಸ್ ಚಲಾವಣೆಗೆ ಬರುತ್ತವೆಯೋ ಇಲ್ಲವೋ….? ಆರ್‌ಬಿಐ ಗವರ್ನರ್ ಇದಕ್ಕೆ ಕೊಟ್ಟ ಉತ್ತರ ಏನು..?

On: May 22, 2023 12:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-05-2023

ನವದೆಹಲಿ(NEWDELHI): ಈಗಾಗಲೇ 2 ಸಾವಿರ ರೂಪಾಯಿ ನೋಟ್ ಬ್ಯಾನ್ ಮಾಡಲಾಗಿದೆ. ಈಗ 1000 ರೂಪಾಯಿ ನೋಟುಗಳು ವಾಪಸ್ ಬರುತ್ತವೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

2,000 ನೋಟುಗಳನ್ನು ಹಿಂಪಡೆದ ನಂತರದ ಪರಿಣಾಮವನ್ನು ತಗ್ಗಿಸಲು ₹ 1,000 ಬ್ಯಾಂಕ್ ನೋಟುಗಳನ್ನು ಮರು ಪರಿಚಯಿಸುವ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸ್ಪಷ್ಟಪಡಿಸಿದ್ದು, ಈ ವಿಚಾರ ಸಂಬಂಧ ಬಂದಿರುವ ವರದಿಗಳು ಊಹಾಪೋಹ ಅಷ್ಟೇ ಎಂದು ಹೇಳಿದ್ದಾರೆ.

1,000 ರೂ. ನೋಟುಗಳನ್ನು ಮರು ಪರಿಚಯಿಸುವ ಸಾಧ್ಯತೆ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ “ಅದು ಊಹಾತ್ಮಕವಾಗಿದೆ. ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪವಿಲ್ಲ” ಎಂದು ಶ್ರೀದಾಸ್ ಮತ್ತೊಮ್ಮೆ ಪುನರುಚ್ಚರಿಸಿ
ಸ್ಪಷ್ಟನೆ ನೀಡಿದರು.

ದೊಡ್ಡ ನೋಟು ಅಮಾನ್ಯೀಕರಣದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು “ತ್ವರಿತ ರೀತಿಯಲ್ಲಿ” ಪೂರೈಸಲು ನವೆಂಬರ್ 2016 ರಲ್ಲಿ 2,000 ಬ್ಯಾಂಕ್‌ ನೋಟನ್ನು ಪರಿಚಯಿಸಲಾಯಿತು, ಇದರಲ್ಲಿ ಆ ಸಮಯದಲ್ಲಿ ಚಲಾವಣೆಯಲ್ಲಿದ್ದ
ಎಲ್ಲಾ 500 ಮತ್ತು 1,000 ನೋಟುಗಳನ್ನು ಕಾನೂನು ಪ್ರಕಾರ ಹಿಂಪಡೆಯಲಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ಕ್ರಮದಿಂದಾಗಿ ₹ 10 ಲಕ್ಷ ಕೋಟಿ ರಾತ್ರೋರಾತ್ರಿ ಚಲಾವಣೆಯಿಂದ ಸಮಸ್ಯೆಯಾಗಿತ್ತು ಎಂಬುದನ್ನೂ ಉಲ್ಲೇಖಿಸಿದೆ.

ಸಾಕಷ್ಟು ಪ್ರಮಾಣದಲ್ಲಿ ಇತರ ಮುಖಬೆಲೆಯ ನೋಟುಗಳ ಲಭ್ಯತೆಯೊಂದಿಗೆ, 2018-19 ರಲ್ಲಿ ₹ 2000 ಬ್ಯಾಂಕ್ ನೋಟುಗಳ ಮುದ್ರಣವನ್ನು ನಿಲ್ಲಿಸಲಾಯಿತು ಎಂದು ಆರ್‌ಬಿಐ ತಿಳಿಸಿದೆ.

ಅಚ್ಚರಿಯ ನಿರ್ಧಾರದ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ದಾಸ್, ಯಾರೂ ತಮ್ಮ 2,000 ನೋಟುಗಳನ್ನು ಹಿಂತಿರುಗಿಸಲು ಅಥವಾ ಬದಲಾಯಿಸಲು ಆತುರಪಡಬಾರದು ಎಂದು ಹೇಳಿದ್ದಾರೆ.

“ಈಗ ಬ್ಯಾಂಕ್‌ಗಳಿಗೆ ಧಾವಿಸಲು ಯಾವುದೇ ಕಾರಣವಿಲ್ಲ. ನಿಮಗೆ ಸೆಪ್ಟೆಂಬರ್ 30 ರವರೆಗೆ ನಾಲ್ಕು ತಿಂಗಳುಗಳಿವೆ” ಎಂದು ಆರ್‌ಬಿಐ ಗವರ್ನರ್ ಹೇಳಿದರಲ್ಲದೇ, ಗಡುವನ್ನು ಮುಖ್ಯವಾಗಿ ನೀಡಲಾಗಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ
ಪರಿಗಣಿಸುತ್ತಾರೆ. ನೋಟುಗಳನ್ನು ಹಿಂತಿರುಗಿಸಲು ಪ್ರಯತ್ನಿಸುತ್ತಾರೆ. ಆರ್ಥಿಕತೆಯ ಮೇಲೆ ಹಿಂತೆಗೆದುಕೊಳ್ಳುವಿಕೆಯ ಪರಿಣಾಮವು “ಅತ್ಯಂತ ಕಡಿಮೆ” ಎಂದು ಅವರು ಪ್ರತಿಪಾದಿಸಿದರು.

2,000 ರೂ. ನೋಟುಗಳಲ್ಲಿ ಶೇಕಡ 89 ರಷ್ಟು ನೋಟುಗಳನ್ನು ಮಾರ್ಚ್ 2017 ರ ಮೊದಲು ನೀಡಲಾಯಿತು. ನಾಲ್ಕರಿಂದ ಐದು ವರ್ಷಗಳ ಅಂತ್ಯದಲ್ಲಿ ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. “ಮಾರ್ಚ್ 31, 2018 ರಂತೆ ಚಲಾವಣೆಯಲ್ಲಿರುವ ಈ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಇಳಿದಿದೆ (ಚಲಾವಣೆಯಲ್ಲಿರುವ ನೋಟುಗಳ 37.3%) ಮಾರ್ಚ್ 31 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment