ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದರು. ಪದವಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಶ್ವಿನ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು.ಈ ವೇದಿಕೆಗೆ ಆಗಮಿಸಿದ್ದ ಅಶ್ವಿನ್, ಸಭಿಕರಲ್ಲಿ ಪ್ರಶ್ನೆಯನ್ನು ಕೇಳಿದರು.
ಇಲ್ಲಿ ಎಷ್ಟು ಜನ ಇಂಗ್ಲಿಷ್ ಮಾತನಾಡುತ್ತಾರೆ? ಎಂದು ಮೊದಲ ಪ್ರಶ್ನೆ ಕೇಳಿದರು. ವೇದಿಕೆ ಮುಂಭಾಗದಲ್ಲಿದ್ದ ಸಭಿಕರು ಕೈಎತ್ತಿದ್ದಾರೆ. ಅದೇ ರೀತಿ ಎಷ್ಟು ಜನ ತಮಿಳು ಮಾತನಾಡುತ್ತಾರೆ? ಎಂದು ಕೇಳಿದ್ದಾರೆ. ಆಗ ಇಡೀ ಸಭಾಂಗಣ ಪ್ರತಿಧ್ವನಿಸಿದೆ. ನಂತರ ‘ಎಷ್ಟು ಜನ ಹಿಂದಿ ಮಾತನಾಡುತ್ತಾರೆ? ಎಂದಿದ್ದಾರೆ. ಆಗ ಸಭಾಂಗಣದಲ್ಲಿ ಮೌನ ಆವರಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್ ‘ಹಿಂದಿ ರಾಷ್ಟ್ರಭಾಷೆಯಲ್ಲ; ಅಧಿಕೃತ ಭಾಷೆ’ ಎಂದಿದ್ದಾರೆ.
ಅಶ್ವಿನ್ ಅವರ ಈ ಹೇಳಿಕೆಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್ ಅಶ್ವಿನ್ ಯಾವುದೇ ಭಾಷೆಯ ಬಗ್ಗೆ ಇಂತಹ ಮಾತುಗಳನ್ನು ಹೇಳಬಾರದು ಎಂದಿದ್ದಾರೆ.